ನವದೆಹಲಿ: ಫೆಬ್ರವರಿಯಲ್ಲಿ ದೇಶದ ಕೈಗಾರಿಕಾ ಉತ್ಪಾದನೆಯು ಶೇ 4.5 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ.
ಮುಖ್ಯವಾಗಿ ಗಣಿಗಾರಿಕೆ, ಉತ್ಪಾದನೆ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಹೆಚ್ಚಿನ ಉತ್ಪಾದನೆ ಕಾರಣದಿಂದಾಗಿ ಏರಿಕೆ ಕಂಡುಬಂದಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) 2019ರ ಫೆಬ್ರವರಿಯಲ್ಲಿ ಶೇ 0.2ರಷ್ಟು ಏರಿಕೆಯಾಗಿದೆ.
ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ (ಎನ್‌ಎಸ್‌ಒ) ಅಂಕಿ - ಅಂಶಗಳ ಪ್ರಕಾರ, ಉತ್ಪಾದನಾ ವಲಯದ ಉತ್ಪಾದನೆಯು ಶೇ 3.2 ರಷ್ಟು ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಶೇ 0.3ರಷ್ಟು ಇತ್ತು. ಈ ವರ್ಷ ಚೇತರಿಕೆ ಕಂಡಿದೆ ಎಂದು ತಿಳಿಸಿದೆ.
2019ರ ಫೆಬ್ರವರಿಯಲ್ಲಿ ಶೇ 1.3ರಷ್ಟು ಬೆಳವಣಿಗೆಗೆ ಹೋಲಿಸಿದರೆ ವಿದ್ಯುತ್ ಉತ್ಪಾದನೆಯು ಶೇ 8.1ಕ್ಕೆ ಏರಿದೆ. ಗಣಿಗಾರಿಕೆ ಕ್ಷೇತ್ರದ ಉತ್ಪಾದನೆಯು ಈ ಹಿಂದೆ ಶೇ 2.2ರ ಬೆಳವಣಿಗೆಗೆ ಬದಲಾಗಿ ಶೇ 10ರಷ್ಟು ಏರಿಕೆಯಾಗಿದೆ. ಕಳೆದ ಹಣಕಾಸಿನ ಏಪ್ರಿಲ್ - ಫೆಬ್ರವರಿ ಅವಧಿಯಲ್ಲಿ ಐಐಪಿ ಬೆಳವಣಿಗೆ ಶೇ 0.9ಕ್ಕೆ ಕುಸಿದಿತ್ತು. 2018-19ರ ಇದೇ ಅವಧಿಯಲ್ಲಿ ಶೇ 4ರಷ್ಟು ವಿಸ್ತರಣೆ ಹೊಂದಿತ್ತು.