ನವದೆಹಲಿ: ನೀವು ಗ್ಯಾಸ್ ಸಿಲಿಂಡರ್ ಕಾಯ್ದಿರಿಸಿ ಸ್ವಲ್ಪ ಹಣ ಉಳಿಸಲು ಬಯಸಿದರೆ ಪೇಟಿಎಂ ವಿಶೇಷ ಕೊಡುಗೆ ನೀಡುತ್ತಿದೆ.
ನೀವು ಪೇಟಿಎಂ ಮೂಲಕ ಇಂಡೇನ್ ಅಥವಾ ಭಾರತ್ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ, ನಿಮಗೆ 500 ರೂಪಾಯಿ ಕ್ಯಾಶ್‌ಬ್ಯಾಕ್ ಸಿಗುತ್ತದೆ.
ಪೇಟಿಎಂನಲ್ಲಿ ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ಈ ಹಂತಗಳನ್ನು ಅನುಸರಿಸಿ:
1) ಮೊಬೈಲ್‌ನಲ್ಲಿ ಪೇಟಿಎಂ ಅಪ್ಲಿಕೇಷನ್ ತೆರೆಯಿರಿ.
2) ಅಪ್ಲಿಕೇಷನ್ ತೆರೆದ ನಂತರ ಹೋಮ್ ಸ್ಕ್ರೀನ್‌ನಲ್ಲಿ ಆಯ್ಕೆಯು ಗೋಚರಿಸದಿದ್ದರೆ ಶೋ ಮೋರ್ ಬಟನ್ ಕ್ಲಿಕ್ ಮಾಡಿ.
3) ಎಡಭಾಗದ ರೀಚಾರ್ಜ್ ಮತ್ತು ಪೇ ಬಿಲ್‌ಗಳ ಆಯ್ಕೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಹಲವು ಆಯ್ಕೆಗಳು ಸಿಗುತ್ತವೆ. ಅವುಗಳಲ್ಲಿ ಬುಕ್ ಎ ಸಿಲಿಂಡರ್ ಆಯ್ದುಕೊಳ್ಳಿ.
4) ಬುಕ್ ಸಿಲಿಂಡರ್ ಕ್ಲಿಕ್ ಮಾಡಿದ ನಂತರ, ನೀವು ಅನಿಲ ಪೂರೈಕೆದಾರರಾದ ಭಾರತ್ ಗ್ಯಾಸ್ (ಭಾರತ್ ಗ್ಯಾಸ್), ಇಂಡಿಯನ್ (ಇಂಡೇನ್ ಗ್ಯಾಸ್) ಅಥವಾ ಎಚ್‌ಪಿ ಗ್ಯಾಸ್ (ಎಚ್‌ಪಿ ಗ್ಯಾಸ್) ಪೈಕಿ ನೀವು ಪಡೆಯುತ್ತಿರುವ ಪೂರೈಕೆದಾರರನ್ನು ಆಯ್ದುಕೊಳ್ಳಿ.
5) ಸಿಲಿಂಡರ್ ಪೂರೈಕೆದಾರರನ್ನು ಆಯ್ಕೆ ಮಾಡಿದ ನಂತರ, ಗೇಜ್ ಏಜೆನ್ಸಿಯಲ್ಲಿ ನೀಡಲಾದ ರಿಜಿಸ್ಟರ್ ಮೊಬೈಲ್ ಸಂಖ್ಯೆ ಅಥವಾ ಎಲ್‌ಪಿಜಿ ಐಡಿ ನಮೂದಿಸಿ.
6) ನೀವು ವಿವರಗಳನ್ನು ನಮೂದಿಸಿ ಮತ್ತು ಪ್ರೊಸೀಡ್ ಕ್ಲಿಕ್ ಮಾಡಿದ ತಕ್ಷಣ ಎಲ್‌ಪಿಜಿ ಐಡಿ, ಗ್ರಾಹಕರ ಹೆಸರು ಮತ್ತು ಏಜೆನ್ಸಿಯ ಹೆಸರು ಕಾಣಿಸುತ್ತವೆ. ಕೆಳಭಾಗದಲ್ಲಿ ಗ್ಯಾಸ್ ಸಿಲಿಂಡರ್‌ಗೆ ವಿಧಿಸುವ ಮೊತ್ತವಿರುತ್ತದೆ, ಎಲ್ಲವನ್ನು ಭರ್ತಿ ಮಾಡಿ.
500 ರೂ. ಕ್ಯಾಶ್‌ಬ್ಯಾಕ್ ಪಡೆಯಲು ನಿಯಮ ಮತ್ತು ಷರತ್ತುಗಳು:
- ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಮೊದಲ ಬಾರಿಗೆ ಕಾಯ್ದಿರಿಸಿದರೆ 500 ರೂ. ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.
- FIRSTLPGನ ಕೋಡ್ ಅನ್ನು ಪ್ರೋಮೋ ಕೋಡ್ ವಿಭಾಗದಲ್ಲಿ ನಮೂದಿಸಬೇಕು.
- ಈ ಪ್ರೊಮೊ ಕೋಡ್‌ನಲ್ಲಿ 500 ರೂ.ವರೆಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ.
- ನೀವು ಪ್ರೋಮೋ ಕೋಡ್ ನಮೂದಿಸಲು ಮರೆತರೆ, ಅಂತಹ ಪರಿಸ್ಥಿತಿಯಲ್ಲಿ ಕ್ಯಾಶ್‌ಬ್ಯಾಕ್ ಸಿಗುವುದಿಲ್ಲ. ಈ ಪ್ರೋಮೋ ಕೋಡ್ ಪೇಟಿಂಎ ಮೂಲಕ ಮೊದಲ ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ಮಾತ್ರವಿರುತ್ತದೆ.
- ಗ್ರಾಹಕರು ಈ ಪೇಟಿಎಂ ಆಫರ್ ಅವಧಿಯಲ್ಲಿ ಒಮ್ಮೆ ಮಾತ್ರ ಬಳಸಬಹುದು. ಕನಿಷ್ಠ ಮೊತ್ತವು 500 ರೂಪಾಯಿಗಳಾಗಿದ್ದಾಗ ಮಾತ್ರ ಈ ಕೊಡುಗೆಯ ಲಾಭ ನೀಡಲಾಗುತ್ತದೆ.
- ಈ ಕೊಡುಗೆ 2020ರ 31 ಡಿಸೆಂಬರ್ ತನಕ ಮಾನ್ಯವಾಗಿರುತ್ತದೆ.