ETV Bharat / business

ದಶಕದ ದಾಖಲೆ ಬರೆದ ನಿಫ್ಟಿ: ಸೀತಾರಾಮನ್​ ಬಜೆಟ್ ಮೇಲೆ ಭರವಸೆಯ ಹೊರೆ! - Equity Market

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ನಿಫ್ಟಿ 50 ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 86ರಷ್ಟು ಏರಿಕೆ ಕಂಡಿದೆ. ಶುಕ್ರವಾರದ ವಹಿವಾಟಿನಂದು ಸಾರ್ವಕಾಲಿಕ ಗರಿಷ್ಠ 14,289.30 ಅಂಕಗಳಿಗೆ ತಲುಪಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಹೇಳಿದೆ.

Nifty
ನಿಫ್ಟಿ
author img

By

Published : Jan 8, 2021, 1:06 PM IST

ಮುಂಬೈ: ಭಾರತೀಯ ಈಕ್ವಿಟಿ ಸೂಚ್ಯಂಕಗಳು ಹೊಸ ಗರಿಷ್ಠ ಮಟ್ಟ ತಲುಪಿದ್ದರಿಂದ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 50 2009-10ರ ಆರ್ಥಿಕ ವರ್ಷದಿಂದ ಅತಿ ವೇಗದ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ನಿಫ್ಟಿ- 50 ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 86ರಷ್ಟು ಏರಿಕೆ ಕಂಡಿದೆ. ಶುಕ್ರವಾರದ ವಹಿವಾಟಿನಂದು ಸಾರ್ವಕಾಲಿಕ ಗರಿಷ್ಠ 14,289.30 ಅಂಕಗಳಿಗೆ ತಲುಪಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ವರದಿ ಹೇಳಿದೆ.

9 ತಿಂಗಳ ಆಧಾರದ ಮೇಲೆ ನಿಫ್ಟಿ 50 ಸೂಚ್ಯಂಕ (ಶೇ 86) 2010ರ ಹಣಕಾಸು ವರ್ಷದ ನಂತರದ ಅತಿ ವೇಗದ ಏರಿಕೆ ಪ್ರದರ್ಶಿಸಲು ಹತ್ತಿರದಲ್ಲಿದೆ. ಅದು ಇದೇ ಅವಧಿಯಲ್ಲಿ ಶೇ 103ರಷ್ಟು ಗಳಿಕೆ ಕಂಡಿತು ಎಂದಿದೆ.

ದೇಶೀಯ ಸಾಂಸ್ಥಿಕ ಹೂಡಿಕೆ (ಡಿಐಐ) ಹಾಗೂ ವಿದೇಶಿ ಬಂಡವಾಳ ಹೂಡಿಕೆಗಳ (ಎಫ್‌ಪಿಐ) ಒಳಹರಿವಿನ ಸಕಾರಾತ್ಮಕ ಕಾರಣವಾಗಿ 2010ರ ವಿತ್ತೀಯ ವರ್ಷದಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಪ್ರಸ್ತುತ ರ‍್ಯಾಲಿಯು ಎಫ್‌ಪಿಐ ಮತ್ತು ಡಿಐಐಗಳಿಂದ ನಿರಂತರವಾಗಿ ಹರಿವು ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳ: ಲಾಕ್​ಡೌನ್​ ಮೊದಲಿಗಿಂತಲೂ ಡಿಸೆಂಬರ್​ನಲ್ಲಿ ಹೆಚ್ಚು ನಿರುದ್ಯೋಗಿಗಳು

ದುರ್ಬಲ ಗ್ರಾಹಕರ ಭಾವನೆ, ಸರ್ಕಾರಿ ಖರ್ಚಿನ ಮೇಲೆ ಹಣಕಾಸಿನ ನಿರ್ಬಂಧ ಮತ್ತು ಕಾರ್ಪೊರೇಟ್ ಸಂಸ್ಥೆಗಳು ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಮತ್ತು ಕಾರ್ಯಾಚರಣೆಯ ವೆಚ್ಚ (ಒಪೆಕ್ಸ್ ) ನಡುವೆ ಷೇರುಪೇಟೆ ಹೊಸ ಎತ್ತರದತ್ತ ಸಾಗುತ್ತಿದೆ. ಡಿಸೆಂಬರ್ 2020ರಲ್ಲಿ ರಿಯಾಲ್ಟಿ, ಪಿಎಸ್‌ಯು ಬ್ಯಾಂಕ್​, ಲೋಹ, ಗ್ರಾಹಕ ಬಾಳಿಕೆ ವಸ್ತುಗಳು, ಐಟಿ, ಟೆಲಿಕಾಂ, ಫಾರ್ಮಾ ಮುಂತಾದ ಕ್ಷೇತ್ರಗಳ ಷೇರುಗಳಲ್ಲಿ ಸಾಧನೆ ಕಂಡು ಬಂದಿದೆ.

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಬಜೆಟ್ ಮಂಡಿಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಿಂದ ಈಕ್ವಿಟಿ ಮಾರುಕಟ್ಟೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ಹಣಕಾಸು ಸಚಿವರ ಬಜೆಟ್ ಭಾಷಣವು ಷೇರು ಮಾರುಕಟ್ಟೆ ಹೂಡಿಕೆದಾರರಿಂದಲೂ ಗಮನ ಸೆಳೆಯುವ ಸಾಧ್ಯತೆಯಿದೆ. ಮುಂಬರುವ ಗಳಿಕೆಯ ಋತುಮಾನ ಮತ್ತು ನಿರ್ಮಲಾ ಸೀತಾರಾಮನ್ ಅವರು ಪ್ರಕಟಣೆಗಳು ಭವಿಷ್ಯದ ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.