ETV Bharat / business

ಮಾರುಕಟ್ಟೆಗೆ ಬರಲಿದೆ ನೂತನ ಅಪಾಚೆ ಆರ್​ಟಿಆರ್-200​: ಬೆಲೆ ಕೇವಲ___ಇಷ್ಟೇ!!

ಮಾರುಕಟ್ಟೆಯಲ್ಲಿ ಈಗಾಗಲೇ ಟಿವಿಎಸ್​ ಕಂಪನಿಯ ವಿವಿಧ ರೀತಿಯ ಅಪಾಚೆ ಆರ್​​ಟಿಆರ್​ ಬೈಕ್​ಗಳು ಚಾಲ್ತಿಯಲ್ಲಿವೆ. ಈ ಎಲ್ಲ ಬೈಕ್​ಗಳು ಸ್ಪೋರ್ಟ್ಸ್​​​ ವರ್ಷನ್​ ಆಗಿದ್ದು, ಇದೀಗ ನೂತನ ಆವೃತ್ತಿಯ ಮತ್ತೊಂದು ಸ್ಪೋರ್ಟ್ಸ್​​​ ಬೈಕನ್ನು ಟಿವಿಎಸ್​ ಕಂಪನಿ ಬಿಡುಗಡೆ ಮಾಡಿದೆ.

Apache RTR 200
ಅಪಾಚೆ ಆರ್​ಟಿಆರ್-200
author img

By

Published : Nov 4, 2020, 3:41 PM IST

ನವದೆಹಲಿ: ಟಿವಿಎಸ್ ಮೋಟಾರ್ ಬೈಕ್​ ಕಂಪನಿಯ ಪೈಕಿ ಅಪಾಚೆ ಆರ್​​ಟಿಆರ್​ ಸ್ಪೋರ್ಟ್ಸ್​​​ ಬೈಕ್ ತನ್ನದೇ ಆದ ಛಾಪು ಮೂಡಿಸಿದ್ದು, ಇದೀಗ​ ಆರ್‌ಟಿಆರ್-200, 4V ಎಂಬ ಹೊಸ ಆವೃತ್ತಿಯನ್ನು 1.31 ಲಕ್ಷ ರೂ.ಗೆ (ದೆಹಲಿಯ ಎಕ್ಸ್‌ಶೋರೂಂ ಬೆಲೆ) ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಪಾಚೆ ಆರ್​ಟಿಆರ್​​ ಬೈಕ್​ಗಳ ಪೈಕಿ ಈಗಾಗಲೇ 160, 180, 200 ಸಿಸಿ ಬೈಕ್​​ಗಳು ಚಾಲ್ತಿಯಲ್ಲಿದ್ದು, ಈ ನೂತನ ಆವೃತ್ತಿಯ​ 200 - ಸಿಸಿ ಬೈಕ್​​ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ. ಬೈಕರ್​ಗೆ ಅನುಕೂಲವಾಗುವಂತೆ ಸ್ಪೋರ್ಟ್, ಅರ್ಬನ್ ಹಾಗೂ ರೈನ್​ ಮೋಡ್​​ಗಳನ್ನು ಬಳಸಬಹುದಾಗಿದೆ ಎಂದು ಕಂಪನಿ ಹೇಳಿದೆ.

ಅಪಾಚೆ ಆರ್​​ಟಿಆರ್​​, ಇದೊಂದು ಸ್ಪೋರ್ಟ್ಸ್​​​​ ಸರಣಿಯ ಬೈಕ್​ ಆಗಿದ್ದು, 2005 ರಲ್ಲಿ 160 ಸಿಸಿ ಬೈಕ್​​ಗಳೊಂದಿಗೆ ಪ್ರಾರಂಭಗೊಂಡಿತು. ನಮ್ಮ ಗ್ರಾಹಕರು ಮತ್ತು ಬೈಕ್​​ ರೇಸಿಂಗ್ ಪ್ರಿಯರು ನಮ್ಮ ಈ ಆರ್​ಟಿಆರ್​ ಬೈಕ್​ಗಳನ್ನು ಅತಿ ಹೆಚ್ಚಾಗಿ ಬಳಸುತ್ತಿರುವುದೇ ನಮ್ಮ ಬೈಕ್​ಗಳ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಟಿವಿಎಸ್ ಮೋಟಾರ್ ಕಂಪನಿಯ ಮಾರ್ಕೆಟಿಂಗ್​​ ಮುಖ್ಯಸ್ಥ ಮೇಘಶ್ಯಾಮ್ ಡಿಘೋಲ್ ಹೇಳಿದ್ದಾರೆ.

ಅಪಾಚೆ ಪ್ರಾರಂಭಗೊಂಡಾಗಿನಿಂದಲೂ ಇಲ್ಲಿಯವರೆಗೆ, ಒಂದಲ್ಲಾ ಮತ್ತೊಂದು ವಿವಿಧ ರೀತಿಯ ಫೀಚರ್​ಗಳನ್ನು ಬೈಕ್​​ಗಳಲ್ಲಿ ನೀಡಲಾಗುತ್ತಿದೆ. ಅದರಂತೆ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ - 200 4V ಬೈಕ್​ನಲ್ಲಿಯೂ ಸಹ ವಿಶಿಷ್ಠ ಗುಣ ಲಕ್ಷಣಗಳನ್ನು ಅಳವಡಿಸಲಾಗಿದ್ದು, ಬೈಕ್​ ಪ್ರಿಯರಿಗೆ ಇದೊಂದು ಅಚ್ಚುಮೆಚ್ಚಿನ ಬೈಕ್​ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಡಿಘೋಲ್ ತಿಳಿಸಿದ್ದಾರೆ.

ಈ ನೂತನ ಆರ್​ಟಿಆರ್​ ಬೈಕ್​ ಡ್ಯುಯಲ್ ಚಾನೆಲ್ ಎಬಿಎಸ್ ಬ್ರೇಕಿಂಗ್​ ಸಿಸ್ಟಮ್​ ಹೊಂದಿದ್ದು, ಅತ್ಯಾಧುನಿಕ ಬ್ರೇಕಿಂಗ್​​ ಕಾರ್ಯಕ್ಷಮತೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ, ಆದಲ್ಲದೇ ಹೊಂದಿಸಿಕೊಳ್ಳಬಹುದಾದ ಸಸ್​​ಪೆನ್ಷನ್​ ಕೂಡ ಈ ಬೈಕ್​ನಲ್ಲಿ ಅಳವಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.