ಮುಂಬೈ: ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 365 ಅಂಕಗಳ ಕುಸಿತದೊಂದಿಗೆ ಆರಂಭವಾದ ಸೆನ್ಸೆಕ್ಸ್ ನಂತರ ಚೇತರಿಸಿಕೊಂಡಿದೆ. ಹತ್ತು ಗಂಟೆ ಸುಮಾರಿಗೆ 433 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 31,823 ಹಾಗೂ ನಿಫ್ಟಿ 124 ಅಂಕಗಳ ಏರಿಕೆಯೊಂದಿಗೆ 9,322 ರಲ್ಲಿ ವಹಿವಾಟು ನಡೆಸುತ್ತಿವೆ.
ಕೊರೊನಾ ವೈರಸ್ ಭೀತಿಯಿಂದ ಇಡೀ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿದ್ದು, ಬಹುತೇಕ ದೇಶಗಳ ಷೇರು ಮಾರುಕಟ್ಟೆಗಳು ನೆಲ ಕಚ್ಚಿವೆ. ಕೊರೊನಾ ವೈರಸ್ ಪರಿಣಾಮದಿಂದ ಭಾರತದ ಷೇರು ಮಾರುಕಟ್ಟೆಯ ಮೇಲೂ ಭಾರಿ ಪರಿಣಾಮ ಬೀರಿದೆ.
ಮಂಗಳವಾರ ಬೆಳಗ್ಗೆ 365 ಅಂಕಗಳ ಕುಸಿತದೊಂದಿಗೆ ಆರಂಭವಾದ ಸೆನ್ಸೆಕ್ಸ್ ಒಂದು ಗಂಟೆಯಲ್ಲಿ ಚೇತರಿಸಿಕೊಂಡಿದ್ದು ಸುಮಾರು 400 ಅಂಕಗಳ ಏರಿಕೆ ಕಂಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಕರಡಿ ಹಾಗೂ ಗೂಳಿ ಎರಡರ ಆಟವೂ ಭರ್ಜರಿಯಾಗಿ ಮುನ್ನಡೆದಿದೆ.