ETV Bharat / business

ಸತತ ಕುಸಿತದ ಬಳಿಕ ಷೇರುಪೇಟೆ ಚೇತರಿಕೆ; ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 580 ಅಂಕ ಜಿಗಿತ

author img

By

Published : Mar 8, 2022, 8:05 PM IST

Updated : Mar 8, 2022, 9:37 PM IST

ಸತತ ನಾಲ್ಕು ದಿನಗಳಿಂದ ಭಾರಿ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆಯಲ್ಲಿಂದು ಸೆನ್ಸೆಕ್ಸ್‌ 851 ಅಂಕಗಳ ಏರಿಕೆ ಕಂಡು 52,260ರಲ್ಲಿಯೂ ಮತ್ತು ನಿಫ್ಟಿ 115 ಅಂಶಗಳ ಹೆಚ್ಚಳದ ಬಳಿಕ 15,747ರಲ್ಲಿಯೂ ದಿನದ ವಹಿವಾಟು ಅಂತ್ಯಗೊಳಿಸಿವೆ.

Sensex, Nifty rebound sharply after 4-day rout
ಸತತ 4 ದಿನಗಳ ಕುಸಿತದ ಬಳಿಕ ಷೇರುಪೇಟೆ ಚೇತರಿಕೆ; ದಿನದಾಂತ್ಯಕ್ಕೆ ಸನ್ಸೆಕ್ಸ್‌ 580 ಅಂಕಗಳ ಜಿಗಿತ

ಮುಂಬೈ: ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಮುಂಬೈ ಷೇರುಪೇಟೆ ಮೇಲೆ ಭಾರಿ ಪರಿಣಾಮ ಉಂಟು ಮಾಡಿತ್ತು. ಕಳೆದ ನಾಲ್ಕು ದಿನಗಳಿಂದ ಕುಸಿತ ಕಂಡಿದ್ದ ಬಿಎಸ್‌ಇ ಸೆನ್ಸೆಕ್ಸ್‌ ಇಂದು ಚೇತರಿಕೆ ಕಂಡಿದೆ.

ದಿನದ ವಾಹಿವಾಟು ಅಂತ್ಯಕ್ಕೆೆ ಸೆನ್ಸೆಕ್ಸ್‌ 581 ಅಂಕಗಳ ಜಿಗಿತದ ಬಳಿಕ 52,260ರಲ್ಲಿಯೂ ಹಾಗೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 115 ಅಂಶಗಳನ್ನು ಹೆಚ್ಚಿಸಿಕೊಂಡು 15,747ರಲ್ಲಿ ವ್ಯಾಪಾರ ಮುಗಿಸಿತು.

ಸನ್ ಫಾರ್ಮಾ, ಟಿಸಿಎಸ್, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಹಾಗೂ ಇನ್ಫೋಸಿಸ್ ಷೇರುಗಳ ಮೌಲ್ಯ ಶೇ.3.99ರಷ್ಟು ಏರಿಕೆಯಾಗಿದೆ. ಟಾಟಾ ಸ್ಟೀಲ್, ನೆಸ್ಲೆ, ಟೈಟಾನ್, ಪವರ್‌ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಎಸ್‌ಬಿಐ ಷೇರುಗಳು ನಷ್ಟದಲ್ಲಿ ಕೊನೆಗೊಂಡವು.

ದೇಶಿ ಮಾರುಕಟ್ಟೆಯ ಕಡಿಮೆ ಮೌಲ್ಯದ ಷೇರುಗಳ ಖರೀದಿಗೆ ಹೆಚ್ಚಿನ ಹೂಡಿಕೆದಾರರ ಆಸಕ್ತಿ ಹಾಗೂ ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ರಷ್ಯಾದಿಂದ ತೈಲ ಖರೀದಿಗೂ ನಿರ್ಬಂಧ ಹೇರಿರುವ ಅಮೆರಿಕದ ಷೇರುಪೇಟೆ ನಷ್ಟದಲ್ಲಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಬ್ಯಾರೆಲ್‌ಗೆ ಶೇ.2.87ರಷ್ಟು ಏರಿಕೆಯಾಗಿ 126.6 ಡಾಲರ್‌ ತಲುಪಿದೆ.

ಇದೇ ವೇಳೆ, ಡಾಲರ್‌ ಎದುರು ರೂಪಾಯಿ ಮೌಲ್ಯ 7 ಪೈಸೆ ಕುಸಿದಿದ್ದು 77 ರೂಪಾಯಿಯಲ್ಲಿ ವ್ಯವಹಾರ ನಡೆಸುತ್ತಿದೆ.

ಇದನ್ನೂ ಓದಿ: ರಷ್ಯಾದಿಂದ ತೈಲ, ನೈಸರ್ಗಿಕ ಅನಿಲ ಖರೀದಿ ಸ್ಥಗಿತ: ಶೆಲ್‌ ಘೋಷಣೆ

Last Updated : Mar 8, 2022, 9:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.