ETV Bharat / business

ಚಿನ್ನದ ದರದಲ್ಲಿ 2,000 ರೂ. ಕುಸಿತ: 10 ಗ್ರಾಂ. ಬಂಗಾರದ ಬೆಲೆ ಎಷ್ಟಿರಬಹುದು?

author img

By

Published : Jun 9, 2020, 4:43 PM IST

ಎಂಸಿಎಕ್ಸ್‌ನಲ್ಲಿನ ಬೆಳ್ಳಿ ಫ್ಯೂಚರ್​, ಪ್ರತಿ ಕೆ.ಜಿ. ಮೇಲೆ ಶೇ 0.12ರಷ್ಟು ಇಳಿಕೆಯಾಗಿ 48,127 ರೂ.ಗೆ ತಲುಪಿದೆ. ಸುಧಾರಿತ ಜಾಗತಿಕ ಅಪಾಯದ ಮನೋಭಾವವು ಸುರಕ್ಷಿತ ಚಿನ್ನದ ಮೇಲಿನ ಅವಲಂಬನೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಭಾರತದಲ್ಲಿ 10 ಗ್ರಾಂ. ಚಿನ್ನದ ಬೆಲೆಗಳು ಕಳೆದ ತಿಂಗಳ ದಾಖಲೆಯ ಗರಿಷ್ಠ 48,000 ರೂ.ಯಿಂದ 2,000 ರೂ.ಯಷ್ಟು ಕುಸಿದಿದೆ.

Gold prices
ಚಿನ್ನ

ಮುಂಬೈ: ಈ ಹಿಂದಿನ ವಹಿವಾಟಿನ ಅವಧಿಯಲ್ಲಿ ತೀವ್ರ ಲಾಭ ಗಳಿಸಿದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಭಾರತೀಯ ಮಾರುಕಟ್ಟೆಗಳಲ್ಲಿ ತಗ್ಗಿದೆ.

ಈ ಹಿಂದಿನ ವ್ಯಾಪಾರದ ಅವಧಿಯಲ್ಲಿ 400 ರೂ. ಏರಿಕೆಯ ನಂತರ ಇಂದು ಎಂಸಿಎಕ್ಸ್​ನಲ್ಲಿ ಆಗಸ್ಟ್ ತಿಂಗಳ ಫ್ಯೂಚರ್ 10 ಗ್ರಾಂ. ಮೇಲೆ ಶೇ 0.06ರಷ್ಟು ಕುಸಿದು ಅಂತಿಮವಾಗಿ 46,072 ರೂ.ಗೆ ತಲುಪಿದೆ.

ಈ ಹಿಂದಿನ ವಹಿವಾಟಿನ ಅವಧಿಯ ಎಂಸಿಎಕ್ಸ್‌ಗಿಂತ ಬೆಳ್ಳಿ ಫ್ಯೂಚರ್​, ಪ್ರತಿ ಕೆ.ಜಿ. ಮೇಲೆ ಶೇ 0.12ರಷ್ಟು ಇಳಿಕೆಯಾಗಿ 48,127 ರೂ.ಗೆ ತಲುಪಿದೆ. ಸುಧಾರಿತ ಜಾಗತಿಕ ಅಪಾಯದ ಮನೋಭಾವವು ಸುರಕ್ಷಿತ ಧಾಮ ಚಿನ್ನದ ಮೇಲಿನ ಅವಲಂಬನೆ ಸ್ವಲ್ಪಮಟ್ಟಿಗೆ ತಗ್ಗಿಸಿದೆ. ಭಾರತದಲ್ಲಿ 10 ಗ್ರಾಂ. ಚಿನ್ನದ ಬೆಲೆಗಳು ಕಳೆದ ತಿಂಗಳ ದಾಖಲೆಯ ಗರಿಷ್ಠ, 48,000 ರೂ.ಯಿಂದ 2,000 ರೂ.ಯಷ್ಟು ಕುಸಿದಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಇಂದು ಏರಿಕೆಯಾಗಿದ್ದು, ಅಮೆರಿಕದ ಡಾಲರ್ ದುರ್ಬಲಗೊಂಡಿದೆ. ಜಾಗತಿಕವಾಗಿ ಕೊರೊನಾ ವೈರಸ್ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತವೆ ಎಂಬ ಆತಂಕ ಮುಂದುವರಿದಿದೆ.

ನಾಳೆ ಕೊನೆಗೊಳ್ಳುವ ಅಮೆರಿಕ ಫೆಡ್​ನ ಎರಡು ದಿನಗಳ ಹಣಕಾಸು ನೀತಿ ಸಭೆಯ ಫಲಿತಾಂಶ ಏನಾಗಲಿದೆ ಎಂದು ಚಿನ್ನದ ವ್ಯಾಪಾರಿಗಳು ಎದುರು ನೋಡುತ್ತಿದ್ದಾರೆ. ಬಡ್ಡಿದರಗಳು ಕಡಿಮೆ ಆದಾಗ ಬಂಗಾರ ಲಾಭ ಪಡೆದುಕೊಳ್ಳಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.