ನವದೆಹಲಿ: ಹೀರೋ ಮೊಟೊಕಾರ್ಪ್, ಮಹೀಂದ್ರಾ, ಮಾರುತಿ ಬಳಿಕ ಆಟೋ ದೈತ್ಯ ಟಾಟಾ ಮೋಟಾರ್ಸ್ 2021ರ ಜನವರಿಯಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಳ ಮಾಡುವುದಾಗಿ ತಿಳಿಸಿದೆ.
2021ರ ಜನವರಿ 01ರಿಂದ ಜಾರಿಗೆ ಬರುವಂತೆ ಎಲ್ಲಾ ವಾಣಿಜ್ಯ ವಾಹನಗಳ ಬೆಲೆಯಲ್ಲಿ ಹೆಚ್ಚಳ ಕಂಡುಬರಲಿದೆ. ಇನ್ಪುಟ್ ವೆಚ್ಚದ ಏರಿಕೆಯಿಂದಾಗಿ ದರ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳಲಾಗಿದೆ ಟಾಟಾ ಮೋಟರ್ಸ್ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಇಲ್ಲಿ ತನಕ 3.75 ಕೋಟಿ ಇನ್ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲ್: ತೆರಿಗೆ ಕಟ್ಟೊಕ್ಕೆ ಡಿ.__ ಕಡೇ ದಿನ
ಸರಕು ಮತ್ತು ಇತರ ಇನ್ಪುಟ್ ವೆಚ್ಚಗಳಲ್ಲಿನ ಸ್ಥಿರ ಏರಿಕೆ, ವಿದೇಶೀ ವಿನಿಮಯ ಪ್ರಭಾವ ಮತ್ತು ಬಿಎಸ್ 6 ಮಾನದಂಡಗಳಿಗೆ ವಾಹನಗಳ ಪರಿವರ್ತನೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಅನಿವಾರ್ಯವಾಗಿ ದರ ಹೆಚ್ಚಳದ ಮೊರೆ ಹೋಗಬೇಕಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದೆ.