ನವದೆಹಲಿ: ವಿದೇಶಗಳಿಂದ ತೈಲ ಆಮದು ಅವಲಂಬನೆ ಪ್ರಮಾಣ ಏರಿಕೆ ಆಗುತ್ತಿದೆ ಎಂದು ಸರ್ಕಾರದ ಇತ್ತೀಚಿನ ಅಂಕಿಅಂಶಗಳು ಹೇಳುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ 'ದೇಶದ ತೈಲ ಆಮದು ಅವಲಂಬನೆಯನ್ನು ಶೇ 10ರಷ್ಟು ಕಡಿತಗೊಳಿಸುವ' ವಾಗ್ದಾನ ನೀಡಿದ್ದರು. ಆದರೆ, ವಿದೇಶಗಳ ಮೇಲಿನ ತೈಲ ಅವಲಂಬನೆ ಹಿಂದಿಗಿಂತ ಅಧಿಕವಾಗಿದ್ದು, ಶೇ 84ರಷ್ಟು ಕಚ್ಚಾ ತೈಲ ಸಾಗರೋತ್ತರವಾಗಿ ಖರೀದಿಸಲಾಗುತ್ತಿದೆ.
2015ರ ಮಾರ್ಚ್ನಲ್ಲಿ ನಡೆದ 'ಉರ್ಜಾ ಸಂಗಮ' ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡಿ, 'ತೈಲ ಆಮದು ಅವಲಂಬನೆಯನ್ನು ಭವಿಷ್ಯದಲ್ಲಿ ಕಡಿತಗೊಳಿಸುತ್ತೇವೆ. 2013-14ರಲ್ಲಿ ಆಮದು ಪ್ರಮಾಣ ಶೇ 77ರಷ್ಟು ಇದ್ದು, 2022ರ ಭಾರತ ಸ್ವಾತಂತ್ರ್ಯದ 75ನೇ ವರ್ಷದ ಕೊಡುಗೆಯಾಗಿ ಇದನ್ನು ಶೇ 67ಕ್ಕೆ ತಗ್ಗಿಸಲಾಗುವುದು. 2030ರ ವೇಳಗೆ ಶೇ 50ಕ್ಕಿ ತಂದು ನಿಲ್ಲಿಸುವ ಭರವಸೆ ನೀಡಿದ್ದರು'. ಆದರೆ, ಇಂದು ಆ ಹಂತ ತಲುಪುವ ಸಾಧ್ಯತೆಗಳು ಕ್ಷೀಣಿಸಿವೆ ಎಂಬುದುನ್ನು ಇತ್ತೀಚಿನ ಅಂಶಗಳು ಸಾಧರಪಡಿಸುತ್ತಿವೆ.
ತೈಲ ಬಳಕೆಯಲ್ಲಿ ನಿಧಾನಗತಿಯ ವೇಗ ಪಡೆಯುತ್ತಿದ್ದರೇ ದೇಶಿಯ ಉತ್ಪಾದನೆ ಪ್ರಮಾಣ ಕುಂಠಿತವಾಗುತ್ತಿದೆ. ಇದರಿಂದ ಭಾರತದ ಇಂಧನ ಆಮದು ಅವಲಂಬನೆ ಜಿಗತಗೊಂಡಿದೆ. 2017-18ರಲ್ಲಿ ಶೇ 82.9ರಷ್ಟು ಆಮದು ಪ್ರಮಾಣ 2018-19ರಲ್ಲಿ ಶೇ 83.7ಕ್ಕೆ ತಲುಪಿದೆ. 2015-16ನೇ ವರ್ಷದಲ್ಲಿ ಶೇ 80.6ರಷ್ಟು ಇದದ್ದು ನಂತರದ ವರ್ಷಕ್ಕೆ ಶೇ 81.7ರಷ್ಟು ಆಗಿದೆ ಎಂದು ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಹಾಗೂ ವಿಶ್ಲೇಷಣಾ ಸೆಲ್ (ಪಿಪಿಎಸಿ) ತಿಳಿಸಿದೆ.
2015-16ರಲ್ಲಿ ದೇಶದ ತೈಲ ಬಳಕೆಯ 184.7 ಮಿಲಿಯನ್ ಟನ್ಗಳಷ್ಟು ಇದದ್ದು, ಮುಂದಿನ ವರ್ಷದಲ್ಲಿ 194 ಮಿಲಿಯನ್ ಟನ್ಗೆ ತಲುಪಿತು. ಮರು ವರ್ಷದಲ್ಲಿ 206.6 ಮಿಲಿಯನ್ ಟನ್ ಆಮದು ಮಾಡಿಕೊಳ್ಳಬೇಕಾಯಿತು. ಆಮದು ಅವಲಂಬನೆ ವ್ಯಾಪ್ತಿ ಜಿಗಿಯುತ್ತಾ ಸಾಗಿ, 2018-19ರಲ್ಲಿ ಶೇ 2.6ರಷ್ಟು ಬೇಡಿಕೆ ಹೆಚ್ಚಾಗಿದ್ದು, ಅದು 211.6 ಮಿಲಿಯನ್ ಟನ್ಗೆ ಬಂದು ನಿಂತಿದೆ.
ಒಂದು ಕಡೆ ವಿದೇಶಗಳ ಮೇಲೆ ಅವಲಂಬನೆ ಹೆಚ್ಚುತ್ತಿದ್ದರೇ ಮತ್ತೊಂದು ಕಡೆ ದೇಶಿ ತೈಲ ಉತ್ಪಾದನೆಯ ಪ್ರಮಾಣ ಕುಸಿತದ ಹಾದಿ ಹಿಡಿದಿದೆ. 2015-16ರ ಅವಧಿಯಲ್ಲಿ ದೇಶಿ ಕಚ್ಚಾ ತೈಲ ಉತ್ಪಾದನೆಯ ಪ್ರಮಾಣ 36.9 ಮಿಲಿಯನ್ ಟನ್ ಇತ್ತು. ಅದರ ಮರು ವರ್ಷವೇ 0.9 ಮಿಲಿಯನ್ ಟನ್ ಇಳಿದು 36 ಮಿಲಿಯನ್ ಟನ್ಗೆ ತಲುಪಿದೆ. ಕುಂಠಿತವಾಗುತ್ತಾ ಸಾಗಿದ ಉತ್ಪಾದನೆಯು 2017-18ನೇ ವರ್ಷದಲ್ಲಿ 35.7 ಮಿಲಿಯನ್ ಟನ್ಗೆ ಬಂದು ನಿಂತಿದೆ ಎಂದು ಪಿಪಿಎಸಿ 2019ರ ಮಾರ್ಚ್ ತಿಂಗಳ ಅಂಕಿಅಂಶಗಳ ಮೂಲಕ ತಿಳಿಸಿದೆ.
ಕೇದ್ರ ಸರ್ಕಾರ ಕಚ್ಚಾ ತೈಲ ಆಮದು ಅವಲಂಬನೆ ತಗ್ಗಿಸಲು ಜೈವಿಕ ಇಂಧನ ಹಾಗೂ ಇಂಧನ ಸಂರಕ್ಷಣೆಗೆ ಸಾಕಷ್ಟು ಉತ್ತೇಜನೆ ನೀಡುತ್ತಿದೆ. ಜೊತೆಗೆ ದೇಶಿ ಉತ್ಪಾದನೆಯನ್ನು ಹೆಚ್ಚಿಸುವಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ಐದು ವರ್ಷಗಳಲ್ಲಿ ಹಿಂದಿನ ನಿಯಮಗಳಿಗೆ ಸಾಕಷ್ಟು ತಿದ್ದುಪಡಿ ತಂದು ವಿದೇಶಿ ಹಾಗೂ ಖಾಸಗಿ ಹೂಡಿಕೆಯನ್ನು ಆಕರ್ಷಿಸಲಾಗುತ್ತಿದೆ. ಆದರೆ, ಇವುಗಳು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗುತ್ತಿಲ್ಲ ಎಂಬುದನ್ನು ಇಲ್ಲಿನ ಅಂಕಿಅಂಶಗಳು ಹೇಳುತ್ತಿವೆ.
ಭಾರತದ ಖಜಾನೆ ಮೇಲೆ ರಕ್ಷಣಾ, ಯೋಜನಾ ವೆಚ್ಚದ ಜೊತೆಗೆ ತೈಲ ಆಮದು ಹೆಚ್ಚಿನ ಹೊರೆಯಾಗುತ್ತಿದೆ. 2018-19ರಲ್ಲಿ ತೈಲ ಆಮದು ಮೇಲೆ ₹ 7.74 ಲಕ್ಷ ಕೋಟಿ (111.9 ಬಿಲಿಯನ್ ಡಾಲರ್) ವಿನಿಯೋಗಿಸಿದೆ. ಈ ಹಿಂದಿನ ವರ್ಷ ₹ 6.07 ಲಕ್ಷ ಕೋಟಿ (87.8 ಬಿಲಿಯನ್ ಡಾಲರ್) ಖರ್ಚು ಮಾಡಿತ್ತು. 2015-16ರ ಹಣಕಾಸು ವರ್ಷದಲ್ಲಿ ₹ 4.42 ಲಕ್ಷ ಕೋಟಿ (64 ಬಿಲಿಯನ್ ಡಾಲರ್) ಇಂಧನದ ಮೇಲೆ ಹಾಕಿತ್ತು. ಈ ಮೂರು ವರ್ಷದಲ್ಲಿ ₹ 3.32 ಲಕ್ಷ ಕೋಟಿಯಷ್ಟು ಏರಿಕೆಯಾಗಿದ್ದು, ಭರವಸೆಯ ವಿಫಲತೆಗೆ ಹಿಡಿದ ಕೈಗನ್ನಡಿಯಾಗಿದೆ.