ಮುಂಬೈ: ಜನವರಿ 1ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 4.483 ಬಿಲಿಯನ್ ಡಾಲರ್ ಏರಿಕೆಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಅಂಕಿ - ಅಂಶಗಳ ಪ್ರಕಾರ, ಡಿಸೆಂಬರ್ 25ಕ್ಕೆ ಕೊನೆಗೊಂಡ ವಾರದಲ್ಲಿ ಮೀಸಲು ನಿಧಿ ಪ್ರಮಾಣ 580.841 ಬಿಲಿಯನ್‌ನಿಂದ 585.324 ಬಿಲಿಯನ್ ಡಾಲರ್ಗೆ ಏರಿದೆ.
ಭಾರತದ ವಿದೇಶಿ ವಿನಿಮಯ ಸಂಗ್ರಹವು ವಿದೇಶಿ ಕರೆನ್ಸಿ ಸ್ವತ್ತು(ಎಫ್‌ಸಿಎ), ಚಿನ್ನದ ಮೀಸಲು, ವಿಶೇಷ ಡ್ರಾಯಿಂಗ್ ರೈಟ್ಸ್ (ಎಸ್‌ಡಿಆರ್) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗೆ ದೇಶದ ವಿನಿಮಯ ಸ್ಥಾನ ಒಳಗೊಂಡಿದೆ.
ಇದನ್ನೂ ಓದಿ: ಬಜೆಟ್ ತಯಾರಿ, ಲಸಿಕೆ ಖುಷಿಯಲ್ಲಿರುವ ಮೋದಿ ಸರ್ಕಾರ: ₹ 16 ಲಕ್ಷ ಕೋಟಿಯತ್ತ ನೋಡಿ ಎಂದ ತಜ್ಞರು!
ಸಾಪ್ತಾಹಿಕ ಆಧಾರದ ಮೇಲೆ ವಿದೇಶಿ ವಿನಿಮಯ ನಿಕ್ಷೇಪಗಳ ಅತಿದೊಡ್ಡ ಘಟಕವಾದ ಎಫ್‌ಸಿಎಗಳು 4.168 ಬಿಲಿಯನ್‌ನಿಂದ 541.642 ಬಿಲಿಯನ್ ಡಾಲರ್ಗೆ ಹೆಚ್ಚಳವಾಗಿದೆ. ದೇಶದ ಚಿನ್ನದ ಸಂಗ್ರಹದ ಮೌಲ್ಯವು 315 ದಶಲಕ್ಷದಿಂದ 37.026 ಶತಕೋಟಿ ಡಾಲರ್ಗೆ ತಲುಪಿದೆ. ಆದರೂ ಎಸ್‌ಡಿಆರ್ ಮೌಲ್ಯವು 1.510 ಬಿಲಿಯನ್ ಡಾಲರ್ ಆಗಿದೆ. ಐಎಂಎಫ್ನೊಂದಿಗೆ ದೇಶದ ಮೀಸಲು ಸ್ಥಾನವು 5.145 ಬಿಲಿಯನ್ ಡಾಲರ್ನಲ್ಲಿದೆ.