ETV Bharat / business

2020-21ರಲ್ಲಿ ಭಾರತದ ಜಿಡಿಪಿ ಮೈನಸ್​ ಶೇ 8ಕ್ಕೆ ಕುಗ್ಗುವ ಸಾಧ್ಯತೆ: ಫಿಕ್ಕಿ ಸಮೀಕ್ಷೆ - FICCI Survey on India's GDP

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವು ಗಮನಾರ್ಹ ಸ್ಥಿರ ಪ್ರದರ್ಶನ ನೀಡಿದೆ. ರಬಿ ಬಿತ್ತನೆ ಪ್ರಮಾಣ ಏರಿಕೆ, ಉತ್ತಮ ಮಾನ್ಸೂನ್, ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳ, ಟ್ರ್ಯಾಕ್ಟರ್ ಮಾರಾಟದ ಬಲವಾದ ಬೆಳವಣಿಗೆಯು ಕೃಷಿ ವಲಯದಲ್ಲಿ ನಿರಂತರ ಏರಿಕೆ ಸೂಚಿಸುತ್ತದೆ ಎಂದು ಸಮೀಕ್ಷೆಯ ಸಂಶೋಧನೆ ಬಗ್ಗೆ ಫಿಕ್ಕಿ ಹೇಳಿದೆ.

India's GDP
India's GDP
author img

By

Published : Jan 26, 2021, 5:37 PM IST

ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 2020-21ರಲ್ಲಿ ಶೇ 8ರಷ್ಟು ಕುಗ್ಗುವ ನಿರೀಕ್ಷೆಯಿದೆ ಎಂದು ಉದ್ಯಮಿ ಒಕ್ಕೂಟ ಫಿಕ್ಕಿ ತನ್ನ ಆರ್ಥಿಕ ಔಟ್‌ಲುಕ್ ಸಮೀಕ್ಷೆಯಲ್ಲಿ ಅಂದಾಜಿಸಿದೆ.

ಉದ್ಯಮ ಸಂಸ್ಥೆಯ ವಾರ್ಷಿಕ ಸರಾಸರಿ ಬೆಳವಣಿಗೆಯ ಮುನ್ಸೂಚನೆಯಂತೆ ಉದ್ಯಮ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ವಲಯ ಪ್ರತಿನಿಧಿಸುವ ಪ್ರಮುಖ ಅರ್ಥಶಾಸ್ತ್ರಜ್ಞರ ಪ್ರತಿಕ್ರಿಯೆಗಳನ್ನು ಆಧರಿಸಿ ಜನವರಿಯಲ್ಲಿ ಸಮೀಕ್ಷೆ ನಡೆಸಲಾಯಿತು.

ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ಸರಾಸರಿ ಬೆಳವಣಿಗೆಯ ಅಂದಾಜನ್ನು 2020-21ರಲ್ಲಿ ಶೇ 3.5ಕ್ಕೆ ನಿಗದಿಪಡಿಸಲಾಗಿದೆ.

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರವು ಗಮನಾರ್ಹ ಸ್ಥಿರ ಪ್ರದರ್ಶನ ನೀಡಿದೆ. ರಬಿ ಬಿತ್ತನೆ ಪ್ರಮಾಣ ಏರಿಕೆ, ಉತ್ತಮ ಮಾನ್ಸೂನ್, ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಳ, ಟ್ರ್ಯಾಕ್ಟರ್ ಮಾರಾಟದ ಬಲವಾದ ಬೆಳವಣಿಗೆಯು ಕೃಷಿ ವಲಯದಲ್ಲಿ ನಿರಂತರ ಏರಿಕೆ ಸೂಚಿಸುತ್ತದೆ ಎಂದು ಸಮೀಕ್ಷೆಯ ಸಂಶೋಧನೆ ಬಗ್ಗೆ ಫಿಕ್ಕಿ ಹೇಳಿದೆ.

ಇದನ್ನೂ ಓದಿ: 2020ರ ಮಧ್ಯ ಭಾಗದಲ್ಲಿ ಭಾರತದ ನಿರುದ್ಯೋಗ ಪ್ರಮಾಣ ಎಷ್ಟಿತ್ತು ಗೊತ್ತೇ?

ಸಾಂಕ್ರಾಮಿಕ ಪ್ರೇರಿತ ಆರ್ಥಿಕ ಕುಸಿತದಿಂದಾಗಿ ಹೆಚ್ಚು ತೀವ್ರವಾಗಿ ಹಾನಿಗೊಳಗಾಗಿದ್ದು ಕೈಗಾರಿಕೆ ಮತ್ತು ಸೇವಾ ವಲಯ. 2020-21ರ ಅವಧಿಯಲ್ಲಿ ಕ್ರಮವಾಗಿ ಶೇ 10 ಮತ್ತು 9.2ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆಯಿದೆ.

ಕೈಗಾರಿಕಾ ವಲಯ ಚೇತರಿಕೆ ಕಾಣುತ್ತಿದ್ದರೂ ಬೆಳವಣಿಗೆ ಇನ್ನೂ ವಿಶಾಲ ವ್ಯಾಪ್ತಿಯಲ್ಲಿ ಇಲ್ಲ. ಲಾಕ್‌ಡೌನ್ ವೇಳೆ ನಿರ್ಬಂಧಿತವಾದ ಬೇಡಿಕೆಯ ಪರಿಣಾಮವಾಗಿ ಹಬ್ಬದ ಋತುವಿನಲ್ಲಿ ಬಳಕೆಯ ಚಟುವಟಿಕೆಯು ಉತ್ತೇಜನ ಚೇತರಿಕೆ ಕಂಡಿದೆ. ಆದರೆ, ಅದನ್ನು ಉಳಿಸಿಕೊಳ್ಳುವುದು ಈಗ ಬಹು ಮುಖ್ಯವಾಗಿದೆ ಎಂದು ತಿಳಿಸಿದೆ.

ಪ್ರವಾಸೋದ್ಯಮ, ಆತಿಥ್ಯ, ಮನರಂಜನೆ, ಶಿಕ್ಷಣ, ಮತ್ತು ಆರೋಗ್ಯದಂತಹ ಸೇವಾ ಕ್ಷೇತ್ರಗಳು ಇನ್ನೂ ಸಾಮಾನ್ಯತೆ ಕಾಣುತ್ತಿಲ್ಲ ಎಂದಿದೆ.

ತ್ರೈಮಾಸಿಕ ಸರಾಸರಿ ಮುನ್ಸೂಚನೆಗಳು 2020-21ರ ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 1.3ರಷ್ಟು ಸಂಕುಚಿತಗೊಳ್ಳಲಿದೆ. ನಾಲ್ಕನೇ ತ್ರೈಮಾಸಿಕದ ವೇಳೆಗೆ 0.5 ಪ್ರತಿಶತದಷ್ಟು ಬೆಳವಣಿಗೆಯೊಂದಿಗೆ ಸಕಾರಾತ್ಮಕದತ್ತ ಸಾಗಲಿದೆ ಎಂದು ಅಂದಾಜಿಸಿದೆ.

ಸಗಟು ಬೆಲೆ ಹಣದುಬ್ಬರ (ಡಬ್ಲ್ಯುಪಿಐ) ದರವು 2020-21ರಲ್ಲಿ ಸಮತಟ್ಟಾಗಿ ಇರಲಿದೆ. ಸಿಪಿಐ ಆಧಾರಿತ ಹಣದುಬ್ಬರವು 2020-21ರ ಸರಾಸರಿ ಶೇ 6.5ರಷ್ಟಿದೆ. ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ ಶೇ 5.8 ಮತ್ತು 6.6ರಷ್ಟಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ. ಜಿಡಿಪಿ ಅನುಪಾತಕ್ಕೆ ಹಣಕಾಸಿನ ಕೊರತೆಯ ಸರಾಸರಿ ಅಂದಾಜನ್ನು 2020-21ರಲ್ಲಿನ ಶೇ 7.4ರಷ್ಟು ಇದ್ದರೇ ಕನಿಷ್ಠ ಮತ್ತು ಗರಿಷ್ಠ ಶ್ರೇಣಿಯ ಶೇ 7 ಮತ್ತು 8.5ರಷ್ಟು ಹೊಂದಿರಲಿದೆ. 2020-21ರ ಹಣಕಾಸಿನ ಕೊರತೆ ಶೇ 3.5ಕ್ಕೆ ನಿಗದಿಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.