ನವದೆಹಲಿ: ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಕೆಲ ಕಾರುಗಳ ಬೆಲೆ ಕಡಿತ ಮಾಡಿದೆ.
ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್(ಡೀಸೆಲ್), ಸೆಲೆರಿಯೋ, ಇಗ್ನಿಸ್, ಡಿಸೈರ್(ಡೀಸೆಲ್), ಟೂರ್ ಎಸ್(ಡೀಸೆಲ್), ವಿತಾರ ಬ್ರೀಜಾ ಹಾಗೂ ಎಸ್-ಕ್ರಾಸ್ ಕಾರುಗಳ ಬೆಲೆಯಲ್ಲಿ ಐದು ಸಾವಿರ ಕಡಿತ ಮಾಡಿ ಸಂಸ್ಥೆ ಘೋಷಣೆ ಮಾಡಿದೆ.
ಸದ್ಯ ಬೆಲೆ ಇಳಿಕೆ ಮಾಡಲಾದ ಕಾರುಗಳ ದರ ₹2.93 ಲಕ್ಷದಿಂದ ₹11.49 ಲಕ್ಷವಿದೆ. ಸಂಸ್ಥೆ ಘೋಷಣೆ ಮಾಡಿದ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಹಬ್ಬದ ಸಂದರ್ಭ ಬೆಲೆ ಕಡಿತದಿಂದ ಬೇಡಿಕೆ ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಕಂಪೆನಿ ಹೊಂದಿದೆ. ಆರ್ಥಿಕ ಹಿಂಜರಿತ ಹಾಗೂ ಬೇಡಿಕೆ ಕುಸಿತದ ಸಂದರ್ಭದಲ್ಲಿ ಮಾರುತಿ ಸುಜುಕಿ ಕಂಪೆನಿ ಬೇಡಿಕೆ ಹೆಚ್ಚಳಕ್ಕೆ ಹೊಸ ಮಾರ್ಗ ಕಂಡುಕೊಂಡಿದೆ.
ಹಳೆಯ ದರ ಹಾಗೂ ಪರಿಷ್ಕೃತ ದರಗಳ ಸಂಪೂರ್ಣ ವಿವರ ಇಂತಿದೆ:
ಕಾರಿನ ಹೆಸರು | ಹಳೆಯ ದರ | ಪರಿಷ್ಕೃತ ದರ |
ಆಲ್ಟೋ 800 | ₹2.94 ಲಕ್ಷ | ₹ 2.89 ಲಕ್ಷ |
ಆಲ್ಟೋ ಕೆ10 | ₹ 3.66 ಲಕ್ಷ | ₹ 3.61 ಲಕ್ಷ |
ಸೆಲೆರಿಯೋ | ₹ 4.31 ಲಕ್ಷ | ₹ 4.26 ಲಕ್ಷ |
ಸ್ವಿಫ್ಟ್(ಡೀಸೆಲ್) | ₹7.03 ಲಕ್ಷ | ₹ 6.98 ಲಕ್ಷ |
ಡಿಸೈರ್(ಡೀಸೆಲ್) | ₹ 6.72 ಲಕ್ಷ | ₹ 6.67 ಲಕ್ಷ |
ಟೂರ್ ಎಸ್(ಡೀಸೆಲ್) | ₹ 6.61 ಲಕ್ಷ | ₹ 6.56 ಲಕ್ಷ |
ವಿತಾರ ಬ್ರೀಜಾ | ₹ 7.68 ಲಕ್ಷ | ₹ 7.63 ಲಕ್ಷ |
ಎಸ್-ಕ್ರಾಸ್ | ₹ 8.86 ಲಕ್ಷ | ₹ 8.81 ಲಕ್ಷ |
ಇಗ್ನಿಸ್ | ₹ 4.79 ಲಕ್ಷ | ₹ 4.74 ಲಕ್ಷ |