ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಕೇಬಲ್ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 'ಕೇಬಲ್ ಹಾಗೂ ಪ್ರಸಾರ ಸೇವೆ'ಗಳ ಹೊಸ ನಿಯಂತ್ರಕ ಚೌಕಟ್ಟು ತಿದ್ದುಪಡಿ ನಿಯಮನ್ನು ಅನುಷ್ಠಾನಕ್ಕೆ ತರುವಲ್ಲಿ ಕೇಬಲ್ ಟಿವಿ ಸೇವಾ ಸಂಸ್ಥೆಗಳು ಹಿಂದೇಟು ಹಾಕುತ್ತೀವೆ.
ಸಂಸ್ಥೆಗಳ ನಡೆಯನ್ನು ಗಂಭೀರವಾಗಿ ತೆಗೆದುಕೊಂಡ ಟ್ರಾಯ್, ಮಾರ್ಚ್ 31ರ ಒಳಗೆ ನೂತನ ತಿದ್ದುಪಡಿ ನಿಯಮಗಳನ್ನು ಅಳವಡಿಸಿಕೊಳ್ಳುವಂತೆ ಡಿಟಿಎಚ್ ಮತ್ತು ಕೇಬಲ್ ಸಂಸ್ಥೆಗಳಿಗೆ ತಾಕೀತು ಮಾಡಿದೆ. ಮಾರ್ಚ್ 1ರಿಂದ ಎಲ್ಲ ಕೇಬಲ್ ಟಿವಿ ಮತ್ತು ಡಿಟಿಎಚ್ ಸಂಸ್ಥೆಗಳು ತಮ್ಮ ನೆಟ್ವರ್ಕ್ ಕೆಪಾಸಿಟಿ ಫೀ ಕಡಿಮೆ ಮಾಡಬೇಕು. ಚಾನಲ್ ದರವನ್ನೂ ಸಹ ಇಳಿಸಬೇಕು ಎಂದು ಈ ಹಿಂದೆ ಆದೇಶಿಸಿತ್ತು.
ಟ್ರಾಯ್ನ ಆದೇಶವನ್ನು ಕೆಲವು ಆಪರೇಟ್ಗಳು ಮಾತ್ರವೇ ಭಾಗಶಃ ಅನುಷ್ಠಾನಕ್ಕೆ ತಂದಿದ್ದಾರೆ. ಕೆಲ ಡಿಟಿಎಚ್ ಮತ್ತು ಕೇಬಲ್ ಸಂಸ್ಥೆಗಳು ಮಾ.1ರಿಂದ ಹಿಂದಿನ ಮಾಸಿಕ 153 ರೂ.ಗೆ (ಕನಿಷ್ಠ ₹ 130) 100 ಚಾನೆಲ್ಗಳ ಬದಲಿಗೆ 200 ಚಾನೆಲ್ಗಳನ್ನು ನೀಡುವ ಸೌಲಭ್ಯವನ್ನು ಆರಂಭಿಸಿವೆ. ಜೊತೆಗೆ ಹೆಚ್ಚುವರಿ ಚಾನೆಲ್ಗಳಿಗೆ ವಿಧಿಸುತ್ತಿದ್ದ ಸ್ಲ್ಯಾಬ್ ಶುಲ್ಕವನ್ನೂ ತೆಗೆದುಹಾಕಿವೆ.
ಒಂದು ಚಾನೆಲ್ಗೆ ಗರಿಷ್ಠ 12 ರೂ. ಮಾತ್ರ ವಿಧಿಸಬಹುದು ಎಂಬ ನಿಯಮ ಸೇರಿದಂತೆ ಚಾನೆಲ್ಗಳ ಮೇಲೆ ಹೇರಿದ್ದ ದರ ಇಳಿಕೆಯನ್ನು ಇದುವರೆಗೂ ಯಾವುದೇ ಚಾನೆಲ್ಗಳೂ ಪಾಲಿಸಿಲ್ಲ. ಗ್ರಾಹಕರು ಈ ಹಿಂದಿನಂತೆಯೇ ತಮ್ಮ ನೆಚ್ಚಿನ ಚಾನೆಲ್ಗಳಿಗೆ ಗರಿಷ್ಠ 19 ರೂ. ಹಾಗೂ ಜಿಎಸ್ಟಿ ಸೇರಿ 22 ರೂ.ವರೆಗೆ ಪಾವತಿಸಿವೆ.