ETV Bharat / business

ಐತಿಹಾಸಿಕ ದರದ ಹೊಸ್ತಿಲಲ್ಲಿ ಪೆಟ್ರೋಲ್ ರೇಟ್​: ಯಾವ ನಗರದಲ್ಲಿ ಎಷ್ಟು ದರವಿದೆ?

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 93.68 ರೂ., ಡೀಸೆಲ್ ಬೆಲೆ 84.61 ರೂ.ಯಲ್ಲಿ ಮಾರಾಟ ಆಕಗುತ್ತಿದೆ. ಮುಂಬೈನಲ್ಲಿ ಚಿಲ್ಲರೆ ಪೆಟ್ರೋಲ್ ದರ ಪ್ರಸ್ತುತ 99.94 ರೂ. ಹಾಗೂ ಡೀಸೆಲ್ 91.87 ರೂ.ಯಷ್ಟಿದೆ ಎಂಬುದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Petrol
Petrol
author img

By

Published : May 28, 2021, 4:55 PM IST

ಮುಂಬೈ: ಗುರುವಾರ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದ ನಂತರ ಮೇ 28ರ ಶುಕ್ರವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದವು.

ವಾಹನ ಇಂಧನ ಬೆಲೆಗಳು ಮೇ 27ರಂದು ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು, ಪೆಟ್ರೋಲ್ ಪ್ರತಿ ಲೀಟರ್​ ಮೇಲೆ 24 ಪೈಸೆ ಏರಿಕೆಯಾಗಿದ್ದರೇ ಡೀಸೆಲ್ 29 ಪೈಸೆ ಹೆಚ್ಚಳವಾಗಿತ್ತು.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 93.68 ರೂ., ಡೀಸೆಲ್ ಬೆಲೆ 84.61 ರೂ.ಯಲ್ಲಿ ಮಾರಾಟ ಆಕಗುತ್ತಿದೆ. ಮುಂಬೈನಲ್ಲಿ ಚಿಲ್ಲರೆ ಪೆಟ್ರೋಲ್ ದರ ಪ್ರಸ್ತುತ 99.94 ರೂ. ಹಾಗೂ ಡೀಸೆಲ್ 91.87 ರೂ.ಯಷ್ಟಿದೆ ಎಂಬುದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ 18 ದಿನಗಳ ಕಾಲ ವಿರಾಮ ಕೊನೆಗೊಳಿಸಿದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ತಮ್ಮ ಬೆಲೆ ಪರಿಷ್ಕರಣೆಗಳನ್ನು ಪುನರಾರಂಭಿಸಿದವು. ಮೇ ತಿಂಗಳಲ್ಲಿ ಇಂಧನ ಬೆಲೆಗಳು 14 ಬಾರಿ ಏರಿಕೆಯಾಗಿವೆ.

ಈ ತಿಂಗಳ ಇತ್ತೀಚಿನ ಏರಿಕೆಯೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ರಾಜಧಾನಿ ನಗರಗಳಾದ ಭೋಪಾಲ್ ಮತ್ತು ಜೈಪುರ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಈಗ ಮುಂಬೈ ಕೂಡ ಐತಿಹಾಸಿಕ ಹೆಗ್ಗುರುತನ್ನು ಮುಟ್ಟುವ ಹಾದಿಯಲ್ಲಿದೆ.

ಸ್ಥಳೀಯ ತೆರಿಗೆ (ವ್ಯಾಟ್) ಮತ್ತು ಸರಕು ಸಾಗಣೆ ಶುಲ್ಕವನ್ನು ಅವಲಂಬಿಸಿ ದೇಶದಲ್ಲಿನ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ. ಇದಲ್ಲದೆ ಕೇಂದ್ರ ಸರ್ಕಾರವು ವಾಹನ ಇಂಧನಗಳ ಮೇಲೆ ಅಬಕಾರಿ ಸುಂಕವನ್ನು ವಿಧಿಸುತ್ತದೆ.

ನಗರಪೆಟ್ರೋಲ್ ಡೀಸೆಲ್ (ರೂ.)
ಬೆಂಗಳೂರು96.8089.70
ದೆಹಲಿ 93.68 84.61
ಮುಂಬೈ 99.94 91.87
ಚೆನ್ನೈ 95.28 89.39
ಕೋಲ್ಕತ್ತಾ 93.72 87.46

ETV Bharat Logo

Copyright © 2024 Ushodaya Enterprises Pvt. Ltd., All Rights Reserved.