ನವದೆಹಲಿ: ಮೊಬೈಲ್ ರಿಚಾರ್ಜ್ ಆಫರ್ಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ಚಂದಾದಾರರಿಗೆ ತಿಳುವಳಿಕೆಯ ನಿರ್ಧಾರ ತೆಗೆದುಕೊಳ್ಳಲು ನೆರವಾಗುವ ಉದ್ದೇಶದಿಂದ ಟೆಲಿಕಾಂ ನಿಯಂತ್ರಕ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಟ್ಯಾರಿಫ್ ಪ್ಲಾನ್ಗಳ ಘೋಷಣೆ ಮತ್ತು ಜಾಹೀರಾತಿಗೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.
ಟೆಲಿಕಾಂ ಚಂದಾದಾರರು ಆಗಾಗ್ಗೆ ಮಾಹಿತಿಯ ಕೊರತೆ, ಅಸ್ಪಷ್ಟ ಅಥವಾ ಯೋಜನೆ ವಿವರಗಳು ಕಷ್ಟಕರವಾದ ಪ್ಲಾನ್ಗಳು ಎದುರಿಸುತ್ತಿದ್ದಾರೆ. ಹೊಸ ನಿಯಮಗಳು ಗ್ರಾಹಕ-ಆಧಾರಿತ ಕ್ರಮಕ್ಕೆ ಮಹತ್ವ ನೀಡಲಿದ್ದು, ಇದು ಸರಿಯಾದ ಆಯ್ಕೆಗಳನ್ನು ಮಾಡುವ ಚಂದಾದಾರರ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಟಿಲಿಕಾಂ ಕಂಪನಿಯ ನಿಯಮಗಳನ್ನು ಬಿಗಿಗೊಳಿಸಿದ್ದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್), ಟ್ಯಾರಿಫ್ ಘೋಷಣೆ ಮತ್ತು ಸುಂಕದ ಜಾಹೀರಾತುಗಳ ಕುರಿತು ನಿರ್ದೇಶನಗಳನ್ನು ನೀಡಿದೆ.
ಟೆಲಿಕಾಂ ಸೇವಾ ಪೂರೈಕೆದಾರರು ಅಳವಡಿಸಿಕೊಂಡಿರುವ ಕ್ರಮಗಳು ಪಾರದರ್ಶಕವಾಗಿಲ್ಲ. ಕೆಲವು ಟೆಲಿಕಾಂ ಸೇವಾ ಪೂರೈಕೆದಾರರು ಹೆಚ್ಚುವರಿ ನಿಯಮ ಮತ್ತು ಷರತ್ತುಗಳು ಹೊಂದಿವೆ. ನಾನಾ ಮಾದರಿಯಲ್ಲಿ ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ಸಂಯೋಜಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಒಂದೇ ವೆಬ್ ಪುಟದಲ್ಲಿ ಸುಂಕ ಮತ್ತು ಸಂಬಂಧಿತ ಮಾಹಿತಿಯು ವಿವರಗಳ ಜಟಿಲವಾಗಿವೆ. ಗ್ರಾಹಕರಿಗೆ ಅಸ್ಪಷ್ಟ ಮತ್ತು ಅರ್ಥವಾಗದಂತಿವೆ ಎಂದು ಟ್ರಾಯ್ ನಿರ್ದೇಶನದಲ್ಲಿ ತಿಳಿಸಿದೆ.
ಟೆಲಿಕಾಂ ಸೇವಾದಾರರು 15 ದಿನಗಳಲ್ಲಿ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಚಂದಾದಾರರಿಗೆ ಪ್ರತಿ ಟ್ಯಾರಿಫ್ ಯೋಜನೆ, ಮತ್ತು ಗ್ರಾಹಕ ಸೇವಾ ಕೇಂದ್ರಗಳು, ಮಾರಾಟದ ಸ್ಥಳಗಳು, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಚಂದಾದಾರರಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ವೆಬ್‌ಸೈಟ್ ಮತ್ತು ಅಪ್ಲಿಕೇಷನ್‌ಗಳು ಸಹ ಹೆಚ್ಚಿನ ಸರಳ ಮಾಹಿತಿ ಒಳಗೊಂಡಿರಲಿವೆ.
ಟ್ರಾಯ್ ನಿರ್ದೇಶನದಲ್ಲಿ ಕಡ್ಡಾಯವಾಗಿ ಅಗತ್ಯ ಪ್ರಕಟಣೆಗಳು, ಯುನಿಟ್ / ಧ್ವನಿ, ಡೇಟಾ ಮತ್ತು ಎಸ್ಎಂಎಸ್ ಮತ್ತು ಅವುಗಳ ದರಗಳು, ಬಳಕೆಯ ದರಗಳ ಮಿತಿಗಳು ಇರತಕ್ಕದು ಎಂದಿದೆ.
ಮುಂಗಡ ಬಾಡಿಗೆ, ಠೇವಣಿ, ಪೋಸ್ಟ್‌ಪೇಯ್ಡ್ ಸೇವೆಗಳಿಗೆ ಸಂಪರ್ಕ ಶುಲ್ಕ ಮತ್ತು ಟಾಪ್ ಅಪ್, ಟ್ಯಾರಿಫ್ ವೋಚರ್ ಮತ್ತು ಇತರ ವಿವರಗಳೊಂದಿಗೆ ಮುಂಗಡ ವೆಚ್ಚದ ಬಗ್ಗೆ ಟೆಲಿಕಾಂ ಕಂಪನಿಗಳು ಚಂದಾದಾರರಿಗೆ ಪಾರದರ್ಶಕವಾಗಿ ತಿಳಿಸಬೇಕಾಗುತ್ತದೆ.