ETV Bharat / business

ಕೊರೊನಾ ಉದ್ಯೋಗ ಕಡಿತ ಮಧ್ಯೆಯೂ ಪೇಟಿಎಂನಿಂದ ಜಾಬ್ ಆಫರ್!​

ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನಲ್ಲಿನ ತನ್ನ ಕಾರ್ಯಾಚರಣೆಗಳಲ್ಲಿನ ಅಗತ್ಯ ಸ್ಥಾನಗಳನ್ನು ತುಂಬಲು ಟೆಕ್ ಮತ್ತು ಟೆಕ್​ರಹಿತರನ್ನು ನೇಮಿಸಿಕೊಳ್ಳುತ್ತಿದೆ. ಇದರ ಜೊತೆಗೆ ಹಿರಿಯ ನಾಯಕತ್ವ ವೃಂದ ಹೆಚ್ಚಿಸಲು 50ಕ್ಕೂ ಹೆಚ್ಚು ಉನ್ನತ ಮಟ್ಟದ ಕಾರ್ಯನಿರ್ವಾಹಕರು, ಉಪಾಧ್ಯಕ್ಷರು ಮತ್ತು ಅದಕ್ಕಿಂತ ಮೇಲ್ದರ್ಜೆಯ ಹುದ್ದೆಗೆ ಪೇಟಿಎಂ ನೇಮಕ ಮಾಡಿಕೊಳ್ಳಲಿದೆ.

Job
ಜಾಬ್
author img

By

Published : Aug 26, 2020, 7:21 PM IST

ನವದೆಹಲಿ: ಮೊಬೈಲ್​ ಪಾವತಿಸಿ ಸೇವೆಯ ಪೇಟಿಎಂ ತನ್ನ ಹಣಕಾಸು ಮತ್ತು ಸಂಪತ್ತು ನಿರ್ವಹಣಾ ಸೇವೆಗಳಂತಹ ವಿಭಾಗಗಳ ನಿತ್ಯದ ಕಾರ್ಯಾಚರಣೆಗೆ ಅಗತ್ಯವಾದ ಸುಮಾರು 1,000ಕ್ಕೂ ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ಹೇಳಿದೆ.

ಪೇಟಿಎಂ ಟೆಕ್ ಮತ್ತು ಟೆಕ್ ರಹಿತ ಕಾರ್ಯನಿರ್ವಹಣೆಗೆ 1,000ಕ್ಕೂ ಅಧಿಕ ಎಂಜಿನಿಯರ್‌, ಡೇಟಾ ವಿಜ್ಞಾನಿಗಳು, ಹಣಕಾಸು ವಿಶ್ಲೇಷಕರು ಸೇರಿದಂತೆ ಇತರ ಹುದ್ದೆಗಳಲ್ಲಿ ನೇಮಕ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ತನ್ನ ಹಣಕಾಸು ಮತ್ತು ಸಂಪತ್ತು ನಿರ್ವಹಣಾ ಸೇವೆಗಳ ತ್ವರಿತ ವಿಸ್ತರಣೆಯತ್ತ ಸಾಗುತ್ತಿರುವುದರಿಂದ ನೇಮಕಾತಿ ಮಾಡಿಕೊಳ್ಳಬೇಕಿದೆ ಎಂದು ಹೇಳಿದೆ.

ಪೇಟಿಎಂ ತನ್ನ ಗ್ರೂಪ್​ ವ್ಯವಹಾರಗಳಾದ ಸಾಲ, ವಿಮೆ, ಸಂಪತ್ತು ನಿರ್ವಹಣೆ ಮತ್ತು ಆಫ್‌ಲೈನ್ ಪಾವತಿಗಳ ಕಾರ್ಯಾಚರಣೆ ವಿಸ್ತರಿಸುತ್ತಿದೆ. ಇದರಿಂದಾಗಿ ಹೆಚ್ಚಿನ ತಾಂತ್ರಿಕ ಮತ್ತು ತಾಂತ್ರಿಕೇತರ ಉದ್ಯೋಗಿಗಳನ್ನು ಕರೆತರುವ ಅವಶ್ಯಕತೆಯಿದೆ ಎಂದಿದೆ.

ದೆಹಲಿ ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನಲ್ಲಿನ ತನ್ನ ಕಾರ್ಯಾಚರಣೆಗಳಲ್ಲಿನ ಅಗತ್ಯ ಸ್ಥಾನಗಳನ್ನು ತುಂಬಲು ಟೆಕ್ ಮತ್ತು ಟೆಕ್​ರಹಿತರನ್ನು ನೇಮಿಸಿಕೊಳ್ಳುತ್ತಿದೆ. ಇದರ ಜೊತೆಗೆ ಹಿರಿಯ ನಾಯಕತ್ವ ವೃಂದ ಹೆಚ್ಚಿಸಲು 50ಕ್ಕೂ ಹೆಚ್ಚು ಉನ್ನತ ಮಟ್ಟದ ಕಾರ್ಯನಿರ್ವಾಹಕರು, ಉಪಾಧ್ಯಕ್ಷರು ಮತ್ತು ಅದಕ್ಕಿಂತ ಮೇಲ್ದರ್ಜೆಯ ಹುದ್ದೆಗೆ ನೇಮಕ ಮಾಡಿಕೊಳ್ಳಲಿದೆ.

ಏಪ್ರಿಲ್​​ನಲ್ಲಿ ನೋಯ್ಡಾ ಮೂಲದ ಕಂಪನಿಯು 500ಕ್ಕೂ ಹೆಚ್ಚು ಜನರನ್ನು ನೇಮಕ ಮಾಡುವ ಯೋಜನೆಯನ್ನು ಪ್ರಕಟಿಸಿತ್ತು. ಪೇಟಿಎಂ ಕಂಪನಿಯು ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 700 ಉದ್ಯೋಗಿಗಳನ್ನು ನೇಮಿಸಿಕೊಂಡಿರುವುದಾಗಿ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.