ನವದೆಹಲಿ: ಆಹಾರ ಹಣದುಬ್ಬರ ಕಡಿಮೆಯಾದ ಕಾರಣ ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇ 1.22ಕ್ಕೆ ಇಳಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ನವೆಂಬರ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಶೇ 1.55ರಷ್ಟಿತ್ತು. ಈರುಳ್ಳಿ ಬೆಲೆಯಲ್ಲಿ ತೀವ್ರ ಕುಸಿತದಿಂದಾಗಿ ಡಿಸೆಂಬರ್‌ನಲ್ಲಿ ಆಹಾರ ಹಣದುಬ್ಬರ ಶೇ 0.92ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.
ಇದನ್ನೂ ಓದಿ: 1971 ವಿಜಯೋತ್ಸವ: ಭಾರತ-ಬಾಂಗ್ಲಾ ಯೋಧರಿಗೆ 'ಸುವರ್ಣ ವಿಜಯ ವರ್ಷ'ದ ಈ ಹಾಡು..
ಮಂಗಳವಾರ ಬಿಡುಗಡೆಯಾದ ಗ್ರಾಹಕ ಬೆಲೆ ಸೂಚ್ಯಂಕವು ಚಿಲ್ಲರೆ ಹಣದುಬ್ಬರ 2020ರ ಡಿಸೆಂಬರ್‌ನಲ್ಲಿ ಶೇ 4.59ಕ್ಕೆ ಇಳಿದಿದ್ದು, ನವೆಂಬರ್‌ನಲ್ಲಿ ಇದು ಶೇ 6.93ರಷ್ಟಿತ್ತು.