ETV Bharat / business

ಬಡವರಿಗೆ ವಾರ್ಷಿಕ ₹ 72 ಸಾವಿರ... ರಾಹುಲ್​ ಹೇಳಿದಷ್ಟು ಸುಲಭವಲ್ಲ ಕೊಡೋದು: ರಘುರಾಮ್ ರಾಜನ್​

author img

By

Published : Mar 26, 2019, 8:11 PM IST

Updated : Mar 26, 2019, 8:41 PM IST

ರಘುರಾಮ್ ರಾಜನ್​

2019-03-26 20:00:36

ಯೋಜನೆಗೆ ಅಗತ್ಯವಾದ ಹೆಚ್ಚುವರಿ ಹಣ ಎಲ್ಲಿಂದ ಸೇರ್ಪಡೆ ಮಾಡಿಕೊಳ್ಳುತ್ತಿರಾ?

ನವದೆಹಲಿ: ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ, 'ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುವುದಾಗಿ' ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅವರ ಆಶ್ವಾಸನೆಗೆ ಆರ್​ಬಿಐನ ಮಾಜಿ ಗವರ್ನರ್​ ರಘುರಾಮ್ ರಾಜನ್ ಅವರು ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ರಾಜನ್​ ಅವರು, 'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ನೀಡುವ ಯೋಜನೆ ಘೋಷಿಸಿದ್ದಾರೆ. ಆದರೆ, ಈ ಯೋಜನೆಯು ಪ್ರಸ್ತುತ ಆರ್ಥಿಕ ಸನ್ನಿವೇಶದಲ್ಲಿ ಜಾರಿ ಮಾಡುವುದು ಅಷ್ಟು ಸುಲಭವಲ್ಲ. ಇದರ ಯಶಸ್ಸು ಮುಖ್ಯವಾಗಿ ಮುಂದಿನ ಸರ್ಕಾರದ ಆಡಳಿತದಲ್ಲಿ ಲಭ್ಯವಿರುವ ಹಣಕಾಸಿನ ಸ್ಥಿತಿಗತಿಯನ್ನು ಅವಲಂಬಿಸಿದೆ' ಎಂದು ಎಚ್ಚರಿಸಿದ್ದಾರೆ.

'ಈ ಹಂತದಲ್ಲಿ ನೀವು ನಮಗೆ ನೀಡಬೇಕಾದ ಮಾರ್ಗವನ್ನು ಕೇಳಿದರೇ, ನಾವು ಹೆಚ್ಚುವರಿ ₹ 7 ಲಕ್ಷ ಕೋಟಿ ಎಲ್ಲಿಂದ ಸೇರ್ಪಡೆ ಮಾಡಿಕೊಳ್ಳಬೇಕು, ಇದಕ್ಕೆ ಉತ್ತರವೇ ಇಲ್ಲ. ಸದ್ಯದ ದಿನಗಳಲ್ಲಿ ಹಣಕಾಸಿನ ಹರಿವು ಸಹ ಬಿಗಿಯಾಗಿದೆ. ಈ ಬಗ್ಗೆ ಚುನಾವಣೆಯ ನಂತರದ ಸರ್ಕಾರ ಸಂವೇದನಶೀಲವಾಗಿ ಯೋಚಿಸಬೇಕಿದೆ' ಎಂದು ವಿಶ್ಲೇಷಿಸಿದರು.

'ಉದ್ದೇಶಿತ ಯೋಜನೆಯ ಫಲಾನುಭವಿಗಳನ್ನು ಗುರಿಯಾಗಿಸುವುದು ಯೋಜನೆಯಷ್ಟೇ ಮುಖ್ಯವಾಗುತ್ತದೆ. ದೇಶಕ್ಕೆ ಬೇಕಾಗಿರುವುದು ಸದೃಢವಾದ ಬೆಳವಣಿಗೆ, ಸಾಧ್ಯವಾದಷ್ಟು ಉತ್ತಮವಾದ ಆರ್ಥಿಕ ಸೇರ್ಪಡೆಗಳಿಂದ ಇದನ್ನು ಸಾಧಿಸಬೇಕು. ಮುಂದಿನ ಪೀಳಿಗೆಯ ಭಾರತಕ್ಕೆ ಸುಧಾರಣೆ ಕ್ರಮಗಳ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.

'ಭೂ ಸ್ವಾಧೀನ ಸಮಸ್ಯೆಗಳಿಗೆ ಪರಿಹಾರ', 'ಬ್ಯಾಂಕ್​ಗಳ ಶುದ್ಧೀಕರಣದತ್ತ ದೃಷ್ಟಿ' ಹಾಗೂ 'ಕೃಷಿ ಪುನರುಜ್ಜೀವನ ನೀತಿ'ಗಳತ್ತ  ಹೆಚ್ಚಿನ ಆದ್ಯತೆ ನೀಡಬೇಕು. ಅಲ್ಪಾವಧಿಯ ಕಾರ್ಯಗಳನ್ನು ಕೈಗೆತ್ತುಕೊಂಡರೇ ನಗದು ಕೊರತೆಯಲ್ಲಿರುವ ಬ್ಯಾಂಕ್​ಗಳನ್ನು ಮೇಲೆತ್ತಲು ಸಾಧ್ಯವಾಗುತ್ತದೆ. ಇದನ್ನು ಸಾಧಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಇನ್ನಷ್ಟು ಚುರುಕುಗೊಳಿಸುವ ಅಗತ್ಯವಿದೆ ಎಂದು ರಾಜನ್ ಹೇಳಿದ್ದಾರೆ.

Intro:Body:

Conclusion:
Last Updated : Mar 26, 2019, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.