ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಸಾವಿರಾರು ಕೋಟಿ ರೂ. ವಂಚನೆ ಎಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡು ಲಂಡನ್ನಲ್ಲಿ ಜೈಲು ಕೈದಿ ಆಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿಗೆ ಇಲ್ಲಿನ ನ್ಯಾಯಾಲಯ ಜಾಮೀನು ಅರ್ಜಿಯನ್ನು 5ನೇ ಬಾರಿಯೂ ವಜಾಗೊಳಿಸಿದೆ.
ಮಾರ್ಚ್ 19ರಂದು ಭಾರತ ಸರ್ಕಾರದ ಆರೋಪದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ಯಾರ್ಡ್ವಾರಂಟ್ ಹಿನ್ನೆಲೆಯನ್ನಿಟ್ಟು ನೀರವ್ ಅವರನ್ನು ಬಂಧಿಸಿ, ವಾಂಡ್ಸ್ ವರ್ಥ್ ಜೈಲಿನಲ್ಲಿ ಇರಿಸಲಾಗಿದೆ.
ಜೈಲಿನಲ್ಲಿರುವ ವಜ್ರೋದ್ಯಮಿ ನೀರವ್ 'ಮೂರು ಬಾರಿ ಜೈಲಿನಲ್ಲಿ ಥಳಿಸಲ್ಪಟ್ಟಿದ್ದಾನೆ'. ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದರೆ 'ತನ್ನನ್ನು ಕೊಲೆ ಮಾಡಿಕೊಳ್ಳುತ್ತೇನೆ' ಎಂಬ ಬೆದರಿಕೆ ಹಾಕಿದ್ದರಿಂದ ಇಂಗ್ಲೆಂಡ್ ನ್ಯಾಯಾಲಯ ಮತ್ತೊಮ್ಮೆ ಜಾಮೀನು ಅರ್ಜಿ ನಿರಾಕರಿಸಿದೆ.
ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಬಂಧಿಯಾಗಿರುವ ನೀರವ್ ಭಾರತಕ್ಕೆ ಹಸ್ತಾಂತರವಾಗಲು ಇಚ್ಛಿಸುತ್ತಿಲ್ಲ. ಜಾಮೀನು ಅರ್ಜಿ ಪ್ಯಾಕೇಜ್ ಪ್ರಸ್ತಾವದ ಹೊರತಾಗಿಯೂ ನ್ಯಾಯಾಲಯವು ಬಂಧಿತನ ಜಾಮೀನಿಗೆ ನೋ ಎಂದಿದೆ. 4 ಮಿಲಿಯನ್ ಪೌಂಡ್ಗಳ ಭದ್ರತಾ ಠೇವಣಿ ಮತ್ತು ಭಯೋತ್ಪಾದಕ ಶಂಕಿತರ ಮೇಲೆ ಹೇರಿಕೆಗೆ ಸಮನಾದ ಗೃಹಬಂಧನವೂ ಇದರಲ್ಲಿ ಒಳಗೊಂಡಿದೆ.
ನ್ಯಾಯಮೂರ್ತಿಗಳಾದ ಅರ್ಬುತ್‌ನೋಟ್ ಮಾತನಾಡಿ, ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಮುನ್ಸೂಚನೆಯು ಹಿಂದಿನ ಘಟನೆಯಿಂದ ತಿಳಿಯಬಹುದಾಗಿದೆ. ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೋ ಇಲ್ಲವೋ ಇಲ್ಲವೋ ಗೊತ್ತಿಲ್ಲ. 2020ರ ಮೇ ತಿಂಗಳ ನ್ಯಾಯಾಲಯದ ಮುಂದೆ ಶರಣಾಗಲು ಅವರು ವಿಫಲರಾಗಲೂ ಬಹುದು. ನೀರವ್ ಮೋದಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂಬ ದೃಢೀಕರಣದಿಂದಲೇ ಜಾಮೀನು ನಿರಾಕರಿಸುವ ತೀರ್ಪನ್ನು ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ನೀರವ್ ಮೋದಿಯ ಜಾಮೀನು ಅರ್ಜಿಗೆ ಸಂಬಂಧಿಸಿದ ಮಾಹಿತಿ ಭಾರತೀಯ ಮಾಧ್ಯಮಗಳಿಗೆ ಸೋರಿಕೆ ಆಗಿದ್ದನ್ನು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು. ವೈದ್ಯರ ವರದಿ ಸೋರಿಕೆಯಾಗಿರುವುದು ನಿಜಕ್ಕೂ ದುರದೃಷ್ಟಕರ. ಅದು ಸಂಭವಿಸಬಾರದು. ಸೋರಿಕೆಯಾದರೆ ಭಾರತ ಸರ್ಕಾರದ ಮೇಲಿನ ನ್ಯಾಯಾಲಯದ ನಂಬಿಕೆ ಹಾಳು ಮಾಡಲಿದೆ ಎಂದು ನ್ಯಾಯಮೂರ್ತಿ ಹೇಳಿದರು.
ಭಾರತ ಸರ್ಕಾರದ ಪರವಾಗಿ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ಜೇಮ್ಸ್ ಲೂಯಿಸ್ ತಮ್ಮ ವಾದ ಮಂಡಿಸಿ, ಸೋರಿಕೆ ಆಗಿದ್ದು ಶೋಚನೀಯ. ಆದರೆ, ಇದು ಭಾರತ ಸರ್ಕಾರದ ಕಡೆಯಿಂದ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು. ತನ್ನನ್ನು ಭಾರತಕ್ಕೆ ಹಸ್ತಾಂತರಿಸುವ ಆದೇಶ ನೀಡಿದರೆ ತನ್ನನ್ನು ತಾನು ಕೊಲೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ತಮ್ಮನ್ನು ತಾವು ಪರಾರಿಯಾಗಲು ಇದೊಂದು ಪ್ರಬಲವಾದ ಸ್ವಯಂ ಪ್ರೇರಣೆಯಂತಿದೆ ಎಂದರು.