ಮುಂಬೈ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಂದು ಲಾಭದೊಂದಿಗೆ ಕೊನೆಗೊಂಡಿವೆ.
ಬೆಳಗ್ಗೆ ಧನಾತ್ಮಕವಾಗಿ ಪ್ರಾರಂಭವಾದ ಸೂಚ್ಯಂಕಗಳು ಒಂದು ಹಂತದಲ್ಲಿ ನಷ್ಟಕ್ಕೆ ಇಳಿದವು. ಆದರೂ ಅವು ಶೀಘ್ರವಾಗಿ ಚೇತರಿಸಿಕೊಂಡು, ಲಾಭದ ಹಳಿಗೆ ಮರಳಿದವು. ಅಂತಿಮವಾಗಿ, ಸೆನ್ಸೆಕ್ಸ್ 111 ಅಂಕ ಗಳಿಸಿ 50,651 ಅಂಕಗಳಿಗೆ ಮತ್ತು ನಿಫ್ಟಿ 22 ಅಂಕ ಏರಿಕೆ ಕಂಡು 15,197 ಅಂಕಗಳಿಗೆ ತಲುಪಿದೆ. ನಿನ್ನೆ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 72.93 ರೂ.ಗೆ ತಲುಪಿದೆ.
ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾದಂತೆ ಮತ್ತು ಲಸಿಕೆ ಉತ್ಪಾದನೆ ಹೆಚ್ಚಿಸುವ ಪ್ರಯತ್ನಗಳು ಚುರುಕುಗೊಂಡಂತೆ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಭಾವನೆ ಸುಧಾರಿಸಿತು.
ಪ್ರಮುಖ ವಲಯಗಳ ಷೇರುಗಳು ಸೂಚ್ಯಂಕಗಳನ್ನು ಬೆಂಬಲಿಸಿದವು. ಈ ಹಿನ್ನೆಲೆಯಲ್ಲಿಯೇ ಇಂದು ಸೂಚ್ಯಂಕಗಳು ಲಾಭದಲ್ಲಿ ಸಾಗುತ್ತಿವೆ. ಕೊರೊನಾದ ಜೊತೆಗೆ ಕಪ್ಪು ಶಿಲೀಂಧ್ರ ಪ್ರಕರಣಗಳ ಹೊರ ಹೊಮ್ಮುವಿಕೆಯು ಸೂಚ್ಯಂಕಗಳಲ್ಲಿನ ಲಾಭವನ್ನು ಸ್ವಲ್ಪಮಟ್ಟಿಗೆ ಮೊಟಕುಗೊಳಿಸಿದೆ. ಏಷ್ಯಾದ ಸೂಚ್ಯಂಕಗಳು ಇಂದು ಜಾಗರೂಕತೆಯಿಂದ ಸಾಗಿವೆ.
ಇಂಡಸ್ಇಂಡ್ ಬ್ಯಾಂಕ್, ಎಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್ಸ್, ಎಂ & ಎಂ, ಏಷ್ಯನ್ ಪೆಯಿಂಟ್ಸ್, ಟಿಸಿಎಸ್, ರಿಲಯನ್ಸ್ ಮತ್ತು ನೆಸ್ಲೆ ಇಂಡಿಯಾ ಬಿಎಸ್‌ಇ 30 ಸೂಚ್ಯಂಕದಲ್ಲಿ ಟಾಪ್ ಲೂಸರ್ಗಳಾದರು. ಎಸ್‌ಬಿಐ, ಪವರ್ ಗ್ರಿಡ್ ಕಾರ್ಪೊರೇಷನ್, ಎಲ್ & ಟಿ, ಎಚ್‌ಡಿಎಫ್‌ಸಿ, ಮಾರುತಿ, ಡಾ.ರೆಡ್ಡಿಸ್ ಲ್ಯಾಬ್ಸ್ ಮತ್ತು ಸನ್ ಫಾರ್ಮಾ ಷೇರುಗಳು ಟಾಪ್ ಗೇನರ್ಗಳಾದರು.