ಮುಂಬೈ: ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರ ಆರಂಭಿಕ ವಹಿವಾಟಿನಲ್ಲಿ 700ಕ್ಕೂ ಹೆಚ್ಚು ಅಂಕಗಳ ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.
ಏಷ್ಯಾ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ಮುಂಬೈ ಪೇಟೆಯಲ್ಲಿ ಏರಿಕೆ ಕಂಡು ಬಂದಿದೆ. ಪೇಟೆಯ ಮೇಜರ್ಗಳಾದ ಎಚ್‌ಡಿಎಫ್‌ಸಿ ಟ್ವಿನ್ಸ್, ಎಚ್‌ಯುಎಲ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯ ಏರಿಕೆ ಕಂಡಿದೆ. ಕೊನೆಯ ವಹಿವಾಟಿನಂದು (ಮಾರ್ಚ್ 25ರಂದು) ಸೆನ್ಸೆಕ್ಸ್ 740.19 ಅಂಕಗಳ ನಷ್ಟದೊಂದಿಗೆ 48,440.12 ಅಂಕಗಳ ಮಟ್ಟದಲ್ಲೂ ನಿಫ್ಟಿ 224.50 ಅಂಕ ಕುಸಿತದೊಂದಿಗೆ 14,324.90 ಅಂಕಗಳಲ್ಲಿ ಅಂತ್ಯವಾಗಿತ್ತು.
ಕೋವಿಡ್-19 2ನೇ ಅಲೆಯಿಂದ ಸೋಂಕಿತರ ಪ್ರಮಾಣ ಮತ್ತೆ ಹೆಚ್ಚಳವಾಗುತ್ತಿದ್ದು, ಇದು ಆರ್ಥಿಕ ಚಟುವಟಿಕೆಗಳ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು ಎಂಬ ಭೀತಿಯ ನಡುವೆ ಹೂಡಿಕೆದಾರರಲ್ಲಿ ಸಕರಾತ್ಮಕ ಮನೋಭಾವ ಕಂಡುಬಂದಿದೆ. ಗುರುವಾರದಂದು ಕ್ಯಾಲೆಂಡರ್ ತಿಂಗಳ ಆರಂಭದಲ್ಲಿ ಮಾರಾಟ ದತ್ತಾಂಶಗಳ ಪ್ರಕಟಣೆ, ಬೋರ್ಸ್ ಬ್ರೆಂಟ್ ಕಚ್ಚಾ ತೈಲ, ರೂಪಾಯಿ ಚಂಚಲತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಯಂತಹ ಅಂಶಗಳು ಇಂದಿನ ಪೇಟೆಯಲ್ಲಿ ಪ್ರಭಾವಿಸಿವೆ.
ಬೆಳಗ್ಗೆ 11.48ರ ವೇಳೆಗೆ ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 841.08 ಅಂಕ ಏರಿಕೆಯಾಗಿ 49849.58 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ 252.65 ಅಂಕ ಹೆಚ್ಚಳವಾಗಿ 14,759.95 ಅಂಕಗಳ ಮಟ್ಟದಲ್ಲಿ ವಹಿವಾಟು ನಟೆಸುತ್ತಿದೆ.
ಇದನ್ನೂ ಓದಿ: ಮಾ.31ರಂದು ಸರ್ಕಾರಿ ಚೆಕ್ಗಳ ವಿಶೇಷ ಕ್ಲಿಯರಿಂಗ್ ಸೆಟಲ್ಮೆಂಟ್ ಕಡ್ಡಾಯ : ಬ್ಯಾಂಕ್ಗಳಿಗೆ ಆರ್ಬಿಐ ತಾಕೀತು
ಸೆನ್ಸೆಕ್ಸ್ ವಿಭಾಗದಲ್ಲಿ ಎಚ್‌ಯುಎಲ್ ಶೇ 3ರಷ್ಟು ಏರಿಕೆ ಕಂಡಿದ್ದರೇ ಟೈಟಾನ್, ಎನ್‌ಟಿಪಿಸಿ, ಒಎನ್‌ಜಿಸಿ, ಡಾ.ರೆಡ್ಡೀಸ್, ನೆಸ್ಲೆ ಇಂಡಿಯಾ, ಪವರ್‌ಗ್ರಿಡ್, ಎಚ್‌ಡಿಎಫ್‌ಸಿ ಟ್ವಿನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಇವರೆಗಿನ ಟಾಪ್ ಗೇನರ್ಗಳಾಗಿದ್ದಾರೆ. ಎಂ & ಎಂ ದಿನದ ಟಾಪ್ ಲೂಸರ್ ಆಗಿದೆ.
ಇದನ್ನೂ ಓದಿ: ಬಹುನಿರೀಕ್ಷಿತ ಐಫೋನ್ 13 ಪ್ರೊ ಮ್ಯಾಟ್ ಬ್ಲ್ಯಾಕ್ನ ಫೀಚರ್ ಬಹಿರಂಗ
ಏಷ್ಯಾದ ಮಾರುಕಟ್ಟೆಗಳಾದ ಶಾಂಘೈ, ಹಾಂಕಾಂಗ್ ಮತ್ತು ಸಿಯೋಲ್ ಪೇಟೆಗಳು ಹಸಿರು ವಲಯದಲ್ಲಿ ವಹಿವಾಟು ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ 0.18ರಷ್ಟು ಹೆಚ್ಚಳವಾಗಿ 65.04 ಡಾಲರ್‌ನಲ್ಲಿ ವಹಿವಾಟು ನಿರತವಾಗಿದೆ.