ನವದೆಹಲಿ: ಕೊಲೊಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್ಗೆ ಅಮೆರಿಕದ ಇಂಟರ್ನ್ಯಾಷನ್ ಡೆವಲ್ಮೆಂಟಮ್ ಫೈನಾನ್ಸ್ ಕಾರ್ಪೋರೇಷನ್ (ಡಿಎಫ್ಸಿ) 553 ಮಿಲಿಯನ್ ಡಾಲರ್ ಧನ ಸಹಾಯ ನೀಡಿದೆ. ಇದು ಭಾರತದ ಅತಿದೊಡ್ಡ ಬಂದರು ನಿರ್ವಹಾಕ ಅದಾನಿ ಪೋರ್ಟ್ಸ್ ಮತ್ತು ಶ್ರೀಲಂಕಾದ ಪ್ರಮುಖ ಉದ್ಯಮಿ ಜಾನ್ ಕೆಲ್ಸ್ ಹೋಲ್ಡಿಂಗ್, ಎಸ್ಇಜೆಡ್ ಲಿಮಿಡೆಡ್ ಮತ್ತು ಶ್ರೀಲಂಕಾ ಬಂದರು ಪ್ರಾಧಿಕಾರದ ಯೋಜನೆಯಾಗಿದೆ.
ಡಿಎಫ್ಸಿ ಅಮೆರಿಕ ಸರ್ಕಾರದ ಅಭಿವೃದ್ಧಿ ಆರ್ಥಿಕ ಸಂಸ್ಥೆಯಾಗಿದೆ. ಕೊಲೊಂಬೊದಲ್ಲಿನ ಬಂದರಿನಲ್ಲಿ ನೀರಿನಾಳದ ಶಿಪಿಂಗ್ ಕಂಟೈನರ್ ಟರ್ಮಿನಲ್ಗಳ ಅಭಿವೃದ್ಧಿಗೆ ಯುಎಸ್ ನಿಧಿಯು ಸಹಾಯ ಮಾಡುತ್ತದೆ ಎಂದು ಅದಾನಿ ಬಂದರು ಮತ್ತು ಸ್ಪೆಷನ್ ಎಕಾನಾಮಿಕ್ ಜೋನ್ ಲಿಮಿಡೆಟ್ (ಎಪಿಎಸ್ಇಜೆಡ್) ಈ ಕುರಿತು ಹೇಳಿಕೆ ನೀಡಿದೆ. ಖಾಸಗಿ ವಲಯದ ಬೆಳವಣಿಗೆ ಸೌಲಭ್ಯ ಮತ್ತು ಆರ್ಥಿಕ ಪುನಶ್ಚೇತನ ಜೊತೆಗೆ ಶ್ರೀಲಂಕಾದ ಆರ್ಥಿಕ ಚೇತರಿಕೆಗೆ ಸಹಾಯ ಮಾಡಲು ನಿರ್ಣಾಯಕ ವಿದೇಶಿ ವಿನಿಮಯವನ್ನು ಆಕರ್ಷಿಸುತ್ತದೆ. ಅಮೆರಿಕ, ಶ್ರೀಲಂಕಾ ಮತ್ತು ಭಾರತದವು ಸ್ಮಾರ್ಟ್ ಮತ್ತು ಹಸಿರು ಬಂದರುಗಳಂತಹ ಸುಸ್ಥಿರ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಸಹಕಾರವನ್ನು ಪೋಷಿಸುತ್ತದೆ ಎಂದು ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಡಿಎಫ್ಸಿ ಖಾಸಗಿ ವಲಯದ ಸಹಾಭಾಗಿತ್ವವು ವಿಶ್ವದಲ್ಲಿನ ಅಭಿವೃದ್ಧಿಯಲ್ಲಿ ಎದುರಾಗುವ ನಿರ್ಣಾಯಕ ಸವಾಲುಗಳ ಎದುರಿಸಲು ಆರ್ಥಿಕ ಸಹಾಯ ಒದಗಿಸುತ್ತದೆ. ಇದು ಶಕ್ತಿ, ಆರೋಗ್ಯ ಸೇವೆ, ಮೂಲ ಸೌಕರ್ಯ, ಕೃಷಿ ಮತ್ತು ಸಣ್ಣ ಉದ್ದಿಮೆ ಮತ್ತು ಹಣಕಾಸಿನ ಸೇವೆಗಳಂತಹ ಹಲವು ವಲಯದಲ್ಲಿ ಹೂಡಿಕೆ ಮಾಡುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕ ಸರ್ಕಾರ ಇದರ ಒಂದು ಏಜೆನ್ಸಿ ಮೂಲಕ ಅದಾನಿ ಪ್ರಾಜೆಕ್ಟ್ಗೆ ಹೂಡಿಕೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಮೆರಿಕ ಸರ್ಕಾರದ ಅಭಿವೃದ್ಧಿ ಹಣಕಾಸು ಸಂಸ್ಥೆ ಡಿಎಫ್ಸಿ ಅದಾನಿ ಯೋಜನೆಗೆ ಫಂಡಿಂಗ್ ಮಾಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಈ ಯೋಜನೆ ಸಂಪೂರ್ಣವಾದ ಬಳಿಕ ಕೊಲೊಂಬೊ ವೆಸ್ಟ್ ಇಂಟರ್ನ್ಯಾಷನಲ್ ಪ್ರೊಜೆಕ್ಟ್ ಸಾಮಾಜಿಕ ಆರ್ಥಿಕ ಭೂ ದೃಶ್ಯವಾಗಲಿದೆ. ಇದು ಕೇವಲ ಕೊಲೊಂಬೊಗೆ ಮಾತ್ರವಲ್ಲ, ದ್ವೀಪದೆಲ್ಲೆಡೆ ಇದು ನೇರ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡಲಿದೆ. ಇದು ಶ್ರೀಲಂಕಾದ ವ್ಯಾಪಾರ ಮತ್ತು ವಾಣಿಜ್ಯದ ಆರ್ಥಿಕ ವ್ಯವಸ್ಥೆಗೆ ಪ್ರೋತ್ಸಾಹಿಸಲಿದೆ ಎಂದಿದ್ದಾರೆ.
ಹಿಂದೂ ಮಹಾಸಾಗರದಲ್ಲಿನ ಅತ್ಯಂತ ದೊಡ್ಡದಾದ ಮತ್ತು ಬ್ಯುಸಿಯಾದ ಟ್ರಾನ್ಸ್ಶಿಪ್ಮೆಂಟ್ ಬಂದರು ಈ ಕೊಲೊಂಬೊ ಬಂದಾರಾಗಿದೆ. 2021ರಿಂದ ಶೇ90ರಷ್ಟು ಬಳಕೆಯೊಂದಿಗೆ ಇದು ಕಾರ್ಯ ನಿರ್ವಹಣೆ ಮಾಡುತ್ತಿದೆ. ಹೆಚ್ಚುವರಿ ಸಾಮರ್ಥ್ಯಕ್ಕಾಗಿ ಅಗತ್ಯ ಸಿಗ್ನಲಿಂಗ್ ಮಾಡುತ್ತಿದೆ. ಹೊಸ ಟರ್ಮಿನಲ್ ಪಶ್ಚಿಮ ಬಂಗಾಳದ ಬೆಳೆಯುತ್ತಿರುವ ಆರ್ಥಿಕತೆಗೆ ಬೆಂಬಲ ನೀಡಲಿದೆ.
ಶ್ರೀಲಂಕಾವೂ ಜಗತ್ತಿನ ಸಾಗಣೆಯ ಪ್ರಮುಖ ಕೇಂದ್ರವಾಗಿದೆ. ಅರ್ಧದಷ್ಟು ಹಡಗುಗಳು ಸಾಗಣೆ ಈ ನೀರಿನ ಮಾರ್ಗವಾಗಿ ನಡೆಯಲಿದೆ. ವೆಸ್ಟ್ ಕಂಟೈನರ್ ಟರ್ಮಿನಲ್ನ ಶಿಪ್ಪಿಂಗ್ ಸಾಮರ್ಥ್ಯವನ್ನು ವಿಸ್ತರಿಸಲು ಡಿಎಫ್ಸಿ 553 ಮಿಲಿಯನ್ ಅಮೆರಿಕ ಡಾಲರ್ ಅನ್ನು ಖಾಸಗಿ ವಲಯಕ್ಕೆ ಸಾಲವಾಗಿ ನೀಡುತ್ತಿದೆ ಎಂದು ಡಿಎಫ್ಸಿ ಸಿಒಪ ಸ್ಕಾಟ್ ನಥನ್ ತಿಳಿಸಿದ್ದಾರೆ. (ಪಿಟಿಐ)
ಇದನ್ನೂ ಓದಿ: ಜನವರಿ 2024ರೊಳಗೆ ಟೆಸ್ಲಾ ಕಾರು ಭಾರತದಲ್ಲಿ ರಸ್ತೆಗಿಳಿಯುವ ಸಾಧ್ಯತೆ