ETV Bharat / business

ಸವಾಲುಗಳ ಮಧ್ಯೆ ವಿತ್ತೀಯ ಕ್ರಮ ತೆಗೆದುಕೊಳ್ಳಲು ಕೇಂದ್ರ ಬ್ಯಾಂಕ್ ಹಿಂಜರಿಯಲ್ಲ: RBI ಗವರ್ನರ್​

author img

By

Published : Jul 27, 2020, 3:31 PM IST

ಸವಾಲುಗಳ ಮಧ್ಯೆ ಅಗತ್ಯ ಇರುವಾಗ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಬ್ಯಾಂಕ್ ಹಿಂಜರಿಯುವುದಿಲ್ಲ. ಅತ್ಯಂತ ಜಾಗರೂಕವಾಗಿ ತನ್ನ ಕಾರ್ಯ ನಿರ್ವಹಿಸಲಿದೆ ಎಂದು ಆರ್‌ಬಿಐ ಗವರ್ನರ್​ ಶಕ್ತಿಕಾಂತ್ ದಾಸ್​ ಇಂಡಿಯಾ ಇಂಕ್​ಗೆ ಭರವಸೆ ನೀಡಿದರು.

RBI Gov
ಶಕ್ತಿಕಾಂತ್ ದಾಸ್

ನವದೆಹಲಿ: ಕೋವಿಡ್​ -19 ಸಾಂಕ್ರಾಮಿಕ ಪರಿಣಾಮದಿಂದ ಕಳೆಗುಂದಿದ ಆರ್ಥಿಕತೆ ಮೇಲೆತ್ತಲು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಹೆಚ್ಚಿಸುವಂತೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕರೆ ನೀಡಿದ್ದಾರೆ.

ಸಿಐಐ ಕಾರ್ಯಕ್ರಮವೊಂದರಲ್ಲಿ ಇಂಡಿಯಾ ಇಂಕ್ ಉದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಮತ್ತು ಸಾರ್ವಜನಿಕ ವಲಯಗಳು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದು, ಅದು ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮೂಲಸೌಕರ್ಯ ಕ್ಷೇತ್ರವು ಆರ್ಥಿಕತೆಗೆ ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸಬಲ್ಲದು. ಕೆಲವು ಉದ್ದೇಶಿತ ಮೆಗಾ ಯೋಜನೆಗಳನ್ನು ಮುನ್ನಲೆಗೆ ತಂದರೆ ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುತ್ತದೆ. ಇತ್ತೀಚಿನ ಕೃಷಿ ಸುಧಾರಣೆಗಳು ಹೊಸ ಅವಕಾಶಗಳನ್ನು ತೆರೆದಿವೆ. ಬೇಸಾಯ ಕ್ಷೇತ್ರವು ಪ್ರಕಾಶಮಾನ ತಾಣವಾಗಿ ಹೊರಹೊಮ್ಮುತ್ತಿದ್ದು, ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಅದೃಷ್ಟವು ಬದಲಾಗುತ್ತಿದೆ ಎಂದು ಹೇಳಿದರು.

ಜಾಗತಿಕ ಮೌಲ್ಯ ಸರಪಳಿ ಪಾಲ್ಗೊಳ್ಳುವಿಕೆಯಲ್ಲಿ ಶೇ.1ರಷ್ಟು ಹೆಚ್ಚಳವು ದೇಶದ ತಲಾ ಆದಾಯದ ಮಟ್ಟವನ್ನು ಶೇ. ಒಂದಕ್ಕಿಂತ ಹೆಚ್ಚಾಗಬಹುದು. ಅಮೆರಿಕ, ಯುರೋಪ್ ಒಕ್ಕೂಟ​​ ಮತ್ತು ಇಂಗ್ಲೆಂಡ್​ ಜೊತೆ ಮುಕ್ತ ವ್ಯಾಪಾರ ಒಪ್ಪಂದಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ. ವಿದೇಶಿ ವಿನಿಮಯ ದರಕ್ಕೆ ಸಂಬಂಧಿಸಿದಂತೆ ಆರ್​ಬಿಐಗೆ ರೂಪಾಯಿಯಲ್ಲಿ ಯಾವುದೇ ನಿಗದಿತ ಗುರಿ ಇಲ್ಲ. ಆದರೆ, ಅನಗತ್ಯ ಚಂಚಲತೆ ಮೇಲೆ ನಿಗಾವಹಿಸುತ್ತಿದೆ ಎಂದು ದಾಸ್ ತಿಳಿಸಿದರು.

ಸವಾಲುಗಳ ಮಧ್ಯೆ ಅಗತ್ಯ ಇರುವಾಗ ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಬ್ಯಾಂಕ್ ಹಿಂಜರಿಯುವುದಿಲ್ಲ. ಅತ್ಯಂತ ಜಾಗರೂಕವಾಗಿ ತನ್ನ ಕಾರ್ಯ ನಿರ್ವಹಿಸಲಿದೆ ಎಂದು ಆರ್‌ಬಿಐ ಗವರ್ನರ್​ ಉದ್ಯಮಕ್ಕೆ ಭರವಸೆ ನೀಡಿದರು.

ಕೇಂದ್ರೀಯ ಬ್ಯಾಂಕ್ ಕೈಗೊಂಡ ವಿವಿಧ ದ್ರವ್ಯತೆ ಕ್ರಮಗಳಿಂದಾಗಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯನ್ನು ಪುನರುಜ್ಜೀವನಗೊಳಿಸಿದೆ. ಕಾರ್ಪೊರೇಟ್ ಬಾಂಡ್ ವಿತರಣೆಯ ಮೊದಲ ತ್ರೈಮಾಸಿಕದಲ್ಲಿ ಒಂದು ಲಕ್ಷ ಕೋಟಿ ರೂ. ಮುಟ್ಟಿದೆ. ಇದು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಹೆಚ್ಚಿನದಾಗಿದೆ ಎಂದು ದಾಸ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.