ಮುಂಬೈ: ಕಳೆದ ಕೆಲವು ದಿನಗಳಿಂದ ಹೂಡಿಕೆದಾರರಿಗೆ ಹೊಸ ಹುರುಪು ತಂದಿದ್ದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೂಚ್ಯಂಕ ಸೆನ್ಸೆಕ್ಸ್ 550 ಅಂಶ ಹಾಗೂ ನಿಫ್ಟಿ 50 ಅಂಶ ಕುಸಿತ ಕಂಡಿದೆ. ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯ ಭಾರಿ ನಷ್ಟ ಅನುಭವಿಸಿದೆ.
ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಕಳೆದ ವಾರ ವಿತ್ತ ಸಚಿವೆ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಿದ್ದರು. ಇದು ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿತ್ತು. ಆದರೆ ಇಂದಿನ ವಹಿವಾಟು ಹೂಡಿಕೆದಾರರ ಆತಂಕ ಹೆಚ್ಚಿಸಿತು.
ಇಂದಿನ ವಹಿವಾಟು ಕುಸಿತಕ್ಕೆ ಅಮೆರಿಕದ ಕೆಲ ನಡೆಗಳು ಭಾರಿ ಪರಿಣಾಮ ಬೀರಿದೆ. ಅಮೆರಿಕದಲ್ಲಿನ ಸಂಸದರು ಟ್ರಂಪ್ ಮೇಲೆ ದೋಷಾರೋಪ ವಿಚಾರಣೆಗೆ ಆಗ್ರಹ, ಜಾಗತಿಕ ಅರ್ಥವ್ಯವಸ್ಥೆಯ ಅಸ್ಥಿರತೆ, ಚೀನಾ-ಅಮೆರಿಕ ವಾಣಿಜ್ಯ ಯುದ್ಧದ ಭೀತಿ ಇಂದಿನ ವಹಿವಾಟನ್ನು ಕೊಂಚ ವಿಚಲಿತ ಮಾಡಿದೆ.
ಇಂದಿನ ವಹಿವಾಟಿನಲ್ಲಿ ಎಸ್ಬಿಐ ಕಳೆದ ಮೂರು ವರ್ಷದಲ್ಲೇ ಅತಿದೊಡ್ಡ ಹಿನ್ನಡೆ ಅನುಭವಿಸಿದೆ. ಇದರ ಹೊರತಾಗಿ ಟಾಟಾ ಮೋಟರ್ಸ್, ಮಹೀಂದ್ರ & ಮಹೀಂದ್ರ, ಟಾಟಾ ಸ್ಟೀಲ್ ಹಾಗೂ ಹೆಚ್ಡಿಎಫ್ಸಿ ಷೇರುಗಳು ಕುಸಿತವಾಗಿವೆ.