ETV Bharat / business

ದಿವಾಳಿ ಸಂಹಿತೆ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರ: ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ

author img

By

Published : Mar 12, 2020, 6:18 PM IST

ನಷ್ಟದ್ಲಲಿರುವ ಕಂಪನಿ ಅಥವಾ ಉದ್ದಿಮೆಯ ಆಸ್ತಿ ಖರೀದಿಸಲು ಮುಂದಾಗುವವರಿಗೆ ಪ್ರವರ್ತಕರು ಎದುರಿಸುತ್ತಿರುವ ಹಣಕಾಸು ಅಪರಾಧ ಪ್ರಕರಣಗಳಿಂದ ರಕ್ಷಣೆ ನೀಡಲು ಕೇಂದ್ರ ಸರ್ಕಾರವು ಸಾಲ ವಸೂಲಾತಿ ಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ಮಸೂದೆಯನ್ನು ಮಾರ್ಚ್​ 6 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.

IBC
ಐಬಿಸಿ

ನವದೆಹಲಿ: ದಿವಾಳಿ ಮತ್ತು ದಿವಾಳಿತನ ಸಂಹಿತೆ(ಐಬಿಸಿ) (ತಿದ್ದುಪಡಿ) ವಿಧೇಯಕ-2020 ಅನ್ನು ರಾಜ್ಯಸಭೆ ಗುರುವಾರ ಧ್ವನಿಮತದಿಂದ ಅಂಗೀಕರಿಸಿತು.

ನಷ್ಟಕ್ಕೆ ಗುರಿಯಾಗಿರುವ ಕಂಪನಿ ಅಥವಾ ಉದ್ದಿಮೆಯ ಆಸ್ತಿ ಖರೀದಿಸಲು ಮುಂದಾಗುವವರಿಗೆ ಪ್ರವರ್ತಕರು ಎದುರಿಸುತ್ತಿರುವ ಹಣಕಾಸು ಅಪರಾಧ ಪ್ರಕರಣಗಳಿಂದ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಸಾಲ ವಸೂಲಾತಿ ಮತ್ತು ದಿವಾಳಿ ಸಂಹಿತೆ (ತಿದ್ದುಪಡಿ) ಮಸೂದೆ, 2020 ಅನ್ನು ಮಾರ್ಚ್​ 6ರಂದು ಲೋಕಸಭೆಯಲ್ಲಿ ಮಂಡಿಸಿತ್ತು.

ಮಸೂದೆಯ ಉದ್ದೇಶವೇನು?

ಸಾಲ ವಸೂಲಾತಿ ಪ್ರಕ್ರಿಯೆ ಹೆಚ್ಚು ಆಕರ್ಷಕವಾಗಲಿದೆ. ಖರೀದಿದಾರರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಲಿದೆ. ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿರುವ ಬಹುತೇಕ ಪ್ರಕರಣಗಳಲ್ಲಿ ಪ್ರವರ್ತಕರ ವಿರುದ್ಧ ವಿವಿಧ ಸಂಸ್ಥೆಗಳಿಂದ ತನಿಖೆ ನಡೆಯುತ್ತಿವೆ. ಇಂತಹ ತನಿಖೆಗಳ ವ್ಯಾಪ್ತಿಯಿಂದ ಆಸ್ತಿ ಖರೀದಿದಾರರನ್ನು ಹೊರಗಿಡುವುದು ತಿದ್ದುಪಡಿಯ ಉದ್ದೇಶ.

ಐಬಿಸಿಯಡಿ ನಡೆಯುವ ಹರಾಜಿನಲ್ಲಿ ಖರೀದಿಸುವ ಆಸ್ತಿಗಳಿಗೆ ಸಂಬಂಧಿಸಿದಂತೆ ಅವುಗಳ ಹಿಂದಿನ ಪ್ರವರ್ತಕರ ವಿರುದ್ಧದ ಕಾನೂನು ಕ್ರಮಗಳ ಅಡೆತಡೆಗಳ ಸಮಸ್ಯೆಗಳ ಬಗ್ಗೆ ಅನೇಕ ಕಂಪನಿಗಳು ಕಳವಳ ವ್ಯಕ್ತಪಡಿಸಿದ್ದವು. ಈ ಕಾರಣಕ್ಕೆ ಕಾಯ್ದೆ ತಿದ್ದುಪಡಿ ತರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.