ನವದೆಹಲಿ: ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ ಹೊಸ ಶ್ರೇಣಿಯ ಮಧ್ಯಂತರ ಮತ್ತು ಲಘು ವಾಣಿಜ್ಯ ಟ್ರಕ್ ಬಿಡುಗಡೆ ಮಾಡಿದೆ.
ಅಲ್ಟ್ರಾ ಸ್ಲೀಕ್ ಟಿ-ಸೀರೀಸ್ ಸರಕು ಸಾಗಣೆ ವಾಹನವು ದೇಶದಲ್ಲಿ ಹೆಚ್ಚುತ್ತಿರುವ ಮಿನಿ ಟ್ರಕ್ಗಳ ಬೇಡಿಕೆಯನ್ನು ಪೂರೈಸುತ್ತದೆ. ವೇಗವಾಗಿ ಆರ್ಥಿಕ ಚೇತರಿಕೆ ವಾಣಿಜ್ಯ ವಾಹನಗಳ ಬೇಡಿಕೆಯನ್ನು ದ್ವಿಗುಣಗೊಳಿಸಲಿದೆ ಎಂದು ಟಾಟಾ ಮೋಟಾರ್ಸ್ ಅಭಿಪ್ರಾಯಪಟ್ಟಿದೆ.
ನಾವು ಕ್ರಮೇಣ ಆರ್ಥಿಕ ಚೇತರಿಕೆ ಕಾಣುತ್ತಿದ್ದೇವೆ. ಹೆಡ್ಲೈನ್ ಸಂಖ್ಯೆಗಳು ಈ ಚೇತರಿಕೆಯತ್ತ ಗಮನ ಹರಿಸುತ್ತಿವೆ ಎಂದು ಟಾಟಾ ಮೋಟಾರ್ಸ್ನ ವಾಣಿಜ್ಯ ವಾಹನ ವ್ಯವಹಾರ ಘಟಕದ ಅಧ್ಯಕ್ಷ ಗಿರೀಶ್ ವಾಘ್ ಹೇಳಿದ್ದಾರೆ
ಈ ಟ್ರಕ್‌ಗಳು ಗ್ರಾಮೀಣ ಮತ್ತು ನಗರ ಬೇಡಿಕೆಯ ಏರಿಕೆ ಮಾಡಲಿವೆ ಎಂದು ಆಶಿಸಿ ಕಂಪನಿಯು ಗುರುವಾರ ನಗರ ಹಾಗೂ ಗ್ರಾಮೀಣ ಸಾರಿಗೆ ಅಲ್ಟ್ರಾ ಸ್ಲೀಕ್ ಟಿ-ಸರಣಿಯ ಟ್ರಕ್‌ಗಳನ್ನು ಬಿಡುಗಡೆ ಮಾಡಿತು.
ಈ ಟ್ರಕ್‌ಗಳು ಮೂರು ಮಾದರಿಗಳಲ್ಲಿ ಲಭ್ಯವಿದೆ. 10 ರಿಂದ 20 ಅಡಿಗಳ ತನಕ ವೈವಿಧ್ಯಮಯ ಡೆಕ್ ಉದ್ದ ಹೊಂದಿದ್ದು, ಟಿ 6, ಟಿ 7 ಮತ್ತು ಟಿ 9 ಹೆಸರಿನಡಿ ಭಾರತೀಯ ರಸ್ತೆಗೆ ಇಳಿಯಲಿವೆ.
ಇದನ್ನೂ ಓದಿ: ಬೈಡನ್ ಆ ಒಂದು ಸಹಿಗೆ ಮುಂಬೈ ಪೇಟೆಯಲ್ಲಿ ಗೂಳಿ ತಕಧಿಮಿತ!
ಅಲ್ಟ್ರಾ ಸ್ಲೀಕ್ ಟಿ-ಸೀರೀಸ್ 4-ಟೈರ್ ಮತ್ತು 6-ಟೈರ್ ಜೋಡಣೆ ಹೊಂದಿವೆ. ನಾನಾ ಡೆಕ್ ಉದ್ದನೆ ಸಹ ಹೊಂದಿವೆ. ಈ ಶ್ರೇಣಿಯನ್ನು ವೈವಿಧ್ಯಮಯ ಸಾರಿಗೆ ಅಗತ್ಯಗಳಿಗೆ ಅನುಗುಣವಾಗಿ ಪರಿಚಯಿಸಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಇ - ಕಾಮರ್ಸ್ ಉತ್ಪನ್ನಗಳ ಸಾಗಣೆ, ಎಫ್‌ಎಂಸಿಜಿ, ಕೈಗಾರಿಕಾ ವಸ್ತುಗಳು, ಹಾಲು ಮತ್ತು ತಾಜಾ ಕೃಷಿ ಉತ್ಪನ್ನಗಳು, ಸಿಲಿಂಡರ್ ಮತ್ತು ಕೋವಿಡ್ -19 ಲಸಿಕೆ, ಔಷಧೀಯ ವಸ್ತುಗಳು ಮತ್ತು ಮೊಟ್ಟೆಗಳಂತಹ ಆಹಾರ ಪದಾರ್ಥಗಳ ಸಾಗಣೆಗೆ ಅನುಕೂಲಕರವಾಗಿವೆ.
ಹೊಸ ಟ್ರಕ್ ಶ್ರೇಣಿಯು ಬಿಎಸ್- 6 4 ಎಸ್‌ಪಿಸಿಆರ್ ಇಂಜಿನ್ನಿಂದ ನಿಯಂತ್ರಿತವಾಗಿದೆ. 100 ಎಚ್‌ಪಿ ಶಕ್ತಿ ಮತ್ತು ಟಾರ್ಕ್ ರೇಟಿಂಗ್ 300 ಎನ್ಎಂ ಹೊಂದಿದೆ. ಈ ಶ್ರೇಣಿಯು ಅತ್ಯುತ್ತಮ ಶಕ್ತಿ ಮತ್ತು ಉತ್ತಮ ಗುಣಮಟ್ಟದ ಇಂಧನ ದಕ್ಷತೆ ಒದಗಿಸುತ್ತದೆ.