ETV Bharat / business

ಲಸಿಕೆ ನಷ್ಟ ಭರಿಸಲು ಜನರ ಜೇಬಿಗೆ ನಿರ್ಮಲಾ ಕೈ: ಬಜೆಟ್​ನಲ್ಲಿ ಪೆಟ್ರೋಲ್​, ಡೀಸೆಲ್​ಗೆ ಕೋವಿಡ್ ಸೆಸ್!

ಹೊಸ ಸೆಸ್ ಜೊತೆಗೆ ಆಟೋ ಇಂಧನಗಳ ಮೇಲೆ ಪ್ರತಿ ಲೀಟರ್ ಸೆಸ್​ಗೆ ಮತ್ತೊಂದು ಲೇಯರ್ ಸೇರ್ಪಡೆಯಾಗುವ ಪ್ರಸ್ತಾಪವು ಸರ್ಕಾರದ ಮುಂದಿದೆ. ಇದು ಒಂದು ವರ್ಷದಲ್ಲಿ 20,000 ಕೋಟಿ ರೂ. ಲಾಭ ತದುಕೊಡಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಯೋಜನೆಯು ಆಟೋ ಇಂಧನಗಳ ಬೆಲೆಯನ್ನು ಇನ್ನಷ್ಟು ದುಬಾರಿಯಾಗಿಸಬಹುದು.

Union Budget
Union Budget
author img

By

Published : Jan 23, 2021, 12:48 PM IST

Updated : Jan 23, 2021, 12:54 PM IST

ನವದೆಹಲಿ: ಜನವರಿ 16ರಂದು ದೇಶದಲ್ಲಿ ಪ್ರಾರಂಭಿಸಲಾದ ವಿಶ್ವದ ಅತಿದೊಡ್ಡ ಕೋವಿಡ್ ವಿರೋಧಿ ವ್ಯಾಕ್ಸಿನೇಷನ್ ಡ್ರೈವ್‌ಗೆ ಹಣ ಒದಗಿಸಲು ಅಗತ್ಯವಾದ ಸಂಪನ್ಮೂಲ ಸಜ್ಜುಗೊಳಿಸಲು ನಿಧಿ ಹಸಿವಿನಿಂದ ಬಳಲುತ್ತಿರುವ ಕೇಂದ್ರ ಸರ್ಕಾರ, ಹೊಸ ಕೊರೊನಾ ವೈರಸ್ ಸೆಸ್ ಅಥವಾ ಹೆಚ್ಚುವರಿ ಶುಲ್ಕ ವಿಧಿಸುವ ಮಾರ್ಗ ಪರಿಶೋಧಿಸುತ್ತಿದೆ. ಈ ವರ್ಷ ಹೆಚ್ಚುವರಿ ತೆರಿಗೆ ಪಾವತಿಸಲು ಜನಸಾಮಾನ್ಯರೂ ಸಿದ್ಧರಾಗಬೇಕಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡಸಲಿರುವ 2022ರ ಹಣಕಾಸು ವರ್ಷದ ಬಜೆಟ್ ಪ್ರಸ್ತಾಪದಲ್ಲಿ ಕೋವಿಡ್ ಸೆಸ್​ ಸೇರ್ಪಡೆ ಆಗಬಹುದು​ ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ ಕೋವಿಡ್ ಸೆಸ್ ವಿಧಿಸುವ ಯೋಜನೆಯೂ ಇದೆ. ಆದರೆ, ಈಗಾಗಲೇ ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿರುವ ಈ ಎರಡೂ ತೈಲಗಳ ಚಿಲ್ಲರೆ ಬೆಲೆಗಳನ್ನು ಪರಿಗಣಿಸಬೇಕಿದೆ.

ಪ್ರಸ್ತುತ, ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ಆದಾಯ ತೆರಿಗೆ ಮತ್ತು ಹೆಚ್ಚುವರಿ ಶುಲ್ಕದ ಮೇಲೆ ಶೇ 4ದರದಲ್ಲಿ ವಿಧಿಸಲಾಗುತ್ತದೆ. ಈ ಶುಲ್ಕವು ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಎರಡಕ್ಕೂ ಅನ್ವಯಿಸುತ್ತದೆ. ಕೋವಿಡ್ ಸೆಸ್‌ನ ಪ್ರಸ್ತಾವನೆ ಜಾರಿಗೊಳಿಸಿದರೆ, ಈ ವರ್ಗದ ತೆರಿಗೆದಾರರು ಮುಂಬರುವ ಹಣಕಾಸು ವರ್ಷದಲ್ಲಿ ತಮ್ಮ ಆದಾಯದ ಮೇಲೆ ಹೆಚ್ಚುವರಿ ತೆರಿಗೆ ತ್ಯಜಿಸಬೇಕಾಗುತ್ತದೆ.

ಕೊರೊನಾ ವೈರಸ್ ಸೆಸ್ ಅಥವಾ ಹೆಚ್ಚುವರಿ ಶುಲ್ಕದ ಮೇಲಿನ ಪ್ರಸ್ತಾಪವು ಸರ್ಕಾರಕ್ಕೆ ಹೆಚ್ಚುವರಿ ಆದಾಯ ಬರಮಾಡಿಕೊಳ್ಳಲು ಈ ಹೆಚ್ಚುವರಿ ತೆರಿಗೆಯ ಸಾಮರ್ಥ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಆರೋಗ್ಯ ಮತ್ತು ಶಿಕ್ಷಣ ಸೆಸ್‌ನಿಂದ ಸರ್ಕಾರವು 26,192.31 ಕೋಟಿ ರೂ. ಸಂಗ್ರಹಿಸುತ್ತಿದೆ.

ಕೊರೊನಾ ವೈರಸ್ ಸೆಸ್ ಅನ್ನು ಒಂದೇ ಸಮ ಅಥವಾ ಹೆಚ್ಚಿನ ದರದ ರೂಪದಲ್ಲಿ ವಿಧಿಸಿದರೆ, ಕೇಂದ್ರವು ಸುಲಭವಾಗಿ 30,000 ಕೋಟಿ ರೂ.ಯಷ್ಟು ಸಂಪತ್ತು ಬೊಕ್ಕಸಕ್ಕೆ ಹರಿದು ಬರುತ್ತದೆ. ಹೊಸ ಸೆಸ್ ಅನ್ನು ಹೆಚ್ಚಿನ ಆದಾಯ ಗಳಿಸುವವರಿಗೆ (1 ಕೋಟಿ ರೂ.ಗಿಂತ ಹೆಚ್ಚು ಗಳಿಸುವವರಿಗೆ) ಮಾತ್ರ ಪರಿಗಣಿಸಿದರೆ ಆದಾಯ ಕ್ರೋಢೀಕರಣವು ಸ್ವಲ್ಪ ಕಡಿಮೆಯಾಗಬಹುದು. ಈ ಪ್ರಸ್ತಾಪವನ್ನು ಈ ಹಿಂದೆಯೂ ಅಧಿಕೃತ ಮಟ್ಟದಲ್ಲಿ ಚರ್ಚಿಸಲಾಗಿದೆ.

ಇದನ್ನೂ ಓದಿ: ಇಂಧನ ಬೆಲೆ ಏರಿಕೆಯ ಬರೆ: ವಿವಿಧ ನಗರಗಳಲ್ಲಿ ಪೆಟ್ರೋಲ್ - ಡೀಸೆಲ್​ ದರ ಎಷ್ಟಿದೆ ಗೊತ್ತಾ?

50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕೆ ಈಗಾಗಲೇ ಶೇ 15 ರಿಂದ 37ರವರೆಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. 5 ಕೋಟಿ ರೂ.ಗಿಂತ ಹೆಚ್ಚು ಆದಾಯ ಗಳಿಸುವ ವ್ಯಕ್ತಿಯ ಒಟ್ಟು ತೆರಿಗೆ ಹೊಣೆಗಾರಿಕೆಯು ಪ್ರಸ್ತುತ ಶೇ 41.7ರಷ್ಟಿದೆ. ಇದರಲ್ಲಿ ಶೇ 4ರಷ್ಟು ಶಿಕ್ಷಣ ಸೆಸ್ ಸೇರಿದೆ. ಕೋವಿಡ್​ ಸೆಸ್ ಸೇರಿದರೆ ಇದು ಶೇ 44ರಷ್ಟಾಗುತ್ತದೆ.

ಹೊಸ ಸೆಸ್ ಜೊತೆಗೆ ಆಟೋ ಇಂಧನಗಳ ಮೇಲೆ ಪ್ರತಿ ಲೀಟರ್ ಸೆಸ್​ಗೆ ಮತ್ತೊಂದು ಲೇಯರ್ ಸೇರ್ಪಡೆಯಾಗುವ ಪ್ರಸ್ತಾಪವು ಸರ್ಕಾರದ ಮುಂದಿದೆ. ಇದು ಒಂದು ವರ್ಷದಲ್ಲಿ 20,000 ಕೋಟಿ ರೂ.ಯಷ್ಟು ಲಾಭ ತದುಕೊಡಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಯೋಜನೆಯು ಆಟೋ ಇಂಧನಗಳ ಬೆಲೆಯನ್ನು ಇನ್ನಷ್ಟು ದುಬಾರಿಯಾಗಿಸಬಹುದು.

ಎರಡು ಉತ್ಪನ್ನಗಳ ಬೆಲೆಗಳು ಈಗಾಗಲೇ ಹೊಸ ಗರಿಷ್ಠ ಮಟ್ಟದಲ್ಲಿವೆ. ಇದು ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಲಿದೆ. ಈ ತೆರಿಗೆಯನ್ನು ಪಿಎಸ್‌ಯು ತೈಲ ಕಂಪನಿಗಳು ಹಿಡಿದಿಟ್ಟುಕೊಳ್ಳಬಹುದು. ಇದು ಅವುಗಳ ಚಿಲ್ಲರೆ ದರದಲ್ಲಿ ಯಾವುದೇ ದರ ಪರಿಷ್ಕರಣೆಯನ್ನು ತಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.

ಸಾಂಕ್ರಾಮಿಕ ರೋಗದ ಮಧ್ಯೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಈಗಾಗಲೇ ಹೆಚ್ಚಿಸಲಾಗಿದ್ದು, ಹಲವು ಆಯಾಮಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. 2021ರ ಹಣಕಾಸು ವರ್ಷದ ಏಪ್ರಿಲ್-ನವೆಂಬರ್​ನಲ್ಲಿ ಅಬಕಾರಿ ಸುಂಕ ಸಂಗ್ರಹವು ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ 48ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿ ರೂ.ಗೆ ತಲುಪಿದೆ.

Last Updated : Jan 23, 2021, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.