ಮುಂಬೈ: ಜಾಗತಿಕ ಪೇಟೆಗಳಲ್ಲಿ ಕಂಡು ಸಕಾರಾತ್ಮಕ ಪ್ರವೃತ್ತಿ ಮತ್ತು ಎಫ್‌ಪಿಐ ಒಳಹರಿವಿನ ಹೊರತಾಗಿಯೂ ದೇಶಿ ಪೇಟೆಯ ಅತಿದೊಡ್ಡ ಕಂಪನಿಗಳಾದ ಎಚ್‌ಡಿಎಫ್‌ಸಿ, ಕೊಟಾಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಷೇರು ಮೌಲ್ಯ ನಷ್ಟದಿಂದಾಗಿ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 100 ಅಂಕ ಕುಸಿತ ಕಂಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು 117.77 ಅಂಕ ಕುಸಿದು 49,151.55 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೇ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 20.95 ಅಂಕ ಇಳಿಕೆಯಾಗಿ 14,463.80 ಅಂಕಗಳ ಮಟ್ಟದಲ್ಲಿದೆ. ನಿನ್ನೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬಳಿಕ, ಇಂದು ಇಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.
ಸೆನ್ಸೆಕ್ಸ್ ವಿಭಾಗದಲ್ಲಿ ಇಂಡಸ್ಇಂಡ್ ಬ್ಯಾಂಕ್ ಶೇ 2ರಷ್ಟು ಕುಸಿತವಾಗಿದೆ. ಕೊಟಾಕ್ ಬ್ಯಾಂಕ್, ಟೈಟಾನ್, ಏಷ್ಯಾನ್ ಪೆಯಿಂಟ್ಸ್, ಬಜಾಜ್ ಆಟೋ, ಟೆಕ್ ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್, ಎಲ್ & ಟಿ, ಭಾರ್ತಿ ಏರ್ಟೆಲ್, ಐಟಿಸಿ, ಬಜಾಜ್ ಫಿನ್ಸರ್ವ್ ಮತ್ತು ಟಿಸಿಎಸ್ ಟಾಪ್ ಗೇನರ್ಗಳ ಸಾಲಿನಲ್ಲಿವೆ.
ಇದನ್ನೂ ಓದಿ: GST ನಷ್ಟ ಪರಿಹಾರ: 11ನೇ ಕಂತಿನಡಿ ರಾಜ್ಯಗಳಿಗೆ 6,000 ಕೋಟಿ ರೂ. ಬಿಡುಗಡೆ
ವಿನಿಮಯ ಮಾಹಿತಿಯ ಪ್ರಕಾರ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಸೋಮವಾರ 3,138.90 ಕೋಟಿ ರೂ. ಷೇರು ಖರೀದಿಸಿದ್ದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಖರೀದಿದಾರರಾಗಿದ್ದರು. ಏಷ್ಯಾದ ಶಾಂಘೈ, ಹಾಂಗ್ ಕಾಂಗ್ ಮತ್ತು ಟೋಕಿಯೊ ಪೇಟೆಗಳು ಲಾಭ ಗಳಿಸುತ್ತಿದ್ದರೆ, ಸಿಯೋಲ್ ಕೆಂಪು ಬಣ್ಣದಲ್ಲಿತ್ತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.05ರಷ್ಟು ಕಡಿಮೆಯಾಗಿ 55.63 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.