ನವದೆಹಲಿ: ಮೊಬೈಲ್ ಫೋನ್ ಬಳಕೆದಾರರು ತಮಗಿಷ್ಟವಾದ ಟೆಲಿಕಾಂ ಆಪರೇಟರ್‌ಗಳಿಗೆ ಬದಲಾಗಿ, ತಮ್ಮ ಹಳೆಯ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳುವ ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸೇವೆಯಲ್ಲಿ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಕೆಲ ಬದಲಾವಣೆಗಳನ್ನು ತಂದಿದೆ.
ಎಂಎನ್‌ಪಿ ನಿಯಮಗಳನ್ನು ಪರಿಷ್ಕರಿಸಿದ ಟ್ರಾಯ್, ಸೇವಾ ಪ್ರಕ್ರಿಯೆಯನ್ನು ವೇಗಗೊಳಿಸಿ ಇನ್ನಷ್ಟು ಸರಳೀಕರಣಗೊಳಿಸಿದೆ. ಪೋರ್ಟ್ ಔಟ್ ವಿನಂತಿಗೆ 3 ಕೆಲಸದ ದಿನಗಳ ಗಡುವು ನಿಗದಿಪಡಿಸಿದೆ. ಅದೇ ರೀತಿಯಾಗಿ 5 ಕೆಲಸದ ದಿನಗಳನ್ನು ಆಂತರಿಕ ಸೇವಾ ಪ್ರಕ್ರಿಯೆಗೆ ನೀಡಿದೆ. ನೂತನ ಪರಿಷ್ಕೃತ ನಿಯಮಗಳು ಡಿಸೆಂಬರ್ 16ರಿಂದ ಜಾರಿಗೆ ಬರಲಿದೆ.
ಪೋರ್ಟಬಿಲಿಟಿಯ ಆಂತರಿಕ ಸೇವೆಯ ಕೋರಿಕೆಯನ್ನು 3 ಕೆಲಸ ದಿನಗಳಿಗೆ ಸೀಮಿತಗೊಳಿಸಿದರೇ ಕಾರ್ಪೊರೇಟ್ ವರ್ಗದ ಅಡಿಯಲ್ಲಿ ಎಲ್ಲ ಪೋರ್ಟಿಂಗ್ ವಿನಂತಿಗಳನ್ನು 5 ಕೆಲಸದ ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಟ್ರಾಯ್ ಪ್ರಕಟಣೆಯಲ್ಲಿ ಟೆಲಿಕಾಂ ಸೇವಾ ಕಂಪನಿಗಳಿಗೆ ಸೂಚಿಸಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಟೆಲಿಕಾಂ ಆಪರೇಟರ್‌ಗಳು ಮತ್ತು ಎಂಎನ್‌ಪಿ ಸೇವಾ ಪೂರೈಕೆದಾರರು ಮೊಬೈಲ್ ಸಂಖ್ಯೆ ಬದಲಾಯಿಸದೆ ಟೆಲಿಕಾಂ ಆಪರೇಟರ್ ಬದಲಾಯಿಸಲು 4 ದಿನಗಳ ಚಂದಾದಾರರ ಕೋರಿಕೆಯಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿತ್ತು. ಈಗ ನಿಯಮದಲ್ಲಿ ಬದಲಾವಣೆ ಆಗಲಿದೆ.