ನವದೆಹಲಿ : ನವೆಂಬರ್ ಮಾಸಿಕದ ಜಾಗತಿಕ ತೈಲ ಬೆಲೆಗಳು ಮತ್ತಷ್ಟು ಇಳಿಕೆ ಕಂಡಿದ್ದರೂ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರದಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಥಾವತ್ತು ಉಳಿಸಿಕೊಂಡಿವೆ.
ಕಂಪನಿಗಳ ಈ ನಿರ್ಧಾರದೊಂದಿಗೆ ಪೆಟ್ರೋಲ್ ಬೆಲೆ ಈಗ 47 ದಿನಗಳಿಂದ ಬದಲಾಗದೆ ಉಳಿದಿದ್ದರೆ, ಡೀಸೆಲ್ ಬೆಲೆ ಅಕ್ಟೋಬರ್ 2ರಿಂದ ಅದೇ ಮಟ್ಟದಲ್ಲಿದೆ. ಇದೇ ಅವಧಿಯಲ್ಲಿ ಬ್ರೆಂಟ್ ಕಚ್ಚಾ ಬೆಲೆಯು ಪ್ರತಿ ಬ್ಯಾರೆಲ್‌ಗೆ 2-3ರಷ್ಟು (3$: ₹ 220.5) ಡಾಲರ್‌ನಷ್ಟು ಕುಸಿದಿದೆ. ಪ್ರಸ್ತುತ ಪ್ರತಿ ಬ್ಯಾರೆಲ್ 40 ಡಾಲರ್ ಮಟ್ಟದಲ್ಲಿ ಮಾರಾಟ ಆಗುತ್ತಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 81.06 ರೂ. ಮಾರಾಟ ಆಗುತ್ತಿದ್ದರೇ ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ ಲೀಟರ್‌ಗೆ 87.74, 84.14 ಮತ್ತು 82.59 ರೂ.ಗಳಿಗೆ ಖರೀದಿ ಆಗುತ್ತಿದೆ. ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಕ್ರಮವಾಗಿ 70.46, 76.86, 75.95, ಮತ್ತು 73.99 ರೂ.ಯಷ್ಟಿದೆ.
ಜಾಗತಿಕ ಕಚ್ಚಾ ಬೆಲೆ ಪ್ರತಿ ಬ್ಯಾರೆಲ್‌ಗೆ 40 ಡಾಲರ್ಗಿಂತ ಕಡಿಮೆ ಆಗುತ್ತಿರುವುದರಿಂದ ವಾಹನ ಇಂಧನದ ಪಂಪ್ ಬೆಲೆ ಸಹ ಕುಸಿಯುತ್ತದೆ ಎಂದು ಗ್ರಾಹಕರು ಆಶಿಸುತ್ತಿದ್ದರು. ಆದರೂ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಶೀಲನೆಗೂ ಮುನ್ನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಿವೆ.
ಜಾಗತಿಕ ಕಚ್ಚಾ ಬೆಲೆಗಳು ಬ್ಯಾರೆಲ್‌ಗೆ 40 ಡಾಲರ್ನಷ್ಟಿದೆ. ಇದು ಕಳೆದ ತಿಂಗಳ ಮಟ್ಟಕ್ಕಿಂತಲೂ ಹೆಚ್ಚಾಗಿದೆ. ಆದರೆ ಇದು ಕಳೆದ ವಾರ ಬ್ಯಾರೆಲ್‌ಗೆ ಸುಮಾರು 39 ಡಾಲರ್ಗೆ ಇಳಿದಿತ್ತು. ಅಮೆರಿಕದ ಕಚ್ಚಾ ತೈಲ ಬೆಲೆಗಳು ಈ ಮಟ್ಟಕ್ಕಿಂತಲೂ ಕೆಳಗಿವೆ.