ನವದೆಹಲಿ: ಆರ್ಥಿಕತೆಯಲ್ಲಿ ಪುನರುಜ್ಜೀವನದ ಲಕ್ಷಣಗಳು ಕಂಡು ಬರುತ್ತಿವೆ. ಆದರೆ, ಜಿಡಿಪಿ ಬೆಳವಣಿಗೆ ಋಣಾತ್ಮಕ ವಲಯದಲ್ಲಿ ಇರಬಹುದು ಅಥವಾ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೂನ್ಯಕ್ಕೆ ಹತ್ತಿರವಾಗಬಹುದು ಎಂದು ಹೇಳಿಕೆ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಜಿ ಹಣಕಾಸು ಸಚಿವ ಪಿ, ಚಿದಂಬರಂ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಈಟಿವಿ ಭಾರತ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಚಿದಂಬರಂ, 2020-21ರಲ್ಲಿ ಶೂನ್ಯಕ್ಕೆ ಹತ್ತಿರವಾಗಬಹುದು ಮತ್ತು 2021 - 22ರಲ್ಲಿ ಪುನರುಜ್ಜೀವನ ಸಂಭವಿಸುತ್ತದೆ ಎಂದು ಹೇಳಿದ, ಹಣಕಾಸು ಸಚಿವರು ಕತ್ತಲೆಯಲ್ಲಿ ಶಿಳ್ಳೆ ಹೊಡೆಯುತ್ತಿದ್ದಾರೆ. ಇಂತಹ ಹಿತವಾದ ಮಾತುಗಳು ಆರ್ಥಿಕತೆ ಮರುಸ್ಥಾಪಿಸುವ ಸರ್ಕಾರದ ಸಾಮರ್ಥ್ಯದ ವಿಶ್ವಾಸಕ್ಕೆ ಪ್ರೇರಣೆ ಆಗುವುದಿಲ್ಲ ಎಂದರು.
ತಮ್ಮದೇ ಆದ ಜಿಡಿಪಿ ಅಂದಾಜು ನೀಡಿದ ಚಿದಂಬರಂ, 2020 - 21ರಲ್ಲಿ -10ರಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಸರ್ಕಾರವು ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ, ಸೆಪ್ಟೆಂಬರ್ 2021ರ ನಂತರ ನಾವು ಸಕಾರಾತ್ಮಕ ಬೆಳವಣಿಗೆ ಕಾಣಬಹುದು ಎಂದು ಹೇಳಿದರು.
ಮುಖ್ಯವಾಗಿ, ಸೀತಾರಾಮನ್ ಅವರ ಜಿಡಿಪಿ ಬೆಳವಣಿಗೆಯ ಅಂಕಿ - ಅಂಶವು ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ದ್ವಿ - ಮಾಸಿಕ ವಿತ್ತೀಯ ನೀತಿ ಪರಿಶೀಲನಾ ಸಭೆಯಲ್ಲಿ ನೀಡಿದ ಮುನ್ಸೂಚನೆಗಿಂತ ಹೆಚ್ಚಿನದ್ದಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳಿಂದಾಗಿ 2020 - 21ರಲ್ಲಿ ಭಾರತದ ಆರ್ಥಿಕತೆಯು ಶೇ 9.5ರಷ್ಟು ಸಂಕುಚಿತಗೊಳ್ಳುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು.
ಸಾಂಕ್ರಾಮಿಕವು ಬೇಡಿಕೆಗೆ ಭಾರಿ ಹೊಡೆತ ನೀಡಿದೆ. ಇದರಿಂದಾಗಿ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದರೂ ಬೆಳವಣಿಗೆಯು ಸಂಕೋಚನದಿಂದ ಹೊರ ಬಂದು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಧನಾತ್ಮಕವಾಗಿ ಪರಿಣಮಿಸಬಹುದು ಎಂದು ಉಲ್ಲೇಖಿಸಿದ್ದರು.