ನವದೆಹಲಿ: ಕೋವಿಡ್-19 ಲಸಿಕೆ ಪ್ರಯೋಗಗಳು ತ್ವರಿತಗತಿಯಲ್ಲಿ ಸಾಗಿದ್ದು, ಅನುಮೋದಿತ ಲಸಿಕೆ 2021ರ ಮೊದಲ ತ್ರೈಮಾಸಿಕದ ವೇಳೆಗೆ ಭಾರತೀಯ ಮಾರುಕಟ್ಟೆ ತಲುಪುವ ಸಾಧ್ಯತೆಯಿದೆ ಎಂದು ಬರ್ನ್‌ಸ್ಟೈನ್ ವರದಿಯಲ್ಲಿ ತಿಳಿಸಲಾಗಿದೆ.
ಜಾಗತಿಕವಾಗಿ 2020ರ ಅಂತ್ಯದ ವೇಳೆಗೆ ಅಥವಾ 2021ರ ಆರಂಭದಲ್ಲಿ ಅನುಮೋದನೆಗೆ ಹತ್ತಿರವಿರುವ 4 ಲಸಿಕೆಗಳಿವೆ. ಪಾಲುದಾರಿಕೆ ಮೂಲಕ ಭಾರತವು ಎಝ್ಯಡ್ /ಆಕ್ಸ್‌ಫರ್ಡ್‌ನ ಎರಡು ವೈರಲ್ ವೆಕ್ಟರ್ ಲಸಿಕೆ ಮತ್ತು ನೊವಾವಾಕ್ಸ್‌ನ ಪ್ರೋಟೀನ್ ಲಸಿಕೆಗಳನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಸ್ಟೇಜ್- I / ಸ್ಟೇಜ್- II ಪ್ರಯೋಗ ಹಂತದ ದತ್ತಾಂಶವು ಸುರಕ್ಷತೆ ಮತ್ತು ರೋಗನಿರೋಧಕ ಪ್ರತಿಕ್ರಿಯೆ ಹೊರಹೊಮ್ಮಿಸುವ ಲಸಿಕೆಯ ಸಾಮರ್ಥ್ಯ ಎರಡಕ್ಕೂ ಭರವಸೆಯಂತೆ ಕಾಣುತ್ತದೆ ಎಂದು ಹೇಳಿದೆ.
ಭಾರತದಲ್ಲಿ 2021ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಮಾರುಕಟ್ಟೆಯಲ್ಲಿ ಅನುಮೋದಿತ ಲಸಿಕೆ ಬರಲಿದೆ ಎಂದು ನಾವೂ ಆಶಾವಾದಿಗಳಾಗಿದ್ದೇವೆ ಎಂದಿದೆ.
ಲಸಿಕೆಯ ಪ್ರತಿ ಡೋಸೇಜ್‌ಗೆ 3-6 ಡಾಲರ್ (225 ರಿಂದ 550 ರೂ.) ಆಗಬಹುದು. ಅನುಷ್ಠಾನದಲ್ಲಿ ಅಲ್ಪ ಸವಾಲುಗಳು ಎದುರಾಗಬಹುದು. ದೊಡ್ಡ ಪ್ರಮಾಣದ ವಯಸ್ಕ ವ್ಯಾಕ್ಸಿನೇಷನ್ ಯೋಜನೆಗಳು ನಿಧಾನಕ್ಕೆ ಸಾಗಬಹುದು ಎಂದು ಅಭಿಪ್ರಾಯಪಟ್ಟಿದೆ.
2011ರಲ್ಲಿ ಪೋಲಿಯೋ ನಿರ್ಮೂಲನೆ ಹಾಗೂ ದಡಾರ ಮತ್ತು ರುಬೆಲ್ಲಾ ತಡೆಗಟ್ಟುವ ಮಿಷನ್ ಇಂದ್ರಧನುಷ್ ಇತ್ತೀಚಿನ ದೊಡ್ಡ ಪ್ರಮಾಣದ ಅಭಿಯಾನಗಳಿಗೆ ಉದಾಹರಣೆಗಳಾಗಿವೆ. ಆದರೆ, ಕೋವಿಡ್-19 ಲಸಿಕೆ ಅನುಷ್ಠಾನ ಕಾರ್ಯಕ್ರಮದ ಬೇಡಿಕೆ 1/3ರಷ್ಟಿದೆ.
ಕೋಲ್ಡ್ಸ್ಟೋರೆಜ್ ಮತ್ತು ತರಬೇತಿ ಪಡೆದ ಮಾನವಶಕ್ತಿ ಅತಿದೊಡ್ಡ ಅಡೆತಡೆಗಳು ಲಸಿಕೆ ಅನುಷ್ಠಾನಕ್ಕೆ ಎದುರಾಗಬಹುದು. 2x ಥ್ರೋಪುಟ್ (ವಸ್ತುವಿನ ಒಟ್ಟು ಮೊತ್ತ) ಊಹಿಸಿದ್ದರೂ ಪ್ರಸ್ತುತ ಸರ್ಕಾರಿ ಕಾರ್ಯಕ್ರಮದ ಅನುಷ್ಠಾನಕ್ಕೆ 18-20 ತಿಂಗಳು ತೆಗೆದುಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಲಸಿಕೆಯನ್ನು ಮೊದಲು ಆರೋಗ್ಯ ಕಾರ್ಯಕರ್ತರು, ಪೊಲೀಸರು ಮತ್ತು ಪೌರ ಕಾರ್ಮಿಕರಿಗೆ ಆದ್ಯತೆ ಸಿಗಲಿದೆ. ನಂತರ ಲಸಿಕೆಯ ಲಭ್ಯತೆಯನ್ನು ಆಧರಿಸಿ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ, ಅಗತ್ಯ ವಲಯದ ಕಾರ್ಮಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಜನಸಾಮಾನ್ಯರಿಗೆ ಹಂಚಲಾಗುತ್ತದೆ ಎಂದು ಬ್ರೋಕರೆಜ್ ಹೇಳಿದೆ.