ETV Bharat / business

ಕೊರೊನಾ ಎಫೆಕ್ಟ್​: 11 ವರ್ಷಗಳ ಹಿಂದಿನ ಮಟ್ಟಕ್ಕಿಳಿದ 2019 - 20ರ ಜಿಡಿಪಿ - ಹಣಕಾಸು ವರ್ಷ

ಉತ್ಪಾದನೆ ಹಾಗೂ ನಿರ್ಮಾಣ ಚಟುವಟಿಕೆಗಳಲ್ಲಿನ ಭಾರೀ ಕುಸಿತದ ಪರಿಣಾಮವಾಗಿ 2019-20ರ ಕೊನೆಯ ಜನವರಿ - ಮಾರ್ಚ್​ ನಡುವಿನ 4ನೇ ತ್ರೈಮಾಸಿಕದಲ್ಲಿ ಆರ್ಥಿಕ ದರ ಶೇ 4.1ರಿಂದ ಶೇ 3.1ಕ್ಕೆ ಕುಸಿದಿದೆ ಎಂದು ರಾಷ್ಟ್ರೀಯ ಸಾಂಖಿಕ ಕಚೇರಿ (ಎನ್​ಎಸ್​ಒ) ತನ್ನ ಅಂಕಿ - ಅಂಶಗಳ ಮುಖೇನ ತಿಳಿಸಿದೆ.

India's GDP grows
ಭಾರತದ ಜಿಡಿಪಿ
author img

By

Published : May 29, 2020, 11:24 PM IST

ನವದೆಹಲಿ: ಕೋವಿಡ್​ ಪ್ರೇರೇಪಿತ ಲಾಕ್​ಡೌನ್​ನಿಂದ ಪೂರೈಕ ಸರಪಳಿ ತುಂಡಾಗಿದ್ದು, ಗ್ರಾಹಕರ ಬೇಡಿಕೆ ಮತ್ತು ಖಾಸಗಿ ಹೂಡಿಕೆ ಕ್ಷೀಣಿಸಿದೆ. 2019-20ರ ಕೊನೆಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ 11 ವರ್ಷಗಳಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿ- ಅಂಶಗಳಿಂದ ತಿಳಿದುಬಂದಿದೆ.

ಉತ್ಪಾದನೆ ಹಾಗೂ ನಿರ್ಮಾಣ ಚಟುವಟಿಕೆಗಳಲ್ಲಿನ ಭಾರೀ ಕುಸಿತದ ಪರಿಣಾಮವಾಗಿ 2019-20ರ ಕೊನೆಯ ಜನವರಿ - ಮಾರ್ಚ್​ ನಡುವಿನ 4ನೇ ತ್ರೈಮಾಸಿಕದಲ್ಲಿ ಆರ್ಥಿಕ ದರ ಶೇ 4.1ರಿಂದ ಶೇ 3.1ಕ್ಕೆ ಕುಸಿದಿದೆ ಎಂದು ರಾಷ್ಟ್ರೀಯ ಸಾಂಖಿಕ್ಯ ಕಚೇರಿ (ಎನ್​ಎಸ್​ಒ) ತನ್ನ ಅಂಕಿಅಂಶಗಳ ಮುಖೇನ ತಿಳಿಸಿದೆ.

2019-20ರಲ್ಲಿ ಭಾರತದ ಆರ್ಥಿಕತೆಯು ಶೇ 4.2ರಷ್ಟಾಗಿದ್ದು, 2018-19ರಲ್ಲಿ ಇದು 6.1 ರಷ್ಟಿತ್ತು. ದೇಶದ ಆರ್ಥಿಕತೆಯು 2008-09ರ 11 ವರ್ಷಗಳ ಬಳಿಕ ಶೇ 3.1ಕ್ಕೆ ಇಳಿಕೆಯಾಗಿದೆ.

2019ರ ವಿತ್ತೀಯ ವರ್ಷದಲ್ಲಿನ ಶೇ 6.1ರಿಂದ ಪ್ರಸ್ತುತ ಹಣಕಾಸು ವರ್ಷದಲ್ಲಿ ಶೇ 4.2ಕ್ಕೆ ಜಿಡಿಪಿ ಇಳಿಕೆಯಾಗಿದೆ. ತ್ರೈಮಾಸಿಕಗಳ ವೃದ್ಧಿಯ ದರ ಕ್ರಮವಾಗಿ 2019-20ರ ಪ್ರಥಮ ತ್ರೈಮಾಸಿಕದಲ್ಲಿ ಶೇ 5. 2 , ದ್ವೀತಿಯ ತ್ರೈಮಾಸಿಕದಲ್ಲಿ ಶೇ 4. 4ರಷ್ಟು ಮತ್ತು ತೃತಿಯ ತ್ರೈಮಾಸಿಕದಲ್ಲಿ ಶೇ 4. 1ರಷ್ಟು ಕುಸಿತ ಕಂಡಿದೆ. ಕೊನೆಯ ತ್ರೈಮಾಸಿಕದಲ್ಲೂ ಇಳಿಕೆ ಮುಂದುವರಿದಿದೆ.

ಕಳೆದ ಹಣಕಾಸು ವರ್ಷದಲ್ಲಿ ಜಿಎಸ್​ಟಿಯಂತಹ ಇತರ ಕಾರಣಗಳು ಪರಿಣಾಮ ಬೀರಿದ್ದರೇ ಈ ವರ್ಷದಲ್ಲಿ ನಿಧಾನಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ ಹಾಗೂ ವಿತ್ತೀಯ ವರ್ಷದ ಕೊನೆಯ ಅವಧಿಯಲ್ಲಿ ಸಂಂಭವಿಸಿದ ಕೊರೊನಾ ವೈರಸ್ ಪ್ರೇರೇಪಿತ ಏಕಾಏಕಿ ಲಾಕ್​ಡೌನ್​. ಈ ಎಲ್ಲ ಅಂಶಗಳು ದೇಶಿ ಆರ್ಥಿಕತೆ ವೃದ್ಧಿಯ ಕುಂಠಿತಕ್ಕೆ ಕಾರಣವಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.