ETV Bharat / business

ಜಿಡಿಪಿ ಡೇಟಾ ಬಿಡುಗಡೆಗೂ ಮುನ್ನ ಮುಂಬೈ ಪೇಟೆಯಲ್ಲಿ ತಲ್ಲಣ... ಹೂಡಿಕೆದಾರರಿಗೆ 'ಬ್ಲಾಕ್​ ಫ್ರೈಡೇ' - ಸೆನ್ಸೆಕ್ಸ್​ ಕುಸಿತ

ಕಳೆದ ವಾರದಿಂದ ದಾಖಲೆಯ ಏರಿಕೆಯಲ್ಲಿದ್ದ ನಿಫ್ಟಿ ಮತ್ತು ಸೆನ್ಸೆಕ್ಸ್​ ಸೂಚ್ಯಂಕವು ನವೆಂಬರ್​ ತಿಂಗಳ ಕೊನೆಯ ಮತ್ತು ವಾರಾಂತ್ಯದ ಶುಕ್ರವಾರದ ವಹಿವಾಟಿನಲ್ಲಿ ಕ್ರಮವಾಗಿ 115.70 ಹಾಗೂ 385.11 ಅಂಶಗಳ ಇಳಿಕೆ ಕಂಡಿದೆ. ನಿನ್ನೆಯ ವಹಿವಾಟಿನಂದು 41,130.17 ಅಂಶಗಳಿಗೆ ಕೊನೆಗೊಂಡಿದ್ದ ಸೆನ್ಸೆಕ್ಸ್​, ಮಧ್ಯಾಹ್ನ 2.20ರ ವೇಳಗೆ 395.87 ಅಂಕಗಳ ಇಳಿಕೆ ಕಂಡು 40,734.30 ಅಂಶಗಳ ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು. ನಿಫ್ಟಿ ಕೂಡ 115.70 ಅಂಶಗಳ ಇಳಿಕೆಯೊಂದಿಗೆ 12,037 ಅಂಕಗಳಲ್ಲಿ ತನ್ನ ನಕರಾತ್ಮಕ ವ್ಯವಹಾರ ಮುಂದುವರಿಸಿತು.

Sensex
ಸೆನ್ಸೆಕ್ಸ್​
author img

By

Published : Nov 29, 2019, 3:08 PM IST

ಮುಂಬೈ: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ದತ್ತಾಂಶಗಳು ಬಿಡುಗಡೆ ಆಗುವ ಮುನ್ನವೇ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್​ ಮಹಾ ಕುಸಿತ ದಾಖಲಿಸಿದೆ.

ಕಳೆದ ವಾರದಿಂದ ದಾಖಲೆಯ ಏರಿಕೆಯಲ್ಲಿದ್ದ ನಿಫ್ಟಿ ಮತ್ತು ಸೆನ್ಸೆಕ್ಸ್​ ಸೂಚ್ಯಂಕವು ನವೆಂಬರ್​ ತಿಂಗಳ ಕೊನೆಯ ಮತ್ತು ವಾರಾಂತ್ಯದ ಶುಕ್ರವಾರದ ವಹಿವಾಟಿನಲ್ಲಿ ಕ್ರಮವಾಗಿ 115.70 ಹಾಗೂ 385.11 ಅಂಶಗಳ ಇಳಿಕೆ ಕಂಡಿದೆ.

ನಿನ್ನೆಯ (ಗುರುವಾರ) ವಹಿವಾಟಿನಂದು 41,130.17 ಅಂಶಗಳಿಗೆ ಕೊನೆಗೊಂಡಿದ್ದ ಸೆನ್ಸೆಕ್ಸ್​, ಮಧ್ಯಾಹ್ನ 2.20ರ ವೇಳಗೆ 395.87 ಅಂಕಗಳ ಇಳಿಕೆ ಕಂಡು 40,734.30 ಅಂಶಗಳ ಮಟ್ಟದಲ್ಲಿ ವಹಿವಾಟು ನಿರತವಾಗಿತ್ತು. ನಿಫ್ಟಿ ಕೂಡ 115.70 ಅಂಶಗಳ ಇಳಿಕೆಯೊಂದಿಗೆ 12,037 ಅಂಕಗಳಲ್ಲಿ ತನ್ನ ನಕರಾತ್ಮಕ ವ್ಯವಹಾರ ಮುಂದುವರಿಸಿತು.

ಅಮೆರಿಕ - ಚೀನಾ ವ್ಯಾಪಾರ ಒಪ್ಪಂದದ ಕಳವಳಗಳ ನಡುವೆ ಏಷ್ಯಾ ಷೇರುಪೇಟೆಗಳು ಕಡಿಮೆ ಮಟ್ಟದ ವಹಿವಾಟು ನಡೆಸಿದವು. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ನವೆಂಬರ್ ಎಫ್ & ಒ ಮುಕ್ತಾಯದ ದಿನದಂದು ವ್ಯಾಪಾರಿಗಳು ತಮ್ಮ ಲಾಭವನ್ನು ಕಾಯ್ದಿರಿಸುವ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿನ ನಿಧಾನಗತಿಯ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳು ಹೂಡಿಕೆದಾರರ ಮನೋಭಾವ ಕ್ಷೀಣಿಸಲು ಕಾರಣವಾಗಿದೆ. ಎರಡನೇ ತ್ರೈಮಾಸಿಕದ ಭಾರತದ ಜಿಡಿಪಿ ದತ್ತಾಂಶಗಳ ಶುಕ್ರವಾರ ಘೋಷಿಸುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದ ಮುಂಬೈ ಪೇಟೆಯಲ್ಲಿ ಕುಸಿತ ಕಂಡುಬಂದಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಭಾರ್ತಿ ಏರ್​ಟೆಲ್​ ಮತ್ತು ಎನ್​ಟಿಪಿಸಿ ಗರಿಷ್ಠ ಲಾಭ ಮಾಡಿಕೊಂಡರೇ ಎಚ್​ಸಿಎಲ್​ ಟೆಕ್​, ಕೋಟಕ್​​ ಬ್ಯಾಂಕ್, ಐಟಿಸಿ, ಇಂಡಸ್​ಲ್ಯಾಂಡ್ ಬ್ಯಾಂಕ್, ಮಾರುತಿ, ಎಚ್​ಡಿಎಫ್​ಸಿ ಬ್ಯಾಂಕ್, ಎಚ್​ಡಿಎಫ್​​ಸಿ, ಬಜಾಜ್​ ಫೈನಾನ್ಸ್​, ಇನ್ಫೋಸಿಸ್, ಟಿಸಿಎಸ್​, ಆಜಾಜ್ ಆಟೋ ಆ್ಯಕ್ಸಸ್​ ಬ್ಯಾಂಕ್​, ಟಾಟಾ ಮೋಟಾರ್ಸ್​ ಷೇರುಗಳು ಕುಸಿತ ಕಂಡವು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.