ETV Bharat / business

ಜಿಡಿಪಿ ಏರಿಳಿದರೆ ನಮ್ಮ ನಿತ್ಯ ಜೀವನದ ಮೇಲೆ ಏನಾಗುತ್ತದೆ.. ನೈಜ ಅಭಿವೃದ್ಧಿಯ ಸೂಚಕವೇನು? - ಜಿಡಿಪಿ

ಕೇವಲ ಸರ್ಕಾರವಲ್ಲ ದೇಶದ ವಾಸ್ತವಿಕ ಆರ್ಥಿಕ ಸನ್ನಿವೇಶವನ್ನು ಪ್ರಸ್ತುತಪಡಿಸುವ ನ್ಯೂನತೆಗಳ ಹೊರತಾಗಿಯೂ ಜಿಡಿಪಿಯ ಆಧಾರದ ಮೇಲೆ ಆರ್ಥಿಕತೆಯ ಹಾದಿಯನ್ನು ಸೂಚಿಸುವ ಅರ್ಥಶಾಸ್ತ್ರಜ್ಞರ ಮತ್ತು ಹೆಸರಾಂತ ಸಲಹಾ ಸಂಸ್ಥೆಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ವಾಸ್ತವವಾಗಿ ಜಿಡಿಪಿ ಬೆಳವಣಿಗೆಯ ದರ ಮತ್ತು ಕಾರ್ಯಕ್ಷಮತೆಯನ್ನು  ಜೋಡಿಸುವಂತಹ ಯಾವುದೇ ತಾರ್ಕಿಕತೆ ಕಾಣಿಸುತ್ತಿಲ್ಲ. ಕಾರ್ಯಕ್ಷಮತೆ ಮತ್ತು ಪ್ರಗತಿಯೊಂದಿಗೆ ಜಿಡಿಪಿಯನ್ನು ಜೋಡಿಸಲು ಸರ್ಕಾರವು ಹಾದಿ ತಪ್ಪುತ್ತಿದೆಯಾ ಎಂಬುವಂತಿದೆ.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 4:52 PM IST

ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂಬ ಜಿಡಿಪಿ ಆಧಾರಿತ ಅಂಕಿಅಂಶಗಳ ಕಾರ್ಯಕ್ಷಮತೆಯನ್ನು ಪ್ರಸ್ತುತ ದಿನಗಳಲ್ಲಿ ಸಾಣೆ ಹಿಡಿಯಬೇಕಿದೆ.

ಕೇವಲ ಸರ್ಕಾರವಲ್ಲ ದೇಶದ ವಾಸ್ತವಿಕ ಆರ್ಥಿಕ ಸನ್ನಿವೇಶವನ್ನು ಪ್ರಸ್ತುತಪಡಿಸುವ ನ್ಯೂನತೆಗಳ ಹೊರತಾಗಿಯೂ ಜಿಡಿಪಿಯ ಆಧಾರದ ಮೇಲೆ ಆರ್ಥಿಕತೆಯ ಹಾದಿಯನ್ನು ಸೂಚಿಸುವ ಅರ್ಥಶಾಸ್ತ್ರಜ್ಞರ ಮತ್ತು ಹೆಸರಾಂತ ಸಲಹಾ ಸಂಸ್ಥೆಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ವಾಸ್ತವವಾಗಿ ಜಿಡಿಪಿ ಬೆಳವಣಿಗೆಯ ದರ ಮತ್ತು ಕಾರ್ಯಕ್ಷಮತೆಯನ್ನು ಜೋಡಿಸುವಂತಹ ಯಾವುದೇ ತಾರ್ಕಿಕತೆ ಕಾಣಿಸುತ್ತಿಲ್ಲ. ಕಾರ್ಯಕ್ಷಮತೆ ಮತ್ತು ಪ್ರಗತಿಯೊಂದಿಗೆ ಜಿಡಿಪಿಯನ್ನು ಜೋಡಿಸಲು ಸರ್ಕಾರವು ಹಾದಿ ತಪ್ಪುತ್ತಿದೆಯಾ ಎಂಬುವಂತಿದೆ.

ದೇಶದ ಅಭಿವೃದ್ಧಿಯನ್ನು ಸೂಚಿಸುವ ಜಿಡಿಪಿ ಮಾನದಂಡಗಳ ಸಮರ್ಥನೆಯ ಬಗ್ಗೆ ಅನೇಕ ಅನುಮಾನಗಳು ಮೂಡಿವೆ ಮತ್ತು ಅವುಗಳು ಸಾಬೀತು ಕೂಡ ಆಗಿವೆ. ವೇಗದ ಆರ್ಥಿಕತೆಯಲ್ಲಿ ಭಾರತದ ಜಿಡಿಪಿ ಐದರಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಜಿಡಿಪಿಯನ್ನು ಪ್ರತಿ ತ್ರೈಮಾಸಿಕ ಹಾಗೂ ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿದ್ದು, ಇದರಲ್ಲಿ ವಿತ್ತೀಯ ಮೌಲ್ಯಮಾಪನ ಹಾಗೂ ಸರಕು ಸೇವೆಗಳ ಸಂಪೂರ್ಣ ಹರವು ಒಳಗೊಂಡಿರುತ್ತದೆ. ರಾಷ್ಟ್ರದ ನೈಸರ್ಗಿಕ ಮೂಲದಿಂದ ಬಂದ ಆದಾಯ, ಕೃಷಿ, ಕೈಗಾರಿಕೆ, ಸೇವಾ ವಲಯದ ಆಂತರಿಕ ಮತ್ತು ಸಾಗರೋತ್ತರ ಮೌಲ್ಯವನ್ನು ಲೆಕ್ಕಹಾಕಲಾಗುತ್ತದೆ. ಜಿಡಿಪಿ ಹೆಚ್ಚಾದಂತೆ ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಆದಾಯದ ಒಳ ಹರಿವು ಏರಿಕೆಯಾಗುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಹೂಡಿಕೆ ಹೆಚ್ಚಳವಾದಂತೆ ದೇಶದ ಬೊಕ್ಕಸಕ್ಕೆ ಹೆಚ್ಚಿನ ಹಣ ಸಂದಾಯವಾಗುತ್ತದೆ.

GDP
ಜಿಡಿಪಿ ಏರಿಕೆ ಸೂಚ್ಯಂಕ

ಜಿಡಿಪಿಯು ಆರ್ಥಿಕತೆಯ ವಿವಿಧ ಕ್ಷೇತ್ರಗಳ ನೈಜಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಯೋಜನಾ ಪ್ರಕ್ರಿಯೆಗಳ ಹಾದಿಯನ್ನು ಸುಗಮಗೊಳಿಸುತ್ತದೆ. ಈ ಸಕಾರಾತ್ಮಕ ಅಂಶಗಳನ್ನು ಹೊರತುಪಡಿಸಿ, ಜಿಡಿಪಿ ಅಂಕಿ ಅಂಶಗಳನ್ನು ಬೆಳವಣಿಗೆ ಮತ್ತು ಕಾರ್ಯಕ್ಷಮತೆಯ ನಿರ್ಣಾಯಕ ಸಾಕ್ಷಿಯಾಗಿ ತೋರಿಸುವುದು ಹಾಸ್ಯಾಸ್ಪದವಾಗಿದೆ.

ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ದೇಶದ ಪ್ರಗತಿ ಮತ್ತು ಕಾರ್ಯಕ್ಷಮತೆಯನ್ನು ಅಳೆಯುವ ಏಕೈಕ ಜಿಡಿಪಿ ಗಜಕಡ್ಡಿಯನ್ನು ಗ್ರಹಿಸಲು ಅವರು ವಿಫಲರಾಗಿದ್ದಾರೆ. ಭಾರತದ ಜಿಡಿಪಿ ಬೆಳವಣಿಗೆ ದರ ಮತ್ತು ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಇತ್ತೀಚಿನ ದಿನಗಳಲ್ಲಿ ಪರಾಮರ್ಶೆಗೆ ಒಳಪಡಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ.

ಜಿಡಿಪಿಯಲ್ಲಿ ವಿತ್ತೀಯ ಸಂಚಯಗಳು ಹೇಗೆ ಮತ್ತು ಎಲ್ಲಿಂದ ಸಂಭವಿಸುತ್ತವೆ ಎಂಬುದರ ಹೊರತಾಗಿಯೂ ಅದರ ಗಮನವು ಒಟ್ಟು ಬಳಕೆಯ ಮೇಲೆ ಕೇಂದ್ರೀಕೃತವಾಗಿದೆ. ಉದಾಹರಣೆಗೆ: ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 20ರಷ್ಟು ಅಂದರೇ 25 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ದಿನದ ಆದಾಯ ₹ 32. ಇವರ ವಾರ್ಷಿಕ ಆದಾಯ ₹ 11,664 ಆಗಲಿದ್ದು. ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ಇಡೀ ಬಿಪಿಎಲ್ ಜನಸಂಖ್ಯೆಯ ಒಟ್ಟು ಖರ್ಚು ಅಂದಾಜು ₹ 2,91,600 ಕೋಟಿ ಆಗುತ್ತದೆ. 2018-19ರಲ್ಲಿ ಒಟ್ಟು ಜಿಡಿಪಿ ಪಾಲು ₹ 140.78 ಲಕ್ಷ ಕೋಟಿಯಷ್ಟಿದೆ. ಇದರಲ್ಲಿ ಬಿಪಿಎಲ್​ ಬಳಕೆಯ ಪಾಲು ಶೇ. 2ರಷ್ಟು ಆಗಲಿದೆ.

ಖಾಸಗಿ ಬಳಕೆಯ ಪಾಲು ಒಟ್ಟು ಜಿಡಿಪಿಯ ಶೇ.55ರಷ್ಟಿದ್ದು, ₹ 77.26 ಲಕ್ಷ ಕೋಟಿಯಷ್ಟು ಬಳಸಿಕೊಳ್ಳುತ್ತಿದೆ. ಇದರಲ್ಲಿ 25 ಕೋಟಿ ಬಿಪಿಎಲ್ ಜನಸಂಖ್ಯೆಯ ಬಳಕೆ ಅಂದಾಜು ₹ 2,91,600 ಕೋಟಿ. ಇಷ್ಟೊಂದು ಹಣ ಬಳಕೆಯು ಅವರ ಜೀವನ ಮಟ್ಟವನ್ನು ಚಿತ್ರಿಸುವುದಿಲ್ಲ ಅಲ್ಲವೇ?

GDP
ಜಿಡಿಪಿ ಇಳಿಕೆ ಸೂಚ್ಯಂಕ..

ಕಡಿಮೆ ಮತ್ತು ಮಧ್ಯಮ ಆದಾಯದ ವರ್ಗದವರಿಗಿಂತ ಐಷಾರಾಮಿ ಜೀವನ ನಡೆಸುವವರ ಖರ್ಚು-ವೆಚ್ಚಗಳು ಅಧಿಕವಾಗಿವೆ.ಉನ್ನತ ಮಟ್ಟದ ಜೀವನಮಟ್ಟ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದ್ದರೆ ಗಣನೀಯ ಪ್ರಮಾಣದ ಜಿಡಿಪಿಯು ಆಗಾಗ್ಗೆ ರೂಪಿಸುವುದು ಅದರ ಕರ್ತವ್ಯ. ಅಂತಹ ಯಾವುದೇ ಬೆಳವಣಿಗೆಯನ್ನು ಸೂಚಿಸಲು ವಸ್ತುವಿನ ಕೊರತೆಯಿದೆ. ನೈಜಸ್ಥಿತಿ ಹೀಗಿರುವಾಗ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಹೇಗೆ ಸೂಚಿಸುತ್ತದೆ?

ಗಂಭೀರ ಹಸಿವು ರಾಷ್ಟ್ರಗಳಲ್ಲಿ ಭಾರತ 103ನೇ ಶ್ರೇಯಾಂಕದಲ್ಲಿದರುವ ಬಗ್ಗೆ ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ವಿವರಿಸಬಹುದೇ? ಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಭಾರತವು ಉನ್ನತ ಸ್ಥಾನದಲ್ಲಿದೆ ಎಂಬ ಸಂಶಯಾಸ್ಪದ ವ್ಯತ್ಯಾಸವನ್ನು ಹೊಂದಿದೆ. ಜಿಡಿಪಿ ಅಂಕಿಅಂಶಗಳು ದೇಶದ ಶಿಕ್ಷಣದ ಸಂಪೂರ್ಣ ನಿರ್ಲಕ್ಷಿತ ಸ್ಥಿತಿಯನ್ನು ವಿವರಿಸಬಹುದೇ?

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.