ಜಗತ್ತಿನಾದ್ಯಂತ ಕೊರೊನಾ ಭೀತಿ ಎಲ್ಲರನ್ನೂ ಕಾಡುತ್ತಿದೆ. ಈ ಹಿನ್ನೆಲೆ ಸ್ಯಾನಿಟೈಸರ್ಗೆ ಭಾರೀ ಬೇಡಿಕೆ ಉಂಟಾಗಿದ್ದು, ಹಲವಾರು ಮದ್ಯದ ಕಂಪನಿಗಳು ಈಗ ಮದ್ಯ ತಯಾರು ಮಾಡುವುದನ್ನು ಬಿಟ್ಟು ಸ್ಯಾನಿಟೈಸರ್ ತಯಾರು ಮಾಡಲು ಮುಂದಾಗಿವೆ.
ಬಕಾರ್ಡಿ ಕಂಪನಿಯವರು ಮದ್ಯ ತಯಾರು ಮಾಡುವುದನ್ನು ನಿಲ್ಲಿಸಿ ಹ್ಯಾಂಡ್ ಸ್ಯಾನಿಟೈಜರ್ ತಯಾರು ಮಾಡುವುದಾಗಿ ಈ ಹಿಂದೆ ತಿಳಿಸಿದ್ದರು. ಅದರಂತೆ ಈಗ ಈ ಉತ್ಫಾದನೆಗೆ ಮುಂದಾಗಿದ್ದಾರೆ. ಪೆರ್ನೋಡ್-ರಿಕಾರ್ಡ್ ಕಂಪನಿ ಕೂಡ ಕೆಲವು ದಿನಗಳ ಹಿಂದೆ ಘೋಷಿಸಿದಂತೆ ಮತ್ತು ಎಲ್ವಿಎಂಹೆಚ್ ಸುಗಂಧ ದ್ರವ್ಯ ಕಾರ್ಖಾನೆಗಳು ವಾರದ ಮುಂಚೆಯೇ ಘೋಷಿಸಿದಂತೆ, ಬಕಾರ್ಡಿ ಗೆ ಸಹಾಯ ಮಾಡಲು ಜಗತ್ತಿನಾದ್ಯಂತ ಇರುವ ತನ್ನ ಉತ್ಪಾದನಾ ಘಟಕಗಳನ್ನು ಸ್ಯಾನಿಟೈಸರ್ ಉತ್ಪಾದನೆಗೆ ತಕ್ಕಂತೆ ಪರಿವರ್ತಿಸಲು ಮುಂದಾಗಿವೆ.
ಇನ್ನು ಹ್ಯಾಂಡ್ ಸ್ಯಾನಿಟೈಜರ್ ಉತ್ಪಾದಿಸಲು ಬಕಾರ್ಡಿ ತನ್ನ ಆಲ್ಕೋಹಾಲ್ ಅನ್ನು ಬಳಕೆ ಮಾಡಿಕೊಳ್ಳುತ್ತದೆ. ಇದು ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಡಬ್ಲುಹೆಚ್ಒ ಶಿಫಾರಸು ಮಾಡಿದ ಆಲ್ಕೋಹಾಲ್ ಕಂಟೆಂಟ್ ಅನ್ನು ಒಳಗೊಂಡಿದೆ.
![ಕೊರೊನಾ ಸೋಂಕು](https://etvbharatimages.akamaized.net/etvbharat/prod-images/768-512-6520716-987-6520716-1584984279686_3003newsroom_1585535351_467.jpg)
ಬಕಾರ್ಡಿಯ ಪೋರ್ಟ್ಫೋಲಿಯೋ ಅಡಿಯಲ್ಲಿ ಗ್ರೇ ಗೂಸ್ ವೋಡ್ಕಾ, ಬಾಂಬೆ ಸಫೈರ್ ಜಿನ್, ಬಕಾರ್ಡಿ ರಮ್ ಮತ್ತು ಇತರ 200 ಬ್ರಾಂಡ್‌ಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿವೆ. ವಿಶ್ವದ ಅತಿದೊಡ್ಡ ಖಾಸಗಿ ಸ್ವಾಮ್ಯದ ಹಾಗೂ ಕುಟುಂಬ ಸ್ವಾಮ್ಯದ ಸ್ಪಿರಿಟ್ಸ್ ಕಂಪನಿಯಾಗಿ ಬಕಾರ್ಡಿ ಕಾರ್ಯನಿರ್ವಹಿಸುತ್ತಿವೆ.
ಅತೀ ಬೇಡಿಕೆ ಮತ್ತು ಅತ್ಯಾವಶ್ಯಕವಾಗಿ ಬೇಕಾಗಿರುವ ಹ್ಯಾಂಡ್ ಸ್ಯಾನಿಟೈಸರ್ನ್ನು ಉತ್ಪಾದನೆ ಮಾಡಿ ಜಗತ್ತಿಗೆ ತನ್ನದೇ ಆದ ರೀತಿಯಲ್ಲಿ ಈ ದೈತ್ಯ ಕಂಪನಿ ಸಹಕಾರ ಮಾಡಲು ಮುಂದಾಗಿದೆ. ತಮ್ಮ ಉತ್ಪಾದನಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು 267,000 ಗ್ಯಾಲನ್ ಹ್ಯಾಂಡ್ ಸ್ಯಾನಿಟೈಜರ್ ಅನ್ನುಈ ಕಂಪನಿ ಉತ್ಪಾದಿಸಲಿದೆ.