ನವದೆಹಲಿ: ಜೊಮ್ಯಾಟೋ, ಸ್ವಿಗ್ಗಿ ಮತ್ತು ಈಸಿಡಿನರ್ನಂತಹ ಆನ್‌ಲೈನ್ ಆಹಾರ ವಿತರಣಾ ಸೇವಾ ಸಂಸ್ಥೆಗಳ ಅತಿಯಾದ ರಿಯಾಯಿತಿಯನ್ನು ಪ್ರಶ್ನಿಸಿ, ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಅಡಿಯಲ್ಲಿನ 300ಕ್ಕೂ ಅಧಿಕ ರೆಸ್ಟೋರೆಂಟ್‌ಗಳು ಹ್ಯಾಸ್ಟ್ಯಾಗ್ (#Logout campaign) ಲಾಗ್ ಔಟ್ ಕ್ಯಾಂಪೇನ್ ಆರಂಭಿಸಿವೆ.
Inc42.com ವರದಿಯ ಪ್ರಕಾರ, ಈ ರೆಸ್ಟೋರೆಂಟ್‌ಗಳು ಜೊಮ್ಯಾಟೋ ಗೋಲ್ಡ್, ಈಜಿಡಿನರ್, ಡೈನೌಟ್‌ನ ಗೌರ್ಮೆಟ್ ಪಾಸ್‌ಪೋರ್ಟ್, ನಿಯರ್‌ಬಾಯ್, ಮ್ಯಾಜಿಕ್ಪಿನ್ ಸೇರಿದಂತೆ ಇತರೆ ಆಹಾರ ಸೇವಾ ಸಂಸ್ಥೆಗಳಿಂದ ದೂರ ಉಳಿಯಲು ನಿರ್ಧರಿಸಿವೆ.
ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಯಾವುದೇ ದಿನದ ರಿಯಾಯಿತಿಯ ವರ್ತನೆ ಉಲ್ಬಣಗೊಳ್ಳುತ್ತಿದೆ. ದಿಢೀರ್ ಆಗಿ ಉಲ್ಬಣಗೊಳ್ಳುವ ರಿಯಾಯಿತಿಯ ಚಟದಿಂದ ಗ್ರಾಹಕರನ್ನು ಹಿಮ್ಮುಖಗೊಳಿಸಲು ಎಲ್ಲ ರೆಸ್ಟೋರೆಂಟ್‌ಗಳು ಒಗ್ಗೂಡಿಕೊಂಡಿವೆ ಎಂದು ಎನ್‌ಆರ್‌ಎಐ ಅಧ್ಯಕ್ಷ ರಾಹುಲ್ ಸಿಂಗ್ ಹೇಳಿದ್ದಾರೆ.
ಜೊಮ್ಯಾಟೋ ಗರಿಷ್ಠ ರಿಯಾಯಿತಿಯ ಗೋಲ್ಡ್ ಚಂದಾದಾರಿಕೆ ಆರಂಭಿಸಿದ ಕಳೆದ ಎಂಟು ತಿಂಗಳಲ್ಲಿ ಶೇ 100ರಷ್ಟು ಬೆಳೆದಿದೆ. ಆಹಾರ ಭಕ್ಷ್ಯಕರು ಒಂದು ಖರ್ಚಿನಲ್ಲಿ ಎರಡು ಅವಧಿಗೆ ಆಗುವಷ್ಟು ಆಹಾರ ಭಕ್ಷ್ಯಗಳ ಸಂಪೂರ್ಣ ಮೆನು ಅನ್ನು ಆದೇಶಿಸುತ್ತಿದ್ದಾರೆ ಎಂದು ಜೊಮ್ಯಾಟೋ ಸಹ ಸಂಸ್ಥಾಪಕ/ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗೌರವ್ ಗುಪ್ತಾ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿನ ಸುಮಾರು 350 ರೆಸ್ಟೋರೆಂಟ್‌ಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ದೆಹಲಿ ಮತ್ತು ಮುಂಬೈನ ಎನ್‌ಆರ್‌ಎಐ ಅಡಿಯಲ್ಲಿರುವ ರೆಸ್ಟೋರೆಂಟ್‌ಗಳು ಕಾರ್ಯಾಚರಣೆ ವ್ಯಾಪ್ತಿಯಿಂದ ಹೊರಗುಳಿಯುವುದಾಗಿ ಬೆದರಿಕೆ ಹಾಕಿವೆ ಎಂದು ವರದಿಯಾಗಿದೆ.
ಕಳೆದ ತಿಂಗಳು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯ (ಡಿಪಿಐಐಟಿ) ಅಧಿಕಾರಿಗಳು ಜೊಮ್ಯಾಟೋ, ಸ್ವಿಗ್ಗಿ ಮತ್ತು ಆಫ್‌ಲೈನ್ ಉದ್ಯಮ ವಲಯದ ಮುಖಂಡರ ಸಭೆ ನಡೆಸಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳ ಪರಿಹರ ಮತ್ತು ಉದ್ಯಮದಲ್ಲಿ ಸಮಾನವಾದ ಬೆಳವಣಿಗೆ ಹೆಚ್ಚಿಸಲು ನಿರ್ದೇಶಿಸಿದ್ದಾರೆ.
ದೇಶಾದ್ಯಂತ ಆಫ್‌ಲೈನ್ ರೆಸ್ಟೋರೆಂಟ್‌ಗಳ ಸೇವೆಯ ಮೇಲೆ ಪರಿಣಾಮ ಬೀರಿದ ಆನ್‌ಲೈನ್ ಆಹಾರ ಪ್ಲ್ಯಾಟ್‌ಫಾರ್ಮ್‌ಗಳಿಂದ ಆಕರ್ಷಕ ರಿಯಾಯಿತಿ ಮತ್ತು ಖಾಸಗಿ ಲೇಬಲ್ ಬ್ರಾಂಡ್‌ಗಳ ಹಿಂತೆಗೆತದ ಕುರಿತು ಚರ್ಚಿಸಿದ್ದಾರೆ.