ETV Bharat / business

ಆಭರಣ ಉದ್ಯಮಕ್ಕೆ ಆಶಾಕಿರಣವಾದ ಧನ್​ತೇರಸ್: ಹತ್ತಿರ ಬರ್ತಿದೆ ದೀಪಾವಳಿ ಹಬ್ಬ! - ಧನ್​ತೇರಸ್ ಚಿನ್ನದ ದರ

ಜ್ಯುವೆಲ್ಲರ್ಸ್ ಚೇತರಿಕೆಯು ಆರ್ಥಿಕತೆಯ ಚೇತರಿಕೆಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ಈ 'ಧನ್​ತೇರಸ್' ವಹಿವಾಟು ನೆರವಾಗಲಿದೆ. ಚಿನ್ನಾಭರಣ ಉದ್ಯಮವು ಕಳೆದ ವರ್ಷದ ವ್ಯವಹಾರಕ್ಕಿಂತ ಶೇ 70ರಷ್ಟು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ.

gold
ಚಿನ್ನ
author img

By

Published : Nov 7, 2020, 5:56 PM IST

ಮುಂಬೈ: ಚಿನ್ನಾಭರಣಗಳ ಖರೀದಿಗೆ ಶುಭ ದಿನವಾದ ಧನ್​ತೇರಸ್ ವೇಳೆ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡುಬರಲಿದೆ ಎಂಬ ನಿರೀಕ್ಷೆಯನ್ನು ಚಿನ್ನಾಭರಣ ವರ್ತಕರು ಇರಿಸಿಕೊಂಡಿದ್ದಾರೆ.

ಜ್ಯುವೆಲ್ಲರ್ಸ್ ಚೇತರಿಕೆಯು ಆರ್ಥಿಕತೆಯ ಚೇತರಿಕೆಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ಈ 'ಧನ್​ತೇರಸ್' ವಹಿವಾಟು ನೆರವಾಗಲಿದೆ. ಚಿನ್ನಾಭರಣ ಉದ್ಯಮವು ಕಳೆದ ವರ್ಷದ ವ್ಯವಹಾರಕ್ಕಿಂತ ಶೇ 70ರಷ್ಟು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ.

ಹೆಚ್ಚಿನ ಚಿನ್ನದ ಬೆಲೆಗಳ ಏರಿಳಿತ, ಪ್ರಸ್ತುತದ ಕೋವಿಡ್​-19 ಅನಿಶ್ಚಿತತೆಗಳ ಹೊರತಾಗಿಯೂ ಈ ಹಬ್ಬದ ಋತುವಿನಲ್ಲಿ ಚಿಲ್ಲರೆ ಮಾರಾಟದಲ್ಲಿ ಪುನರುಜ್ಜೀವನ ಕಾಣಬಹುದು ಎಂಬುದು ಆಭರಣಕಾರರ ನಿರೀಕ್ಷೆ. ಹಳದಿ ಲೋಹವು ಭಾರತದ ಹಬ್ಬಗಳ ಅವಧಿಯಲ್ಲಿ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಧನ್​ತೇರಸ್, ದೀಪಾವಳಿ ಮತ್ತು ವಿವಾಹದ ಸೀಸನ್​ನಲ್ಲಿ ವ್ಯಾಪಕ ಖರೀದಿ ಕಂಡುಬರುತ್ತದೆ.

ಹಬ್ಬದ ಸೀಸನ್​ ಆರಂಭದಿಂದಲೂ ಮಾರಾಟದಲ್ಲಿ ಕ್ರಮೇಣ ಬೆಳವಣಿಗೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಕೋವಿಡ್ ​ಕುರಿತು ನಡೆಯುತ್ತಿರುವ ಅನಿಶ್ಚಿತತೆಗಳ ಹೊರತಾಗಿಯೂ ವೃದ್ಧಿ ಕಾಣುತ್ತಿದೆ. ಇದು ನಮಗೆ ಭರವಸೆಯ ಆಶಾಕಿರಣವಾಗಿದ್ದು, ಕಳೆದ ವರ್ಷಕ್ಕಿಂತ ಶೇ 70ರಷ್ಟು ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಮೂಡಿಸಿದೆ ಎಂದು ಆಲ್ ಇಂಡಿಯ ಜೆಮ್ಸ್ & ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಅಧ್ಯಕ್ಷ ಅನಂತ ಪದ್ಮನಾಭನ್ ಪಿಟಿಐಗೆ ತಿಳಿಸಿದರು.

ದೇಶದಲ್ಲಿ ಪ್ರತಿ 10 ಗ್ರಾಂ. ಚಿನ್ನ 52,000 ರೂ. ಬೆಲೆಗೆ ಮಾರಾಟ ಆಗುತ್ತಿದೆ. ಧನ್​ತೇರಸ್ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಅದೃಷ್ಟ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಲಕ್ಷಾಂತರ ಭಾರತೀಯರು ನಂಬಿಕೆ. ಈ ಮನೋಭಾವದ ಪ್ರತಿಬಿಂಬಕವಾಗಿ ಈ ವರ್ಷ ಸಾಧಾರಣ ಖರೀದಿ ಅವಧಿಯ ಪ್ರಾರಂಭ ಚಿಹ್ನೆಗಳಿವೆ. ಇದು ಪ್ರಸ್ತುತ ಸಾಂಕ್ರಾಮಿಕದ ದೀರ್ಘಕಾಲದ ನಿಗ್ರಹಿತ ಬೇಡಿಕೆ ಮತ್ತು ಚಟುವಟಿಕೆಗೆ ಸ್ವಲ್ಪ ವಿರಾಮ ನೀಡುತ್ತದೆ ಎಂದು ವರ್ಲ್ಡ್​ ಗೋಲ್ಡ್ ಕೌನ್ಸಿಲ್ ವ್ಯವಸ್ಥಾಪಕ ನಿರ್ದೇಶಕ ಪಿಆರ್​ ಸೋಮಸುಂದರಾಮ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.