ಸಿಯೋಲ್: ದೂರಶಿಕ್ಷಣ ಮತ್ತು ವರ್ಕ್ ಫ್ರಮ್ ಹೋಮ್ ಹೆಚ್ಚುತ್ತಿರುವ ಪ್ರವೃತ್ತಿಯ ಮಧ್ಯೆ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದರಿಂದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತನ್ನ 2021 ಶ್ರೇಣಿಯ ಹೈರೆಸಲ್ಯೂಷನ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್ ಮೂರು ಸರಣಿಗಳಲ್ಲಿ 12 ವಿಭಿನ್ನ ಮಾನಿಟರ್‌ಗಳಾದ ಎಸ್ 8, ಎಸ್ 7 ಮತ್ತು ಎಸ್ 6 ಶ್ರೇಣಿಯಡಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಲ್ಲಾ ಮಾದರಿಗಳು 1 ಬಿಲಿಯನ್‌ಗಿಂತಲೂ ಅಧಿಕ ಕಲರ್, 178 ಡಿಗ್ರಿ ವೈಡ್ ಆ್ಯಂಗಲ್ ಮತ್ತು ಹೈ ಡೈನಾಮಿಕ್ ರೇಂಜ್ 10 ತಂತ್ರಜ್ಞಾನ ಹೊಂದಿವೆ.
ಇದನ್ನೂ ಓದಿ: ಮಾರುತಿ ಸುಜುಕಿ ಹಾದಿಯಲ್ಲಿ ಸಾಗಿದ ನಿಸ್ಸಾನ್ ಇಂಡಿಯಾ!
ದಕ್ಷಿಣ ಕೊರಿಯಾದಲ್ಲಿ 10 ಮಾಡಲ್ಗೆ 400 ಡಾಲರ್ನಷ್ಟು ದರದೊಂದಿಗೆ ಲಭ್ಯವಿದೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು ಎಸ್ 8ನ 27 ಮತ್ತು 32 ಇಂಚು ಆಯ್ಕೆಗಳಲ್ಲಿದ್ದು, ಬಳಕೆದಾರರಿಗೆ ಶೇ 99ರಷ್ಟು ಎಸ್‌ಆರ್‌ಜಿಬಿ ಕಲರ್ನ ಅಲ್ಟ್ರಾ-ಹೈ ಡೆಫಿನಿಷನ್ (ಯುಎಚ್‌ಡಿ) ರೆಸಲ್ಯೂಶನ್ ನೀಡುತ್ತದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ಯುಎಸ್‌ಬಿ-ಸಿ ಪ್ರಕಾರದ ಪೋರ್ಟ್ ಮೂಲಕ ಪ್ರತಿ ಸೆಕೆಂಡಿಗೆ 10 ಗಿಗಾಬಿಟ್ ಡೇಟಾ ಟ್ರಾನ್ಸ್ಮಿಷನ್ ಒದಗಿಸುತ್ತದೆ.