ETV Bharat / business

ಐಬಿಸಿ ಕಾಯ್ದೆಯಡಿ ಭರ್ಜರಿ ಸಾಲ ವಸೂಲಿ... ₹ 68 ಸಾವಿರ ಕೋಟಿ ಸಂಗ್ರಹ

author img

By

Published : Apr 16, 2019, 10:06 AM IST

2019ರ ಫೆಬ್ರವರಿಗೆ 28ರ ವರೆಗೆ ಐಬಿಸಿಯಡಿ ದಾಖಲಾಗಿರುವ 88 ಪ್ರಕರಣಗಳಲ್ಲಿ ಬ್ಯಾಂಕ್​ಗಳು ಹಾಗೂ ಉದ್ದಿಮೆಗಳಿಗೆ ಸರಕು ಹಾಗೂ ಸೇವೆ ಒದಗಿಸಿದ ಸಂಸ್ಥೆಗಳಿಗೆ ಒಟ್ಟು ₹ 1.42 ಲಕ್ಷ ಕೋಟಿ ಬರಬೇಕಾಗಿತ್ತು. ದಾಖಲಾಗಿದ್ದ ಪ್ರಕರಣಗಳ ಪೈಕಿ ಶೇ 48ರಷ್ಟು ಸಾಲ ವಸೂಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಆರ್ಥಿಕ ಬಿಕ್ಕಟ್ಟಿಗೆ ಈಡಾಗಿರುವ 88 ಉದ್ದಿಮೆಗಳಿಂದ ಬರಬೇಕಾಗಿದ್ದ ₹ 1.42 ಲಕ್ಷ ಕೋಟಿಯಲ್ಲಿ ಶೇ 48ರಷ್ಟು ಹಣವನ್ನು ದಿವಾಳಿ ಸಂಹಿತೆ ಕಾಯ್ದೆಯಡಿ (ಐಬಿಸಿ) ಮರಳಿ ಪಡೆಯುವಲ್ಲಿ ಸಾಲದಾತರು ಯಶ ಕಂಡಿದ್ದಾರೆ.

ಹಣಕಾಸು ನಷ್ಟಕ್ಕೆ ಗುರಿಯಾಗಿ ಸಾಲ ಮರುಪಾವತಿ ಮಾಡದ ಕಂಪನಿಗಳಿಂದ ಕಾಲಮಿತಿಯಲ್ಲಿ ಹಣ ವಸೂಲಿ ಮಾಡುವಲ್ಲಿ ಹಣಕಾಸು ನಷ್ಟ ಹಾಗೂ ದಿವಾಳಿ ಸಂಹಿತೆ ಕಾಯ್ದೆ ನೆರವಾಗಿದೆ. ಇದರಡಿ ₹ 1.42 ಲಕ್ಷ ಕೋಟಿ 88 ಉದ್ದಿಮೆಗಳಿಂದ ಸ್ವೀಕರಿಸಲಾಗಿದೆ ಎಂದು ಹಣಕಾಸು ನಷ್ಟ ಮತ್ತು ದಿವಾಳಿ ಮಂಡಳಿಯ (ಐಬಿಬಿಐ) ಮಾಹಿತಿ ನೀಡಿದೆ.

2019ರ ಫೆಬ್ರವರಿಗೆ 28ರ ವರೆಗೆ ಐಬಿಸಿಯಡಿ ದಾಖಲಾಗಿರುವ 88 ಪ್ರಕರಣಗಳಲ್ಲಿ ಬ್ಯಾಂಕ್​ಗಳು ಹಾಗೂ ಉದ್ದಿಮೆಗಳಿಗೆ ಸರಕು ಹಾಗೂ ಸೇವೆ ಒದಗಿಸಿದ ಸಂಸ್ಥೆಗಳಿಗೆ ಒಟ್ಟು ₹ 1.42 ಲಕ್ಷ ಕೋಟಿ ಬರಬೇಕಾಗಿತ್ತು. ದಾಖಲಾಗಿದ್ದ ಪ್ರಕರಣಗಳ ಪೈಕಿ ಶೇ 48ರಷ್ಟು ಸಾಲ ವಸೂಲಿ ಆಗಿದ್ದು, ಈ ಮೂಲಕ ₹ 68,766 ಕೋಟಿ ಸಂಗ್ರಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದೆ.

ದಿವಾಳಿ ಸಂಹಿತೆ ಕಾಯ್ದೆಯಡಿ ಸ್ಥಾಪಿಸಿರುವ ಐಬಿಬಿಐ, ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಗೆ (ಎನ್‌ಸಿಎಲ್‌ಎಟಿ) ಈ ಮಾಹಿತಿ ಒದಗಿಸಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.