ನವದೆಹಲಿ: ಫ್ಯೂಚರ್ ವಹಿವಾಟಿನಲ್ಲಿ ಚಿನ್ನದ ಬೆಲೆಗಳು ಬುಧವಾರ 230 ರೂ.ಯಷ್ಟು ಏರಿಕೆಯಾಗಿ 10 ಗ್ರಾಂ.ಗೆ 49,213 ರೂ.ಗೆ ತಲುಪಿದೆ.
ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್‌ನಲ್ಲಿ ಫೆಬ್ರವರಿ ವಿತರಣೆಯ ಚಿನ್ನದ ಒಪ್ಪಂದದ 6,639 ಲಾಟ್‌ಗಳ ವಹಿವಾಟಿನಲ್ಲಿ 10 ಗ್ರಾಂ.ಗೆ 49,213 ರೂ.ಯಷ್ಟಾಗಿ 230 ರೂ. ಅಥವಾ ಶೇ 0.47ರಷ್ಟು ಹೆಚ್ಚಳವಾಗಿದೆ. ಬೆಳ್ಳಿದರ ಕೂಡ ಪ್ರತಿ ಕೆಜಿ ಮೇಲೆ 453 ರೂ.ಯಷ್ಟು ಹೆಚ್ಚಳವಾಗಿ 66,489 ರೂ.ಗೆ ತಲುಪಿದೆ.
ಚಿನ್ನದ ಬೆಲೆಗಳು ನ್ಯೂಯಾರ್ಕ್‌ನಲ್ಲಿ ಔನ್ಸ್‌ಗೆ 0.70ರಷ್ಟು ಹೆಚ್ಚಳವಾಗಿ 1,853 ಡಾಲರ್‌ನಲ್ಲಿ ವಹಿವಾಟು ನಡೆಸಿದವು. ಔನ್ಸ್ ಮೇಲೆ ಬೆಳ್ಳಿ ಶೇ 0.91ರಷ್ಟು ಏರಿಕೆಯಾಗಿ 25.55 ಡಾಲರ್‌ನಲ್ಲಿ ವಹಿವಾಟು ನಿರತವಾಗಿದೆ.
ಇದನ್ನೂ ಓದಿ: ಕರೆಂಟ್ಗೆ ಶಾಕ್ ಕೊಟ್ಟ ಎಲೆಕ್ಟ್ರಿಕ್ ಪವರ್ ಬೇಡಿಕೆ: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿತ!