ETV Bharat / business

ಸತತ 10 ದಿನಗಳ ಬಳಿಕ ಓಟ ನಿಲ್ಲಿಸಿದ ಗೂಳಿ: ವರ್ಷದಲ್ಲಿ ಮೊದಲ ಬಾರಿಗೆ ಕುಸಿದ ಸೆನ್ಸೆಕ್ಸ್​ - ಬಿಎಸ್​ಇ ಸೆನ್ಸೆಕ್ಸ್

ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಅಂತರ ದಿನದ ಗರಿಷ್ಠ 48,616.66 ಅಂಕಗಳಿಗೆ ಮುಟ್ಟಿದ ನಂತರ, ಬಿಎಸ್‌ಇ ಸೂಚ್ಯಂಕವು 263.72 ಅಂಕ ಅಥವಾ ಶೇ 0.54ರಷ್ಟು ಕುಸಿದು 48,174.06 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಈ ಮೂಲಕ ಕಳೆದ 10 ದಿನಗಳ ಏರುಮುಖವಾಗಿದ್ದ ಸೂಚ್ಯಂಕ 2021ರಲ್ಲಿ ಮೊದಲ ಬಾರಿಗೆ ಕೆಳಮುಖ ಕಂಡಿದೆ.

Sensex
ಸೆನ್ಸೆಕ್ಸ್​
author img

By

Published : Jan 6, 2021, 6:46 PM IST

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಮತ್ತು ಇನ್ಫೋಸಿಸ್​ ಷೇರುಗಳ ನಷ್ಟದಿಂದಾಗಿ ಈಕ್ವಿಟಿ ಬೆಂಚ್​ಮಾರ್ಕ್ ಸೆನ್ಸೆಕ್ಸ್ ಬುಧವಾರದ ವಹಿವಾಟಿನಂದು 264 ಅಂಕಗಳ ಕುಸಿತ ದಾಖಲಿಸಿತು.

ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಅಂತರ ದಿನದ ಗರಿಷ್ಠ 48,616.66 ಅಂಕಗಳಿಗೆ ಮುಟ್ಟಿದ ನಂತರ, ಬಿಎಸ್‌ಇ ಸೂಚ್ಯಂಕವು 263.72 ಅಂಕ ಅಥವಾ ಶೇ 0.54ರಷ್ಟು ಕುಸಿದು 48,174.06 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ಈ ಮೂಲಕ ಕಳೆದ 10 ದಿನಗಳ ಏರು ಮುಖವಾಗಿದ್ದ ಸೂಚ್ಯಂಕ 2021ರಲ್ಲಿ ಮೊದಲ ಬಾರಿಗೆ ಕೆಳ ಮುಖಕಂಡಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 53.25 ಅಂಕ ಅಥವಾ ಶೇ 0.38ರಷ್ಟು ಕುಸಿದು 14,146.25 ಅಂಕಗಳ ಮಟ್ಟಕ್ಕೆ ತಲುಪಿತು. ಮಧ್ಯಂತರ ಅವಧಿಯಲ್ಲಿ ದಾಖಲೆಯ ಗರಿಷ್ಠ 14,244.15 ಅಂಕಗಳ ಮಟ್ಟಕ್ಕೆ ತಲುಪಿದ್ದರೂ ಕುಸಿತದಿಂದ ಪಾರಾಗಲಿಲ್ಲ.

ಇದನ್ನೂ ಓದಿ: ಫೆ.8ರಿಂದ ವಾಟ್ಸ್​ಆ್ಯಪ್​ನಲ್ಲಿ ಪರಿಷ್ಕೃತ ಗೌಪ್ಯ ನೀತಿ: ಈ ನಿಯಮ ಒಪ್ಪಿದರಷ್ಟೇ ಸೇವೆ ಮುಂದುವರಿಕೆ

ಸೆನ್ಸೆಕ್ಸ್ ವಿಭಾಗದಲ್ಲಿ ಐಟಿಸಿ ಅಗ್ರಸ್ಥಾನದಲ್ಲಿ ಮೌಲ್ಯ ಕಳೆದುಕೊಂಡಿದ್ದರೇ ನಂತರದ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಎಚ್‌ಯುಎಲ್ ಮತ್ತು ಎಚ್‌ಸಿಎಲ್ ಟೆಕ್ ಇವೆ. ಮತ್ತೊಂದೆಡೆ ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ದಿನದ ಟಾಪ್​ ಗೇನರ್​ಗಳಾದರು.

ದೇಶೀಯ ಷೇರುಗಳು ವ್ಯಾಪಕ ಚಂಚಲತೆಗೆ ಒಳಗಾದವು. ಇದರಲ್ಲಿ ಮುಖ್ಯವಾಗಿ ಜಾರ್ಜಿಯಾದ ಎರಡು ಸೆನೆಟ್ ಸ್ಥಾನಗಳಿಗೆ ಡೆಮೋಕ್ರಾಟ್‌ ಪರವಾಗಿ ನಡೆದ ಚುನಾವಣೆಯ ಫಲಿತಾಂಶ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಸ್ಟ್ರಾಟಜಿಸ್ಟ್​ ಬಿನೋದ್ ಮೋದಿ ಹೇಳಿದರು.

ಡೆಮೋಕ್ರಾಟ್​ಗಳಿಂದ ಸೆನೆಟ್ ನಿಯಂತ್ರಣವು ಅಮೆರಿಕದಲ್ಲಿ ಕಡಿಮೆ ತೆರಿಗೆ ದರಗಳನ್ನು ಹಿಮ್ಮುಖಗೊಳಿಸುವ ಸಾಧ್ಯತೆಯಿದೆ. ಇದು ಮಾರುಕಟ್ಟೆಯಲ್ಲಿ ಕೆಲವು ಚಂಚಲತೆ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಏಷ್ಯಾದ ಶಾಂಘೈ ಮತ್ತು ಹಾಂಗ್ ಕಾಂಗ್‌ನಲ್ಲಿನ ಪೇಟೆಗಳು ಸಕಾರಾತ್ಮಕವಾಗಿ ಕೊನೆಗೊಂಡರೆ, ಟೋಕಿಯೊ ಮತ್ತು ಸಿಯೋಲ್ ಕೆಂಪು ಬಣ್ಣದಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.