ಮುಂಬೈ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ನಡೆಸಿದ 9ನೇ ಸಭೆಯಲ್ಲೂ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ತೀರ್ಮಾನಿಸಿದೆ.
ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಭೀತಿಯ ನಡುವೆಯೇ ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿದೆ. ರೆಪೊ ಮತ್ತು ರಿವರ್ಸ್ ರೆಪೊ ದರಗಳು ಪ್ರಸ್ತುತ ಕ್ರಮವಾಗಿ ಶೇ.4 ಮತ್ತು 3.35 ರಷ್ಟಿವೆ.
ಹಣಕಾಸು ನೀತಿಯ ಪ್ರಮುಖಾಂಶಗಳು:
- ಆರ್‌ಬಿಐ ಬ್ಯಾಂಕುಗಳಿಗೆ ನೀಡುವ ಅಲ್ಪಾವಧಿ ಹಣ ರೆಪೋ ದರ ಶೇ.4ರಲ್ಲಿದ್ದು, ಬದಲಾವಣೆ ಇಲ್ಲ.
- ಆರ್‌ಬಿಐ ಬ್ಯಾಂಕ್‌ಗಳಿಂದ ಎರವಲು ಪಡೆಯುವ ರಿವರ್ಸ್ ರೆಪೊ ದರವು ಶೇ.3.35ರಲ್ಲೇ ಮುಂದುವರಿಕೆ.
- ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಎಂಎಸ್‌ಎಫ್ ದರವು ಶೇ.4.25ರಲ್ಲಿ ಮುಂದುವರಿಕೆ.
- ಜಿಡಿಪಿ ಬೆಳವಣಿಗೆ ದರವನ್ನು ಶೇ.9.5ರಲ್ಲೇ ಉಳಿಸಿಕೊಂಡಿದೆ.
ಇದನ್ನೂ ಓದಿ: ಎರಡು ದಿನಗಳ ಭಾರಿ ನಷ್ಟದ ಬಳಿಕ ಷೇರುಪೇಟೆ ಚೇತರಿಕೆ ; ಸೆನ್ಸೆಕ್ಸ್ 887 ಅಂಕಗಳ ಜಿಗಿತ