ಮುಂಬೈ: ಸುಮಾರು 500 ಅಂಕಗಳ ಏರಿಕೆಯೊಂದಿಗೆ ಆರಂಭವಾದ ಬಿಎಸ್ಇ ಸೆನ್ಸೆಕ್ಸ್ ಮಧ್ಯಾಹ್ನ 12 ಗಂಟೆಯಷ್ಟೊತ್ತಿಗೆ ಸುಮಾರು 780 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡು 29,798 ರ ಆಸುಪಾಸು ವಹಿವಾಟು ನಡೆಸುತ್ತಿದೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿ ಸೂಚ್ಯಂಕ 204 ಅಂಕ ಕಳೆದುಕೊಂಡು 8763 ರಲ್ಲಿ ಏರಿಳಿತ ಕಾಣುತ್ತಿದೆ.
ವೊಡಾಫೋನ್ ಐಡಿಯಾ ಶೇರು ಕುಸಿತ: ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಎಜಿಆರ್ ಮೊತ್ತವನ್ನು ಪಾವತಿಸಲೇಬೇಕೆಂದು ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ವೊಡಾಫೋನ್ ಐಡಿಯಾ ಶೇರುಗಳು ಶೇ.35 ರಷ್ಟು ಕುಸಿತ ಕಂಡಿವೆ.
26 ಪೈಸೆ ಏರಿದ ರೂಪಾಯಿ: ಬುಧವಾರದಂದು ಭಾರತೀಯ ರೂಪಾಯಿ ಅಮೆರಿಕನ್ ಡಾಲರ್ ಎದುರು 26 ಪೈಸೆಗಳಷ್ಟು ಏರಿಕೆ ಕಂಡು ಡಾಲರ್ ಒಂದಕ್ಕೆ 73.99 ರೂಪಾಯಿಯೊಂದಿಗೆ ವಹಿವಾಟು ಆರಂಭಿಸಿತು.
ತೈಲ ಬೆಲೆ ಸ್ಥಿರ: ನಾಲ್ಕು ವರ್ಷಗಳಲ್ಲೇ ಅತಿ ಕನಿಷ್ಠ ದರಕ್ಕೆ ಕುಸಿತ ಕಂಡಿರುವ ಕಚ್ಚಾತೈಲ ಬೆಲೆಗಳು ಬುಧವಾರ ಬಹುತೇಕ ಸ್ಥಿರವಾಗಿವೆ. ಬುಧವಾರ ಬ್ರೆಂಟ್ ಕ್ರೂಡ್ ಬ್ಯಾರೆಲ್ ಒಂದಕ್ಕೆ 29.07 ಡಾಲರ್ ಬೆಲೆ ನಡೆಯುತ್ತಿದೆ.