ETV Bharat / business

ಸಾಲಗಾರರಿಗೆ ಮಧ್ಯಂತರ ರಿಲೀಫ್: ಮುಂದಿನ ಆದೇಶದ ತನಕ NPA ಘೋಷಿಸದಂತೆ ಸುಪ್ರೀಂ ಸೂಚನೆ - ಸಾಲ ನಿಷೇಧ

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ಎನ್​​ಪಿಎ ಘೋಷಣೆ ಬಗ್ಗೆ ಇಂದು ವಿಚಾರಣೆ ನಡೆಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

SC
ಎಸ್​ಸಿ
author img

By

Published : Sep 3, 2020, 8:17 PM IST

ನವದೆಹಲಿ: ಸಾಲಗಾರರಿಗೆ ಮಧ್ಯಂತರ ಪರಿಹಾರ ನೀಡಿದ ಸುಪ್ರೀಂಕೋರ್ಟ್​, ಆಗಸ್ಟ್ 31 ರವರೆಗೆ ಡೀಫಾಲ್ಟ್ (ಬೇಪಾವತಿ) ಆಗಿರದ ಸಾಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ಘೋಷಿಸದಂತೆ ಬ್ಯಾಂಕ್​ಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ಈ ಬಗ್ಗೆ ಇಂದು ವಿಚಾರಣೆ ನಡೆಸಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಕೋರಿಕೆಯ ಮೇರೆಗೆ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಿತು.

ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರು ಯಾವುದೇ ಖಾತೆಯು ಕನಿಷ್ಠ ಎರಡು ತಿಂಗಳ ಅವಧಿಯವರೆಗೆ ಎನ್‌ಪಿಎ ಆಗುವುದಿಲ್ಲ ಎಂದು ರ್ಜಿ ಸಲ್ಲಿಸಿದರು. ನ ಮೇಲಿನ ಹೇಳಿಕೆ ಗಮನಿಸಿದರೆ ಆಗಸ್ಟ್ 31ರವರೆಗೆ ಎನ್‌ಪಿಎ ಎಂದು ಘೋಷಿಸದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಎಂದು ನಿರ್ಧರಿಸುವಂತೆ ಕಾಣುತ್ತಿಲ್ಲ.

ನಿಷೇಧದ ವೇಳೆ ಮುಂದೂಡಲ್ಪಟ್ಟ ಇಎಂಐ ಮೇಲಿನ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದನ್ನು ಪ್ರಶ್ನಿಸಿ ನ್ಯಾಯಪೀಠವು ಅರ್ಜಿದಾರರ ಮನವಿಯನ್ನು ಆಲಿಸಿತು.

ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಪಾತ್ರದ ಅಂಶವನ್ನು ನ್ಯಾಯಾಲಯವು ಪರಿಗಣಿಸಿದೆ. ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ವಿಪತ್ತಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ಸಂಬಂಧ ಪರಿಹಾರ ಒದಗಿಸಬಹುದು.

ನಿಷೇಧದ ಅವಧಿ ಮುಗಿದ ಬಳಿಕ ಎನ್‌ಪಿಎ ಘೋಷಣೆ ಬಗ್ಗೆ ಅರ್ಜಿದಾರರು ನ್ಯಾಪೀಠದ ಗಮನಕ್ಕೆ ತಂದರು. ಸೆಪ್ಟೆಂಬರ್ 1ರಂದು ಖಾತೆಗಳನ್ನು ಎನ್‌ಪಿಎ ಎಂದು ಘೋಷಿಸಲಾಗುತ್ತದೆ. ಆದ್ದರಿಂದ, ಇಂತಹ ವೇಳೆ ನಿಷೇಧ ಮಿತಿಗೊಳಿಸಬೇಕು ಎಂದು ಅರ್ಜಿದಾರರಯ ನ್ಯಾಯಾಲಯದ ಮುಂದೆ ಮನವರಿಕೆ ಮಾಡಿದರು.

ಸಾಲಗಾರರಿಗೆ ಪರಿಹಾರ ನೀಡುವುದು ಬ್ಯಾಂಕ್​ಗಳ ವಿವೇಚನೆ ಆಗಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಬೇಕು. ಸಂಯೋಜಿತ ಬಡ್ಡಿ ಬೇಡಿಕೆಯ ಬಗ್ಗೆ ಸ್ಪಷ್ಟೀಕರಣವನ್ನು ಕೋರ್ಟ್​ ಕೋರಿದೆ. ವ್ಯವಹಾರ ಮುಂದುವರಿಸಲು ಬ್ಯಾಂಕ್​ಗಳು ಸಾಲಗಾರರಿಗೆ ಪ್ರಯೋಜನಗಳನ್ನು ನೀಡುತ್ತವೆ ಎಂದು ಕೇಳಿತು.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ಒತ್ತಡ ತಗ್ಗಿಸಲು ವಲಯವಾರು ಪರಿಹಾರ ನಿರ್ಧರಿಸುವುದು ತಜ್ಞರ ಸಮಿತಿಯಾಗಿದೆ ಎಂದು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಪ್ರತಿನಿಧಿಯಾಗಿ ಸಾಲಿಸಿಟರ್ ಜನರಲ್ ನ್ಯಾಯಪೀಠಕ್ಕೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.