ಮುಂಬೈ: ಜಾಗತಿಕ ಮಾರುಕಟ್ಟೆಗಳ ಮಿಶ್ರ ಸೂಚನೆಗಳ ಮಧ್ಯೆಯೂ ಇಂಡೆಕ್ಸ್ ಮೇಜರ್ಗಳಾದ ಎಚ್‌ಡಿಎಫ್‌ಸಿ ಟ್ವಿನ್ಸ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಗಳಿಕೆಯೊಂದಿಗೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 500 ಅಂಕ ಏರಿಕೆ ಕಂಡಿದೆ.
ಬೆಳಗ್ಗೆ 11.41ರ ವೇಳೆಗೆ ಸೆನ್ಸೆಕ್ಸ್ 378.32 ಅಂಕ ಏರಿಕೆಯಾಗಿ 50,819 ಅಂಕಗಳ ಮಟ್ಟದಲ್ಲೂ ನಿಫ್ಟಿ 109 ಅಂಕ ಏರಿಕೆಯಾಗಿ 15,065 ಅಂಕಗಳ ಮಟ್ಟದಲ್ಲೂ ವಹಿವಾಟು ನಿರತವಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 2ರಷ್ಟು ಏರಿಕೆ ಕಂಡಿದ್ದು ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಎಂ&ಎಂ, ಟೆಕ್ ಮಹೀಂದ್ರಾ ಮತ್ತು ಏಷ್ಯಾನ್ ಪೆಯಿಂಟ್ಸ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಒಎನ್‌ಜಿಸಿ ಮತ್ತು ಪವರ್‌ಗ್ರಿಡ್ ಟಾಪ್ ಲೂಸರ್ಗಳಾದವು.
ಕಚ್ಚಾ ಬೆಲೆ ಏರಿಕೆ, ಅಮೆರಿಕದಲ್ಲಿ ಬಾಂಡ್ ಇಳುವರಿ ಹೆಚ್ಚಳ ಮತ್ತು ಐಎನ್ಆರ್ ದುರ್ಬಲಗೊಳಿಸಿದ್ದು, ದೇಶೀಯ ಷೇರುಗಳಿಗೆ ಕಡಿಮೆ ಅವಧಿಯ ಅಪಾಯ ತಂದೊಡ್ಡಬಹುದು. ಇದು ಈಗಾಗಲೇ ಇತ್ತೀಚಿನ ದಿನಗಳಲ್ಲಿ ಎಫ್‌ಪಿಐಗಳ ಹೊರಹರಿವಿಗೂ ಕಾರಣವಾಗಿದೆ.
ಇದನ್ನೂ ಓದಿ: 'ವಿವಾದ್ ಸೆ ವಿಶ್ವಾಸ್' ನೇರ ತೆರಿಗೆ ವಿವಾದ ಪರಿಹಾರ ಯೋಜನೆ ಶೇ28ರಷ್ಟು ಯಶಸ್ವಿ
ಇತ್ತೀಚಿನ ಬಾಂಡ್ ಇಳುವರಿಯ ಹೆಚ್ಚಳವು ಆರ್ಥಿಕ ಬೆಳವಣಿಗೆಯಲ್ಲಿ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ನಾವು ನಂಬುತ್ತೇವೆ. ಇದು ಒಂದು ಹಂತವನ್ನು ಮೀರಿ ಮತ್ತೊಂದು ಕಡೆಗೆ ಸಾಗುವ ಸಾಧ್ಯತೆಯಿಲ್ಲ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಮುಖ್ಯ ಸ್ಟ್ರಾಟಜಿಸ್ಟ್ ಬಿನೋದ್ ಮೋದಿ ಹೇಳಿದರು.
ಅಮೆರಿಕದಲ್ಲಿ ಸೋಮವಾರದ ರಾತ್ರಿಯ ವಹಿವಾಟಿನಲ್ಲಿ ಈಕ್ವಿಟಿಗಳು ಮಿಶ್ರ ನೋಟ್ಸ್ನಲ್ಲಿ ಕೊನೆಗೊಂಡಿವೆ. ಆಕ್ರಮಣಕಾರಿ ಹಣದ ಖರ್ಚು ಮತ್ತು ಆರ್ಥಿಕತೆಯನ್ನು ವೇಗವಾಗಿ ಮರು ತೆರೆಯುವಿಕೆ ಜತೆಗೆ ತ್ವರಿತ ಆರ್ಥಿಕ ಚೇತರಿಕೆಯ ನಿರೀಕ್ಷೆಯಿಂದ ಅಮೆರಿಕದ ಮಾರುಕಟ್ಟೆಗಳನ್ನು ನಡೆಸಲಾಗುತ್ತಿದೆ. ಇದು ಹಣದುಬ್ಬರ ಸಹ ಉಂಟುಮಾಡಬಹುದು ಎಂದರು.
ಏಷ್ಯಾದ ಇತರೆಡೆಗಳಲ್ಲಿ ಹಾಂಗ್ ಕಾಂಗ್ ಮತ್ತು ಟೋಕಿಯೊದಲ್ಲಿ ಹೂಡಿಕೆದಾರರು ಮಧ್ಯಂತರ ಅವಧಿಯಲ್ಲಿ ಸಕಾರಾತ್ಮಕ ನೋಟ್ಸ್ ಗಳಿಕೆಯಲ್ಲಿದ್ದರೇ ಶಾಂಘೈ ಮತ್ತು ಸಿಯೋಲ್ ಕೆಂಪು ಬಣ್ಣದಲ್ಲಿವೆ. ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ 0.94ರಷ್ಟು ಹೆಚ್ಚಳವಾಗಿ 68.88 ಡಾಲರ್‌ನಲ್ಲಿ ಮಾರಾಟ ಆಗುತ್ತಿದೆ.