ನವದೆಹಲಿ: ಮಹೀಂದ್ರ ಕಂಪನಿಯು ಸಾಹಸ ಬಯಸುವ ಕಾರು ಪ್ರಿಯರಿಗೆ ಇಷ್ಟವಾಗುವಂತಹ ಹೊಸ ಎಸ್ಯುವಿ ಥಾರ್ 2020ಅನ್ನು ಅಧಿಕೃತ ಬಿಡುಗಡೆ ಜೊತೆಗೆ ಅದರ ದರವನ್ನು ಬಹಿರಂಗಪಡಿಸಿದೆ.
ಆಗಸ್ಟ್ 15ರಂದು ಅನಾವರಣಗೊಂಡಿದ್ದ 2ನೇ ತಲೆಮಾರಿನ ಜನರೇಷನ್ ಥಾರ್ನ ಬೆಲೆಯ ಜೊತೆಗೆ ವಾಹನ ಸಾಮರ್ಥ್ಯದ ಸಂಪೂರ್ಣ ಮಾಹಿತಿ ಹಂಚಿಕೊಂಡಿತ್ತು. ಥಾರ್ ಎಎಕ್ಸ್ ಬೆಲೆ 9.8 ಲಕ್ಷದಿಂದ 12.2 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ.
ಐಷರಾಮಿ ಸೌಲಭ್ಯಗಳನ್ನು ಹೊಂದಿರುವ ಹಾರ್ಡ್ ಟಾಪ್ ಕನ್ವರ್ಟಿಬಲ್ ಥಾರ್ಗೆ 12.49 ಲಕ್ಷ ರೂ. ಹಾಗೂ ಡೀಸೆಲ್ ಮಾದರಿಯ ಕಾರಿಗೆ 12.95 ಲಕ್ಷ ರೂ. ನಿಗದಿಯಾಗಿದೆ. ಥಾರ್ ಖರೀದಿಗೆ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಈ ತಿಂಗಳಾಂತ್ಯಕ್ಕೆ ಗ್ರಾಹಕರ ಕೈಗೆಟುಕುವ ಸಾಧ್ಯತೆಯಿದೆ.
-
The wait is over!
— Mahindra Thar (@Mahindra_Thar) October 2, 2020 " class="align-text-top noRightClick twitterSection" data="
Book #TheAllNewThar today and gear up to #ExploreTheImpossible
Link: https://t.co/A7rYBLwkNK#MahindraThar pic.twitter.com/6uYileTGNP
">The wait is over!
— Mahindra Thar (@Mahindra_Thar) October 2, 2020
Book #TheAllNewThar today and gear up to #ExploreTheImpossible
Link: https://t.co/A7rYBLwkNK#MahindraThar pic.twitter.com/6uYileTGNPThe wait is over!
— Mahindra Thar (@Mahindra_Thar) October 2, 2020
Book #TheAllNewThar today and gear up to #ExploreTheImpossible
Link: https://t.co/A7rYBLwkNK#MahindraThar pic.twitter.com/6uYileTGNP
ಥಾರ್ನಲ್ಲಿ ಆರು ಸ್ಪೀಡ್ ಮ್ಯಾನುಯಲ್ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ಸ್ನಂತಹ ಆಯ್ಕೆಗಳಿವೆ. ಬಿಎಸ್ VI ಮಾದರಿ ಎಂಜಿನ್, 2.0 ಲೀಟರ್ ಪೆಟ್ರೋಲ್ ಹಾಗೂ 2.2 ಲೀಟರ್ ಡೀಸೆಲ್ ಇಂಜಿನ್ ಸಾಮರ್ಥ್ಯವಿದೆ. ಡೀಸೆಲ್ ಚಾಲಿತ ಎಂಜಿನ್ 120 ಹೆಚ್ಪಿ ಶಕ್ತಿ ಹೊರಹೊಮ್ಮಿಸಿದ್ದರೇ, ಪೆಟ್ರೋಲ್ 150 ಹೆಚ್ಪಿ ಪವರ್ ಸಾಮರ್ಥ್ಯವಿದೆ. ನಾಲ್ಕು ಫ್ರಂಟ್ ಫೇಸಿಂಗ್ ಸೀಟ್ ಮತ್ತು 2+4 ಸೈಡ್ ಫೇಸಿಂಗ್ ಸೀಟ್ಗಳಿವೆ. ರೂಫ್ ಮೌಂಟೆಡ್ ಸ್ಪೀಕರ್ ಹಾಗೂ ಡ್ಯುಯಲ್ ಏರ್‌ಬ್ಯಾಗ್ ಹೊಂದಿದೆ.