ETV Bharat / business

2021ರ ಬಜೆಟ್: ರಾಷ್ಟ್ರೀಯ ಚಿಲ್ಲರೆ ನೀತಿ ರೂಪಿಸಿ MSME ಮಾನ್ಯತೆ ಕೊಡಿ, ವರ್ತಕರ ಒತ್ತಾಯ - 2021ರ ಕೇಂದ್ರ ಬಜೆಟ್​

ಸಾಂಕ್ರಾಮಿಕ ಸಮಯದಲ್ಲಿ ಚಿಲ್ಲರೆ ಉದ್ಯಮವು ಬಹುತೇಕ ನಾಶವಾಗಿದೆ. ಆರ್ಥಿಕತೆಯ ಪ್ರಾರಂಭದೊಂದಿಗೆ ಅದು ನಿಧಾನವಾಗಿ ತನ್ನ ಹಳೆಯ ಲಯಕ್ಕೆ ಮರಳುತ್ತಿದೆ. ತೆವಳುತ್ತಿರುವ ಉದ್ಯಮವನ್ನು ಮತ್ತೆ ತನ್ನ ಕಾಲ್ಮೇಲೆ ತರಲು ಮತ್ತು ಓಡುವಂತೆ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ 'ವ್ಯಾಪಾರದ ಸುಲಲತೆ ತರಬೇಕು ಎಂದು ಆರ್‌ಎಐ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ.

retailers
ಚಿಲ್ಲರೆ
author img

By

Published : Jan 15, 2021, 2:21 PM IST

ನವದೆಹಲಿ: ಮುಂಬರುವ ಬಜೆಟ್​ನಲ್ಲಿ ರಾಷ್ಟ್ರೀಯ ಚಿಲ್ಲರೆ ನೀತಿ ರೂಪಿಸಿ ಅನುಷ್ಠಾನಗೊಳಿಸುವಂತೆ ಚಿಲ್ಲರೆ ವ್ಯಾಪಾರಿಗಳ ಸಂಸ್ಥೆ ಆರ್‌ಎಐ ಸರ್ಕಾರವನ್ನು ಒತ್ತಾಯಿಸಿದೆ.

ಕೊರೊನಾ ಪೀಡಿತವಾಗಿ ಬಾಧಿಸಿದ ವ್ಯಾಪಾರಿಗಳಿಗೆ ಚಿಲ್ಲರೆ ನೀತಿಯ ಲಾಭ ಪಡೆಯಲು ವರ್ತಕರಿಗೆ ಎಂಎಸ್‌ಎಂಇಗಳ ಅಡಿ ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸಾಂಕ್ರಾಮಿಕ ರೋಗದಿಂದಾಗಿ 854 ಬಿಲಿಯನ್ ಡಾಲರ್​​ನಷ್ಟು ಭಾರತೀಯ ಚಿಲ್ಲರೆ ವ್ಯಾಪಾರ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಇದರ ಏರಿಳಿತದ ಪರಿಣಾಮ ಎಲ್ಲಾ ಸ್ಟೇಕ್​ಹೋಲ್ಡರ್​​ಗಳ ಬಳಕೆ ಮೌಲ್ಯ ಸರಪಳಿಯಿಂದ ಕೆಳಗಿಳಕ್ಕೆ ತಳ್ಳಿದೆ. ಚೇತರಿಕೆಗೆ ಅಸಾಂಪ್ರದಾಯಿಕ ಪರಿಹಾರ ಮತ್ತು ಸರ್ಕಾರದ ಬೆಂಬಲ ಬೇಕಾಗುತ್ತದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘ (ಆರ್‌ಎಐ) ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳೀಯ ಆರ್ಥಿಕತೆ ಹೆಚ್ಚಿಸಲು, ಚಿಲ್ಲರೆ ವ್ಯಾಪಾರ ಪುನರುಜ್ಜೀವನಗೊಳಿಸಲು ಹಾಗೂ ಲಕ್ಷಾಂತರ ಉದ್ಯೋಗಗಳನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ಅಗತ್ಯವಿದೆ. 2021-22ರ ಬಜೆಟ್ ಈ ಬಗ್ಗೆ ಪ್ರಮುಖ ಪಾತ್ರ ವಹಿಸಲಿದ್ದು, ಬಳಕೆಯು ಆರ್ಥಿಕತೆ ಪ್ರೇರೇಪಿಸಿದ್ದರೆ ಚಿಲ್ಲರೆ ಬಳಕೆಗೆ ಹೆಬ್ಬಾಗಿಲು ತೆರೆದಂತಾಗುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ದೇಶಿ ಷೇರುಪೇಟೆ ಕುಸಿತ: ಡಾಲರ್ ಎದುರು ಕ್ಷೀಣಿಸಿದ ರೂಪಾಯಿ

ಚಿಲ್ಲರೆ ವ್ಯಾಪಾರವು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಈ ವೇಗವನ್ನು ಉಳಿಸಿಕೊಳ್ಳಬೇಕಾಗಿದೆ. ಮುಂದಿನ ಬಜೆಟ್ ಬೆಳವಣಿಗೆ ಆಧಾರಿತ ನೀತಿಗಳು ಮತ್ತು ಅದಕ್ಕಾಗಿ ಕ್ರಮಗಳನ್ನು ಆದ್ಯತೆ ನೀಡಬೇಕು" ಎಂದು ಆರ್​ಎಐ ಹೇಳಿದೆ.

ಸಾಂಕ್ರಾಮಿಕ ಸಮಯದಲ್ಲಿ ಚಿಲ್ಲರೆ ಉದ್ಯಮವು ಬಹುತೇಕ ನಾಶವಾಗಿದೆ. ಆರ್ಥಿಕತೆಯ ಪ್ರಾರಂಭದೊಂದಿಗೆ ಅದು ನಿಧಾನವಾಗಿ ತನ್ನ ಹಳೆಯ ಲಯಕ್ಕೆ ಮರಳುತ್ತಿದೆ. ತೆವಳುತ್ತಿರುವ ಉದ್ಯಮವನ್ನು ಮತ್ತೆ ತನ್ನ ಕಾಲ್ಮೇಲೆ ತರಲು ಮತ್ತು ಓಡುವಂತೆ ಮಾಡಲು ಚಿಲ್ಲರೆ ವ್ಯಾಪಾರಿಗಳಿಗೆ 'ವ್ಯಾಪಾರದ ಸುಲಲತೆ ತರಬೇಕು ಎಂದು ಆರ್‌ಎಐ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ.

ವಿವಿಧ ನೇರ ಮತ್ತು ಪರೋಕ್ಷ ತೆರಿಗೆಗಳ (ಜಿಎಸ್‌ಟಿ) ಶಿಫಾರಸುಗಳ ಹೊರತಾಗಿ, ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ವೃದ್ಧಿಸಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ ರಾಷ್ಟ್ರೀಯ ಚಿಲ್ಲರೆ ನೀತಿಯ ಸೂತ್ರೀಕರಣ ಮತ್ತು ಅನುಷ್ಠಾನವನ್ನು ಪರಿಗಣಿಸಲು ಸರ್ಕಾರಕ್ಕೆ ಅವರು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.