ETV Bharat / business

ವಾರೆವ್ಹಾ..! ಬಂಗಾರದ ಬೆಲೆಯಲ್ಲಿ 4,000 ರೂ. ಇಳಿಕೆ!

ವಾರದಿಂದ ವಾರಕ್ಕೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸಮತಟ್ಟಾಗಿದ್ದವು. ಆದರೆ ಆಗಸ್ಟ್ 7 ರಿಂದ ಗರಿಷ್ಠ 56,200 ರೂ.ರವರೆಗೆ ಏರಿಕೆ ಆಗಿದ್ದ ಚಿನ್ನ, ಈ ವಾರದ ಅಂತ್ಯದ ವೇಳೆಗೆ 4,000 ರೂ.ನಷ್ಟು ಕಡಿಮೆಯಾಗಿದೆ.

Gold Rate
ಚಿನ್ನದ ದರ
author img

By

Published : Aug 22, 2020, 5:46 PM IST

ನವದೆಹಲಿ: ಜಾಗತಿಕ ದರಗಳಲ್ಲಿನ ಇಳಿಕೆಯೊಂದಿಗೆ ಭಾರತೀಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಈ ವಾರ ದುರ್ಬಲವಾಗಿ ಕೊನೆಗೊಂಡಿವೆ.

ಮಲ್ಟಿ ಕಮೋಡಿಟಿ ಎಕ್ಸ್ ಚೇಂಜ್​​ನಲ್ಲಿ (ಎಂಸಿಎಕ್ಸ್​) ಅಕ್ಟೋಬರ್ ಚಿನ್ನದ ಫ್ಯೂಚರ್​ ದರ ಶುಕ್ರವಾರ 10 ಗ್ರಾಂ. ಮೇಲೆ ಶೇ 0,3ರಷ್ಟು ಕುಸಿದು 52,001 ರೂ.ಗೆ ತಲುಪಿತು. ಸೆಪ್ಟೆಂಬರ್ ಬೆಳ್ಳಿ ಫ್ಯೂಚರ್​ ಪ್ರತಿ ಕೆಜಿ ಮೇಲೆ ಶೇ 1ರಷ್ಟು ಇಳಿಕೆಯಾಗಿ 66,954 ರೂ.ಗೆ ಇಳಿದಿದೆ.

ವಾರದಿಂದ ವಾರಕ್ಕೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸಮತಟ್ಟಾಗಿದ್ದವು. ಆದರೆ, ಆಗಸ್ಟ್ 7 ರಿಂದ ಗರಿಷ್ಠ 56,200 ರೂ.ರವರೆಗೆ ಏರಿಕೆ ಆಗಿದ್ದ ಚಿನ್ನವು ಈ ವಾರದ ಅಂತ್ಯದ ವೇಳೆಗೆ 4,000 ರೂ.ಯಷ್ಟು ಕಡಿಮೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಡಾಲರ್‌ ಮೌಲ್ಯದ ಮರು ಚೇತರಿಕೆ ಮತ್ತು ಅಮೆರಿಕ ವ್ಯವಹಾರ ಚಟುವಟಿಕೆಯಲ್ಲಿ ಕಂಡು ಬಂದು ಚೈತನ್ಯ ಈ ವಾರ ಚಿನ್ನದ ಬೇಡಿಕೆ ಸ್ವಲ್ಪಮಟ್ಟಿಗೆ ತಗ್ಗಿದೆ ಎನ್ನಲಾಗುತ್ತಿದೆ. ಅನೇಕ ವಿಶ್ಲೇಷಕರು ಚಿನ್ನದ ಬೆಲೆಯಲ್ಲಿ ದೀರ್ಘಾವಧಿಯ ಏರಿಕೆ ಇನ್ನೂ ಹಾಗೇ ಇದೆ ಎಂದು ಭಾವಿಸಿದ್ದಾರೆ.

ಅಮೆರಿಕ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನವು ಔನ್ಸ್‌ಗೆ 1,942 ಡಾಲರ್​ಗೆ ಇಳಿದಿದೆ. ಆರ್ಥಿಕ ಉತ್ತೇಜಕ ಪ್ಯಾಕೇಜ್ ಒಪ್ಪಂದದ ವಿಳಂಬ, ಅಮೆರಿಕ ಡಾಲರ್ ಮತ್ತು ನೈಜ ದರಗಳ ಬೆಲೆಗಳ ಅನಿಶ್ಚಿತತೆಯಿಂದಾಗಿ ವಾರದ ಆರಂಭದಲ್ಲಿ ಔನ್ಸ್​ ಚಿನ್ನವು 2,000 ಡಾಲರ್​ ಮೇಲೆ ಮಾರಾಟ ಆಗುತ್ತಿತ್ತು.

ಶುಕ್ರವಾರದ ವಹಿವಾಟಿನಂದು ನಾಸ್ಡಾಕ್ ಮತ್ತು ಎಸ್ & ಪಿ 500 ದಾಖಲೆಯ ಗರಿಷ್ಠ ಮಟ್ಟ ತಲುಪಿತ್ತು. ಎಂಟು ವಾರಗಳ ಇಳಿಕೆಯ ಹಾದಿಯಲ್ಲಿದ್ದ ಯುಎಸ್​ ಡಾಲರ್, ವ್ಯವಹಾರ ಚಟುವಟಿಕೆ ಮತ್ತು ಹೌಸಿಂಗ್​ ಮಾರಾಟದ ಏರಿಕೆ ಬೆಂಬಲದಿಂದ ಏರಿಕೆಯತ್ತ ಹೊರಳಿದೆ. ಈ ಎಲ್ಲ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.