ಮುಂಬೈ: ಆರಂಭಿಕ ಹಂತದ ವಹಿವಾಟಿನಲ್ಲಿ ಸೂಚ್ಯಂಕ 150 ಅಂಕ ಕುಸಿತ ಕಂಡು ದಿನದ ವಹಿವಾಟು ಆರಂಭಗೊಂಡಿದೆ.
ಬಿಎಸ್‌ಇ ಸೂಚ್ಯಂಕವು 154.21 ಅಂಕ ಅಥವಾ ಶೇ 0.31ರಷ್ಟು ಕುಸಿತ ಕಂಡು 49,338.11 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಆರಂಭಿಕ ಹಂತದಲ್ಲಿ 47.45 ಅಂಕ ಕುಸಿತ ಕಂಡು 14,517 ಅಂಕಗಳಲ್ಲಿ ವ್ಯಾಪಾರ ನಿರತವಾಗಿತ್ತು.
ಸೆನ್ಸೆಕ್ಸ್ ಪ್ಯಾಕ್ನಲ್ಲಿ ಹೆಚ್ಸಿಎಲ್ ಟೆಕ್ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಶೇ.4ರಷ್ಟು ಕುಸಿತ ಕಂಡಿದೆ. ನಂತರದ ಸ್ಥಾನದಲ್ಲಿ ಇನ್ಫೋಸಿಸ್, ಟೆಕ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಬಜಾಜ್ ಫೈನಾನ್ಸ್ ಸೇರಿವೆ.
ಇನ್ನೊಂದೆಡೆ ಇಂಡಸ್ಇಂಡ್ ಬ್ಯಾಂಕ್, ಐಟಿಸಿ, ಎಲ್&ಟಿ, ಬಜಾಜ್ ಆಟೋ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ಗಳಿಕೆ ಕಂಡಿವೆ.
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 24.79 ಅಂಕ ಕುಸಿತದೊಂದಿದೆ 49,492.32 ಅಂಕಗಳ ಮಟ್ಟದಲ್ಲೂ ನಿಫ್ಟಿ 1.40 ಅಂಕಗಳ ಜಿಗಿತದೊಂದಿಗೆ 14,564.85 ಅಂಕಗಳ ಮಟ್ಟದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ್ದವು.
ಇನ್ನೊಂದೆಡೆ ಇನ್ಫೋಸಿಸ್ 2020ರ ತ್ರೈಮಾಸಿಕ ಗಳಿಕೆಯ ಮಟ್ಟದಲ್ಲಿ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 16.6ರಷ್ಟು ಏರಿಕೆ ಕಂಡು 5,197 ಕೊಟಿ ರೂಪಾಯಿ ತಲುಪಿದೆ.
ಇದನ್ನೂ ಓದಿ: ಧೋನಿ ವ್ಯಾಪಾರಕ್ಕೂ ಸೋಂಕಿದ ಹಕ್ಕಿ ಜ್ವರ.. ಆರ್ಡರ್ ಮಾಡಿದ 2000 ‘ಕಡಕ್ ನಾಥ್’ ಕೋಳಿಗಳ ಸಾವು